*ಮುಬಾರಕ್, ನಯಾಝ್, ಬಚ್ಚಾ ನಯಾಝ್ ಮತ್ತಿರರಿಂದ ಆಟೋ ಡ್ರೈವರ್ ಗಳ ಮೇಲೆ ಹಲ್ಲೆ!* *ಗಾಂಜಾ ಕೂಂಬಿಂಗ್ ನಡೆಯೋ ಸಂದರ್ಭದಲ್ಲೇ ಇದೇನಿದು ಹಲ್ಲೇ ಕೇಸು!* *ಗಮನಿಸಿ, ಗಂಭೀರ ಕ್ರಮ ತೆಗೆದುಕೊಳ್ಳುವುದೇ ಪೊಲೀಸ್ ಇಲಾಖೆ?!*

*ಮುಬಾರಕ್, ನಯಾಝ್, ಬಚ್ಚಾ ನಯಾಝ್ ಮತ್ತಿರರಿಂದ ಆಟೋ ಡ್ರೈವರ್ ಗಳ ಮೇಲೆ ಹಲ್ಲೆ!*

*ಗಾಂಜಾ ಕೂಂಬಿಂಗ್ ನಡೆಯೋ ಸಂದರ್ಭದಲ್ಲೇ ಇದೇನಿದು ಹಲ್ಲೇ ಕೇಸು!*

*ಗಮನಿಸಿ, ಗಂಭೀರ ಕ್ರಮ ತೆಗೆದುಕೊಳ್ಳುವುದೇ ಪೊಲೀಸ್ ಇಲಾಖೆ?!*

ಶಿವಮೊಗ್ಗದ ಸರ್ಕಾರಿ ಬಸ್ ನಿಲ್ದಾಣದ ಬಳಿಯಲ್ಲಿ ಮಲ್ನಾಡ್ ಆಟೋ ನಿಲ್ದಾಣವಿದ್ದು, ಇಲ್ಲಿ ಈ ಆಟೋ ಚಾಲಕರ ಮೇಲೆ ಗಾಂಜಾ ಸೇವಕರು ಹಲ್ಲೆ ಮಾಡಿದ್ದಾರೆಂದು ದೊಡ್ಡಪೇಟೆ ಠಾಣೆಗೆ ದೂರು ಬಂದಿದೆ.

ನ.22 ರ ಮಧ್ಯಾಹ್ನ 2 ಗಂಟೆ ಹೊತ್ತಿಗೆ ಬಸ್ ನಿಲ್ದಾಣದ ಬಳಿ ಇರುವ ಮಲ್ನಾಡ್ ಆಟೋ ನಿಲ್ದಾಣಕ್ಕೆ ಈ ಆರೋಪಿಗಳು ಬಂದಿದ್ದಾರೆ. ನಿಲ್ಲುವ ಬಸ್ ಗಳ ಹತ್ತಿರವೇ ಹೋಗಿ ಬಚ್ಚಾ ಮುಬಾರಕ್, ನಯಾಝ್, ಬಚ್ಚಾ ನಯಾಝ್,ಆಫ್ತಾಬ್, ನಯೀಂ ಪ್ರಯಾಣಿಕರನ್ನು ತಮ್ಮ ಆಟೋಗಳಲ್ಲಿ ಕರೆದೊಯ್ಯುತ್ತಿದ್ದರು.

ಆಗ, ಹೀಗೆಲ್ಲ ಬಂದು ಪ್ರಯಾಣಿಕರನ್ನು ಕರೆದುಕೊಂಡು ಹೋಗುವುದಕ್ಕೆ ನೀವ್ಯಾರು? ಅಂತ ದೂರುದಾರರು ಕೇಳಿದ್ದಾರೆ. ಹೀಗೆ ಕೇಳಿದ್ದಕ್ಕೆ ಅವಾಚ್ಯವಾಗಿ ಬೈದ ಅವರು, ಮಧ್ಯಾಹ್ನ 3 ಗಂಟೆ ಹೊತ್ತಿಗೆ ಮನೆಗೆ ಊಟಕ್ಕೆ ಹೋಗುವಾಗ ಅಮ್ಜದ್, ಮುಬಾರಕ್ ಆಟೋ ತಡೆದು ನಿಲ್ಲಿಸಿದ್ದಾರೆ.

ಅಲ್ಲಿ ಗಲಾಟೆ ಮಾಡಿ ಹಲ್ಲೆ ಮಾಡಿದ್ದಾರೆ. ಇನ್ನೊಮ್ಮೆ ತಂಟೆಗೆ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಹಲ್ಲೆಗೊಳಗಾದ ಮಿಳಘಟ್ಟದ ಅಮ್ಜದ್ ಮತ್ತು ಮುಬಾರಕ್ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿ ದೂರು ನೀಡಿದ್ದಾರೆ.