ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ; ಶಿವಮೊಗ್ಗ ಜಿಲ್ಲೆಯಲ್ಲಿ ಶೇ.92.12ರಷ್ಟು ಗಣತಿ ಪೂರ್ಣ ರಾಜ್ಯದಲ್ಲಿ ಶೇ.90 ಫಲಿತಾಂಶ ಈಗ 13ಸಾವಿರ ಶಿಕ್ಷಕರ ನೇಮಕಕ್ಕೆ ಸಿದ್ಧತೆ- 2 ವರ್ಷಗಳಲ್ಲಿ 26 ಶಿಕ್ಷಕರ ನೇಮಕ 3000 ಕೋಟಿ ವೆಚ್ಚದಲ್ಲಿ 800 ಕೆಪಿಎಸ್ ಶಾಲೆಗಳ ಆರಂಭ- ಶಿವಮೊಗ್ಗದಲ್ಲಿ ಸಿಎಂ ಸಿದ್ದರಾಮಯ್ಯರಿಂದ ನವೆಂಬರ್ ನಲ್ಲಿ ಅಡಿಗಲ್ಲು
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ;
ಶಿವಮೊಗ್ಗ ಜಿಲ್ಲೆಯಲ್ಲಿ ಶೇ.92.12ರಷ್ಟು ಗಣತಿ ಪೂರ್ಣ
ರಾಜ್ಯದಲ್ಲಿ ಶೇ.90 ಫಲಿತಾಂಶ
ಈಗ 13ಸಾವಿರ ಶಿಕ್ಷಕರ ನೇಮಕಕ್ಕೆ ಸಿದ್ಧತೆ- 2 ವರ್ಷಗಳಲ್ಲಿ 26 ಶಿಕ್ಷಕರ ನೇಮಕ
3000 ಕೋಟಿ ವೆಚ್ಚದಲ್ಲಿ 800 ಕೆಪಿಎಸ್ ಶಾಲೆಗಳ ಆರಂಭ- ಶಿವಮೊಗ್ಗದಲ್ಲಿ ಸಿಎಂ ಸಿದ್ದರಾಮಯ್ಯರಿಂದ ನವೆಂಬರ್ ನಲ್ಲಿ ಅಡಿಗಲ್ಲು

ಆರ್ಥಿಕ, ಸಾಮಾಜಿಕ ಜನಗಣತಿ 92.12 ಶೇ.ಪ್ರಗತಿ
ಶಿಕಾರಿಪುರದಲ್ಲಿ ಶೇ.97.05 ಸಮೀಕ್ಷೆ ನಡೆದಿದೆ. ವಿಜಯೇಂದ್ರ- ರಾಘವೇಂದ್ರ ಅರ್ಥ ಮಾಡಿಕೊಳ್ಳಬೇಕು ಇದನ್ನು.
ಸರ್ಕಾರ ನ್ಯಾಯ ಒದಗಿಸಬೇಕಾದರೆ ಈ ಅಂಕಿಅಂಶಗಳು ಅವಶ್ಯಕ. ಪ್ರತಿ ಹತ್ತು ವರ್ಷಗಳಿಗೊಮ್ಮೆ ಇಂಥ ಸಮೀಕ್ಷೆಗಳು ನಡೆಯಬೇಕು. ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳದವರು ಕೂಡಲೇ ಪಾಲ್ಗೊಳ್ಳಿ. ಸಿಎಂ ಸಿದ್ದರಾಮಯ್ಯ ಅಂದುಕೊಂಡಿದ್ದು ಮಾಡಿದ್ದಾರೆ.
ಸಮೀಕ್ಷೆಯಲ್ಲಿ ಶಿಕ್ಷಕರ ಪಾಲ್ಗೊಳ್ಳುವಿಕೆ ಮುಗಿದಿದೆ. ಕಲಿಕೆಗೆ ತೊಂದರೆಯಾಗದ ರೀತಿಯಲ್ಲಿ ಕ್ರಮ.ಮತವನ್ನೇ ಹಾಕದ ಜನ ಇದಾರೆ. ಪ್ರಜಾಪ್ರಭುತ್ವಕ್ಕೆ ವಿರೋಧವಿದು.
13ಸಾವಿರ ಶಿಕ್ಷಕರನ್ನು ನೇಮಿಸಿಕೊಳ್ಳುವ 23/10/25- 9/11/25ರವರೆಗೆ ನೋಟಿಫಿಕೇಷನ್ ಹೊರಡಿಸಿ ಅರ್ಜಿ ಆಹ್ವಾನಿಸಲಾಗಿದೆ. ಗುಡಿಯಲ್ಲಿ ದೇವರೇ ಇಲ್ಲದಿದ್ದರೆ ಹೇಗೆ? ಶಿಕ್ಷಕರ ನೇಮಕಾತಿ ಮುಖ್ಯ.ಗುಣಮಟ್ಟದ ಶಿಕ್ಷಣಕ್ಕೆ ಈ ಮೂಲಕ ಆದ್ಯತೆ ನೀಡಲಾಗುತ್ತಿದೆ. 4780 ಶಿಕ್ಷಕರ ನೇಮಕ ಬಿಜೆಪಿ ಸರ್ಕಾರದಲ್ಲಿ ನಡೆದಿತ್ತು. ಸಿಎಂ ಸಿದ್ದರಾಮಯ್ಯರಿಗೆ ಅಭಿನಂದಿಸುವೆ. ಟೀಕೆ ಮಾಡಿದ ಬಿಜೆಪಿಯವರಿಗೆ ನಾಚಿಕೆಯಾಗಬೇಕು.ಎರಡು ವರ್ಷಗಳಲ್ಲಿ 26ಸಾವಿರ ಶಿಕ್ಷಕರ ನೇಮಕ ಆಗುತ್ತಿದೆ.
ಇಡೀ ದೇಶದಲ್ಲಿ ಪಾಸ್ ಅಂಕಗಳು 33% ಇತ್ತು. ಕರ್ನಾಟಕದಲ್ಲೂ ಇನ್ನುಮೇಲೆ ಶೇ.33 ಅಂಕ ಪಡೆದರೆ ಪಾಸ್.
ಕರ್ನಾಟಕ ಪಬ್ಲಿಕ್ ಶಾಲೆಗಳು 308 ಇದ್ದವು. ಅಕ್ಷರ ಅವಿಷ್ಕಾರದಲ್ಲಿ 1250 ಕೋಟಿ ಹಣದಲ್ಲಿ 200 kps ಶಾಲೆಗಳು ಸೇರಿದಂತೆ 800 kps ಶಾಲೆಗಳನ್ನು( ಉಚಿತ ಸಾರಿಗೆ, ಮಧ್ಯಾಹ್ನ ಊಟ,ಹಾಲು, ಮೊಟ್ಟೆ, ಬೈ ಲಾಂಗ್ವೇಜ್, 12 ವರ್ಷ ಒಂದೇ ಛಾವಣಿಯ ಕೆಳಗೆ) ತೆರೆಯಲಾಗುತ್ತಿದೆ. ಕನ್ನಡ ಭಾಷೆ ಕಡ್ಡಾಯವಿದ್ದು, ಚಾಯ್ಸ್ ಆಫ್ ಮೀಡಿಯಂ ಇರುತ್ತೆ. 3000 ಕೋಟಿ ವೆಚ್ಚದಲ್ಲಿ 800 ಕೆಪಿಎಸ್ ಶಾಲೆಗಳ ಆರಂಭ. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಉಂಟು ಮಾಡಲಿದೆ.
ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವೆಂಬರ್ ಎರಡನೇ ವಾರ ಕೆಪಿಎಸ್ ಶಾಲೆಗೆ ಅಡಿಗಲ್ಲು ಹಾಕಲಿದ್ದಾರೆ.
ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ. 6ನೇ ಕ್ಲಾಸಿಂದ ಸ್ಕಿಲ್ ಶಿಕ್ಷಣ. ಶಿವಮೊಗ್ಗ ಜಿಲ್ಲೆಗೆ 19 ಕೆಪಿಎಸ್ ಶಾಲೆಗಳು.
ಅ.26 ರಂದು ಎಸ್.ಬಂಗಾರಪ್ಪರವರ 93ನೇ ಜನ್ಮದಿನ. ಎಸ್.ಬಂಗಾರಪ್ಪರ ವಿಚಾರ ವೇದಿಕೆಯಿಂದ ಜನ್ಮದಿನ ಆಚರಣೆ. ಸೊರಬ ಬಂಗಾರ ಧಾಮದಲ್ಲಿ ವಿಶೇಷ ಕಾರ್ಯಕ್ರಮ. ಆಹಾರ ಸಚಿವ ಮುನಿಯಪ್ಪ,ಸಂತೋಷ್ ಲಾಡ್, ಬೇಳೂರು ಗೋಪಾಕೃಷ್ಣ, ಆಳ್ವಾಸ್ ಕಲ್ಚರಲ್ ಟೀಮ್ ಬಂದು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಉಪಸ್ಥಿತಿ;
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್, ಮಾಜಿ ಸಂಸದ ಆಯನೂರು ಮಂಜುನಾಥ್, ಕಲಗೋಡು ರತ್ನಾಕರ್, ಜಿ.ಡಿ.ಮಂಜುನಾಥ್, ಎಸ್.ಟಿ.ಹಾಲಪ್ಪ, ರಮೇಶ್ ಶಂಕರಘಟ್ಟ, ವೈ.ಹೆಚ್.ನಾಗರಾಜ್, ಆದರ್ಶ ಹುಂಚದಕಟ್ಟೆ.