ಕವಿಸಾಲು
01
ಲೋಕಾಯುಕ್ತ ಬಲೆಗೆ ಬಿದ್ದ ಸೊರಬ ಪುರಸಭೆಯ ಕಂದಾಯ ನಿರೀಕ್ಷಕ ವಿನಾಯಕ*
*ಲೋಕಾಯುಕ್ತ ಬಲೆಗೆ ಬಿದ್ದ ಸೊರಬ ಪುರಸಭೆಯ ಕಂದಾಯ ನಿರೀಕ್ಷಕ ವಿನಾಯಕ*
ಸೊರಬ ಪುರಸಭೆಯ ಕಂದಾಯ ನಿರೀಕ್ಷಕ ವಿನಾಯಕ ಬಿನ್ ಗುರುವಯ್ಯ ಮಾ.6 ರ ಇಂದು 40,000₹ ಲಂಚ ಪಡೆಯುವಾಗ ಲೋಕಾಯುಕ್ತರಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ.
ಈತ ಹೊನ್ನಾವರ ವಾಸಿ ಶ್ರೀಮತಿ ಪ್ರತಿಭಾ ಎಂ.ನಾಯ್ಕರಿಗೆ ಖಾಲಿ ನಿವೇಶನಕ್ಕೆ ಸಂಬಂಧಿಸಿದಂತೆ ಕೆಲಸ ಮಾಡಿಕೊಡಲು 50,000₹ ಗಳಿಗೆ ಬೇಡಿಕೆ ಇಟ್ಟಿದ್ದ.ಕೊನೆಗೆ 40,000₹ ಗಳಿಗೆ ಡೀಲ್ ಕುದುರಿತ್ತು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಡಿವೈಎಸ್ ಪಿ ಉಮೇಶ್ ಈಶ್ವರ ನಾಯ್ಕ ಮತ್ತು ತಂಡ ಆರೋಪಿಯನ್ನು ರೆಡ್ ಹ್ಯಾಂಡಾಗಿ ಹಿಡಿದು ಜೈಲು ಕಂಬಿಗಳ ಹಿಂದೆ ಕಳಿಸಿದೆ.