ಕೊಲೆ ಮಾಡಿ ನದಿಗೆ ಎಸೆದ ಪ್ರಕರಣ* *ಭದ್ರಾವತಿಯ ಲಕ್ಷ್ಮಿ ಮತ್ತು ಕೃಷ್ಣಮೂರ್ತಿಗೆ ಜೀವಾವಧಿ ಶಿಕ್ಷೆ* *ಮತ್ತೊಬ್ಬ ಆರೋಪಿ ಶಿವರಾಜುಗೆ 7 ವರ್ಷ ಶಿಕ್ಷೆ ವಿಧಿಸಿದ ಶಿವಮೊಗ್ಗದ ನ್ಯಾಯಾಲಯ*
*ಕೊಲೆ ಮಾಡಿ ನದಿಗೆ ಎಸೆದ ಪ್ರಕರಣ*
*ಭದ್ರಾವತಿಯ ಲಕ್ಷ್ಮಿ ಮತ್ತು ಕೃಷ್ಣಮೂರ್ತಿಗೆ ಜೀವಾವಧಿ ಶಿಕ್ಷೆ*
*ಮತ್ತೊಬ್ಬ ಆರೋಪಿ ಶಿವರಾಜುಗೆ 7 ವರ್ಷ ಶಿಕ್ಷೆ ವಿಧಿಸಿದ ಶಿವಮೊಗ್ಗದ ನ್ಯಾಯಾಲಯ*

ಎಜಾಜ್ ಅಹಮ್ಮದ್ ರವರ ಸಹೋದರ ಇಮ್ತಿಯಾಜ್ ಅಹಮ್ಮದ್ ಆರೋಪಿ ಶ್ರೀಮತಿ ಲಕ್ಷ್ಮಿಯವರೊಂದಿಗೆ ಕಳೆದ 5 ವರ್ಷಗಳ ಹಿಂದೆ ಗುಲ್ಬರ್ಗದಲ್ಲಿ ರಿಜಿಸ್ಟರ್ ಮದುವೆಯಾಗಿದ್ದು, 2016 ಜುಲೈ 7 ರಂದು ಆಕೆಯ ಗಂಡನನ್ನು ಕಬ್ಬಿಣದ ರಾಡ್ ನಿಂದ ಹೊಡೆದು ಸಾಯಿಸಿ ಶಿವರಾಜು ಹಾಗೂ ಕೃಷ್ಣಮೂರ್ತಿ ಎಂಬುವವರ ಸಹಾಯದಿಂದ ಮೃತದೇಹವನ್ನು ಹೊಳೆಗೆ ಹಾಕಲಾಗಿತ್ತು.
ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0099/2016 ಕಲಂ 302, 201ಸಹಿತ 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಪ್ರಕರಣದಲ್ಲಿ ಆಗಿನ ತನಿಖಾಧಿಕಾರಿಗಳಾದ ಪ್ರಭು ಬಿ ಸೂರಿನ್ ಸಿ.ಪಿ.ಐ ಮತ್ತು ಚಂದ್ರ ಶೇಖರ್ ಟಿ. ಕೆ. (ಸಿಪಿಐ ಭದ್ರಾವತಿ ನಗರ ವೃತ್ತ) ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ರತ್ನಮ್ಮ ಪಿ. ಪ್ರಕರಣದ ವಾದ ಮಂಡಿಸಿದ್ದು, ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗ (ಪೀಠಾಸೀನ ಭದ್ರಾವತಿ)ಯಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿತರ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ, ನ್ಯಾಯಾಧೀಶರಾದ ಶ್ರೀಮತಿ ಇಂದಿರಾ ಮೈಲಾಸ್ವಾಮಿ ಚೆಟ್ಟಿಯಾರ್* ರವರು ಇಂದು ಆರೋಪಿಗಳಾದ 1) ಲಕ್ಷ್ಮೀ (29) ವರ್ಷ ಎನ್ ಟಿ ಬಿ ರಸ್ತೆ ಜನ್ನಾಪುರ ಭದ್ರಾವತಿ, 2) ಕೃಷ್ಣಮೂರ್ತಿ (30) ವರ್ಷ ಎನ್ ಟಿ ಬಿ ರಸ್ತೆ ಜನ್ನಾಪುರ ಭದ್ರಾವತಿ ರವರಿಗೆ ಮರಣದಂಡನೆಯನ್ನು ಮತ್ತು 3) ಶಿವರಾಜು 32 ವರ್ಷ ಎನ್ ಟಿ ಬಿ ರಸ್ತೆ ಜನ್ನಾಪುರ ಭದ್ರಾವತಿ ಈತನಿಗೆ 7 ವರ್ಷ ಶಿಕ್ಷೆಯನ್ನು ವಿಧಿಸಿ ಆದೇಶಿಸಿದೆ.