*ತುಂಗಾ ಪ್ರೌಢಶಾಲೆ ವಿದ್ಯಾನಗರದ ಶಾಲೆಗೆ ಶೇಕಡ 100% ರಷ್ಟು ಫಲಿತಾಂಶ*

*ತುಂಗಾ ಪ್ರೌಢಶಾಲೆ ವಿದ್ಯಾನಗರದ ಶಾಲೆಗೆ ಶೇಕಡ 100% ರಷ್ಟು ಫಲಿತಾಂಶ*

ಶಿವಮೊಗ್ಗ:- ಶಿವಮೊಗ್ಗ ನಗರದ ವಿದ್ಯಾನಗರದಲ್ಲಿರುವ ತುಂಗಾ ಪ್ರೌಢಶಾಲೆಯಲ್ಲಿ 29 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಇಬ್ಬರು ವಿದ್ಯಾರ್ಥಿಗಳು 500ಕ್ಕೂ ಅಧಿಕ ಅಂಕ ಪಡೆದಿದ್ದಾರೆ.

20 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. 5 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಕೂಡ ಉತ್ತೀರ್ಣರಾಗಿ 100ರಷ್ಟು ಫಲಿತಾಂಶವನ್ನು ದಾಖಲಿಸಿದೆ. ಶಾಲೆಯ ಗುಣಾತ್ಮಕ ಶಿಕ್ಷಣದ ಫಲಿತಾಂಶ A ಗ್ರೇಡನ್ನು ಪಡೆದಿದೆ.

ಈ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಡಾ.ಶ್ರೀನಿವಾಸ್ ಕರಿಯಣ್ಣನವರು ಮತ್ತು ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.