ಶೇ.90 ರಷ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಣೆ*

*ಶೇ.90 ರಷ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಣೆ*

ಶಿವಮೊಗ್ಗ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 90% ಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕ್ರೆಡಿಟ್ ಅಕ್ಸಸ್ ಗ್ರಾಮೀಣ ಲಿಮಿಟೆಡ್ ಹಾಗೂ ಕ್ರೆಡಿಟ್ ಆಕ್ಸೆಸ್ ಇಂಡಿಯಾ ಫೌಂಡೇಶನ್ ವತಿಯಿಂದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್ ಜಿ. ಕೆ. ರವರು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.90ಕಿಂತ ಹೆಚ್ಚು ಅಂಕ ಪಡೆದ 6 ಜನ ವಿಧ್ಯಾರ್ಥಿಗಳಿಗೆ ಪುರಸ್ಕಾರ ವಿತರಿಸಿ ಅಭಿನಂದಿಸಿದರು.
ಸಿಂಚನ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢ ಶಾಲಾ ವಿಭಾಗ, ಮಳಲಿ ಮಕ್ಕಿ ತೀರ್ಥಹಳ್ಳಿ, ಅಜುಂ, ಸರ್ಕಾರಿ ಪ್ರೌಢ ಶಾಲೆ, ಅರೇಹಳ್ಳಿ, ಭದ್ರಾವತಿ, ರಶ್ಮಿ, ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢ ಶಾಲಾ ವಿಭಾಗ, ತೀರ್ಥಹಳ್ಳಿ, ಲಾವಣ್ಯ, ಕರ್ನಾಟಕ ಪಬ್ಲಿಕ್ ಶಾಲೆ, ಆನವಟ್ಟಿ, ಕವನ, ಮಲ್ಲೇಶ್ವರ ಪ್ರೌಢ ಶಾಲೆ, ಮಾರವಳ್ಳಿ, ಶಿಕಾರಿಪುರ ಮತ್ತು ವರುಣ್,ಸರ್ಕಾರಿ ಪ್ರೌಢ ಶಾಲೆ, ಸುರಗೀಹಳ್ಳಿ ಶಿಕಾರಿಪುರ ರವರುಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರವನ್ನು ನೀಡಿ ಎಸ್ ಪಿ ಮಿಥುನ್ ಕುಮಾರ್ ಅಭಿನಂದಿಸಿದರು.
ಮಧುಸೂದನ್ ಎಸ್, ಶಿವಮೊಗ್ಗ ಶಾಖಾ ವ್ಯವಸ್ಥಾಪಕರು, ಕ್ರೆಡಿಟ್ ಅಕ್ಸಸ್ ಗ್ರಾಮೀಣ ಲಿಮಿಟೆಡ್ ಹಾಗೂ ಕ್ರೆಡಿಟ್ ಆಕ್ಸೆಸ್ ಇಂಡಿಯಾ ಫೌಂಡೇಶನ್ ರವರು ಸಿಎಸ್ಆರ್ ಅಡಿಯಲ್ಲಿ ಜಿಲ್ಲಾ ಪೊಲೀಸ್ ಕಛೇರಿಗೆ ವಿಸಿಟರ್ ಚೇರ್ ಗಳು ಮತ್ತು ಅಲ್ಮೇರಾವನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಕ್ರೆಡಿಟ್ ಅಕ್ಸಸ್ ಗ್ರಾಮೀಣ ಲಿಮಿಟೆಡ್ ಹಾಗೂ ಕ್ರೆಡಿಟ್ ಆಕ್ಸೆಸ್ ಇಂಡಿಯಾ ಫೌಂಡೇಶನ್ ನ ರವಿ ಎಸ್ ಎನ್, ಬೆಳಗಾವಿ ವಿಭಾಗದ ವ್ಯವಸ್ಥಾಪಕರು, ಸಚಿನ್ ಕುಮಾರ್ ಎಂ ಆರ್,* ದಾವಣಗೆರೆ ಪ್ರಾದೇಶಿಕ ವ್ಯವಸ್ಥಾಪಕರು, ಗೋಪಾಲ್, ಏರಿಯಾ ಮ್ಯಾನೇಜರ್, ಚಿದಾನಂದ್, ಏರಿಯಾ ಮ್ಯಾನೇಜರ್ ಮತ್ತು ಈರಣ್ಣ, ಏರಿಯಾ ಮ್ಯಾನೇಜರ್ ರವರು ಉಪಸ್ಥಿತರಿದ್ದರು.