ಶಿಕ್ಷಣ ಸಚಿವ ಮಧು ಬಂಗಾರಪ್ಪರ ನಕಲಿ ಆಪ್ತ ಸಹಾಯಕನನ್ನು ಬೇಟೆಯಾಡಿದ ಶಿವಮೊಗ್ಗ ಪೊಲೀಸರು* *ಸರ್ಕಾರಿ ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚಿಸುತ್ತಿದ್ದ ಮೈಸೂರು ಮೂಲದ ಆರೋಪಿ* *ಶಿವಮೊಗ್ಗದ ಯುವ ಕಾಂಗ್ರೆಸ್ ಮುಖಂಡ ಗಿರೀಶ್ ನೀಡಿದ ದೂರಿನ ಮೇಲೆ ಒಂದೇ ದಿನದಲ್ಲಿ ಅರೆಸ್ಟ್ ಆದ ಆರೋಪಿ!*

*ಶಿಕ್ಷಣ ಸಚಿವ ಮಧು ಬಂಗಾರಪ್ಪರ ನಕಲಿ ಆಪ್ತ ಸಹಾಯಕನನ್ನು ಬೇಟೆಯಾಡಿದ ಶಿವಮೊಗ್ಗ ಪೊಲೀಸರು*

*ಸರ್ಕಾರಿ ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚಿಸುತ್ತಿದ್ದ ಮೈಸೂರು ಮೂಲದ ಆರೋಪಿ*

*ಶಿವಮೊಗ್ಗದ ಯುವ ಕಾಂಗ್ರೆಸ್ ಮುಖಂಡ ಗಿರೀಶ್ ನೀಡಿದ ದೂರಿನ ಮೇಲೆ ಒಂದೇ ದಿನದಲ್ಲಿ ಅರೆಸ್ಟ್ ಆದ ಆರೋಪಿ!*

ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪರವರ ಆಪ್ತ ಸಹಾಯಕನೆಂದು ಹೇಳಿಕೊಂಡು ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ ಮೈಸೂರು ಮೂಲದ ವ್ಯಕ್ತಿಯನ್ನು ಶಿವಮೊಗ್ಗದ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೊಪ್ಪಿಸಿದ ಘಟನೆ ನಡೆದಿದೆ.

ಶಿವಮೊಗ್ಗದ ಯುವ ಕಾಂಗ್ರೆಸ್ ಮುಖಂಡ ಬೊಮ್ಮನ ಕಟ್ಟೆ ವಾಸಿ ಆರ್.ಗಿರೀಶ್ ಕಳೆದ ಆಗಸ್ಟ್ 22ರಂದು ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ರಘುನಾಥ್ ಎಂಬ ವ್ಯಕ್ತಿ ಕಳೆದ 6 ತಿಂಗಳಿಂದ ಸಚಿವ ಮಧು ಬಂಗಾರಪ್ಪರ ಪಿಎ ಎಂದು ಹೇಳಿಕೊಂಡು ಸರ್ಕಾರಿ ಕೆಲಸದ ಆಸೆ ತೋರಿಸಿ ವಂಚಿಸುತ್ತಿದ್ದಾನೆಂದು ದೂರಿನಲ್ಲಿ ವಿವರಿಸಿದ್ದರು.

ಈ ಸಂಬಂಧ ವಿಶೇಷ ತಂಡ ರಚಿಸಿದ್ದ ಎಸ್ ಪಿ ಮಿಥುನ್ ಕುಮಾರ್ ರವರು ದೂರು ಬಂದ ದಿನದಂದೇ ಪ್ರಕರಣದ ಆರೋಪಿ 36 ವರ್ಷದ ಮೈಸೂರಿನ ರಾಮಕೃಷ್ಣ ನಗರದ ವಾಸಿ ರಘುನಾಥ್ ಎಸ್ ವಿ ಎನ್ ನನ್ನು ಬಂಧಿಸಿ ನ್ಯಾಯಾಂಗ ವಶಕ್ಕೊಪ್ಪಿಸಿದ್ದಾರೆ.

ಎಸ್ ಪಿ ಮಿಥುನ್ ಕುಮಾರ್ ನಿರ್ದೇಶನದಲ್ಲಿ
ಆರೋಪಿ ಪತ್ತೆ ಹಚ್ಚುವ ತಂಡ ರಚಿಸಲಾಗಿತ್ತು. ತಂಡದಲ್ಲಿ ಹೆಚ್ಚುವರಿ ಎಸ್ ಪಿ ಗಳಾದ ಎ.ಜಿ.ಕಾರ್ಯಪ್ಪ, ಎಸ್.ರಮೇಶ್ ಕುಮಾರ್, ಡಿವೈಎಸ್ ಪಿ ಸಂಜೀವ್ ಕುಮಾರ್ ಮಾರ್ಗದರ್ಶನದಲ್ಲಿ ಜಯನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಹೆಚ್.ಎಂ.ಸಿದ್ದೇಗೌಡ, ಪಿಎಸ್ ಐ ಬಿ.ಆರ್ . ಕೋಮಲ, ಎ ಎಸ್ ಐ ಸಿ.ಆರ್.ಕರಿಬಸಪ್ಪ, ಸಿಬ್ಬಂದಿಗಳಾದ ನಾಗರಾಜ, ವಸಂತ, ಸಚಿನ್, ವೀರೇಶ್ ಇದ್ದರು.