*ಎಸ್ ಬಿ ಡ್ಯೂಟಿಯಲ್ಲಿರೋ ಬಿಲ್ಲಳ್ಳಿ ಮತ್ತು ಹೊಳೆಹೊನ್ನೂರು ಮಾಫಿಯಾ!* *ಬಹಿರಂಗವಾಗುವುದೇ ಕಲೆಕ್ಷನ್ನು ಮತ್ತು ಕನೆಕ್ಷನ್ನಿನ್ನ ಭೀಕರ ಲೋಕ*
*ಎಸ್ ಬಿ ಡ್ಯೂಟಿಯಲ್ಲಿರೋ ಬಿಲ್ಲಳ್ಳಿ ಮತ್ತು ಹೊಳೆಹೊನ್ನೂರು ಮಾಫಿಯಾ!*
*ಬಹಿರಂಗವಾಗುವುದೇ ಕಲೆಕ್ಷನ್ನು ಮತ್ತು ಕನೆಕ್ಷನ್ನಿನ್ನ ಭೀಕರ ಲೋಕ*
ಹೊಳೆಹೊನ್ನೂರು ಪೊಲೀಸ್ ಠಾಣೆ ಈಗ ಶಿವಮೊಗ್ಗ ಜಿಲ್ಲೆಯಲ್ಲೇ ಮಾಫಿಯಾ ಕೇಂದ್ರ. ಈ ಕೇಂದ್ರದ ವಿರುದ್ಧ ಏನೇ ಬರೆದರೂ ನಾನಿದ್ದೀನಿ ಅಂತ ರೆಕ್ಕೆ ಅರಳಿಸಿ ಬರುವ ವ್ಯಕ್ತಿ ಹೊಳೆಹೊನ್ನೂರು ಪೊಲೀಸ್ ಠಾಣೆಯ ಮಟ್ಟಿಗೆ ಮೆ.ಬಿಲ್ಲಳ್ಳಿ!
ಈತ ಅಂತ ಏಕವಚನದಲ್ಲೇ ಸಂಭೋದಿಸಲು ಕೆಲ ಕಾರಣಗಳಿವೆ. ಈತ ಶಿವಮೊಗ್ಗದ ಕೆಲ ಠಾಣೆಗಳಲ್ಲಿದ್ದಾಗಲೇ ಜಾತಿ ಹಿಡಕೊಂಡು ಆಟವಾಡಲು ಹೋದ ವ್ಯಕ್ತಿ.
ಹೊಳೆ ಹೊನ್ನೂರು ಠಾಣಾ ವ್ಯಾಪ್ತಿಯಲ್ಲಿ ಅಕ್ರಮಗಳು ನಡೆಯುತ್ತಿದ್ದರೂ ಅದಕ್ಕೆ ನೆರಳಾಗಿ ನಿಂತಂತೆ ವರ್ತಿಸುತ್ತಿರುವವರು ಹೊಳೆಹೊನ್ನೂರು ಪೊಲೀಸ್ ಠಾಣೆಯ ಕೆಲ ಪ್ರಮುಖರು.
ನಾನು ಮುಸ್ಲೀಮನೆಂದು ಅಸ್ಪಷ್ಟವಾಗಿ ತಿಳಿದುಕೊಂಡಂತಿರೋ ಇಲಾಖೆ ಬಿಲ್ಲಳ್ಳಿಗೆ ಸುಪಾರಿ ಕೊಟ್ಟಿರೋ ಮಾಹಿತಿ ಇದ್ದು, ನಾಳೆಯಿಂದಲೋ ಈಗಿಂದಲೋ ಹೆಚ್ಚೂ ಕಡಿಮೆ ಆದರೆ ಅದು ಹೊಳೆಹೊನ್ನೂರು ಠಾಣೆಯ ಖಾವಿಂದರಿಂದಲೋ, ಅವರಿಂದ ಪ್ರೇರೇಪಿತ ತೂರುಬಿಲ್ಲೆ, ಅಂದರ್ ಬಾಹರ್, ಅಕ್ರಮ ಮರಳು ಮಾಫಿಯಾದವರಿಂದಲೋ, ಅವರನ್ನೆಲ್ಲ ಪ್ರೇರೇಪಿಸಿ ಸಮಸ್ಯೆ ಬಗೆಹರಿಸುತ್ತೇನೆಂದು ಪುಟಾಲು ಬಿಟ್ ಕೊಂಡು ಓಡಾಡುತ್ತಿರುವ ಬಿಲ್ಲಳ್ಳಿಯಿಂದಲೋ…ತೊಂದರೆಗಳಾಗಬಹುದು…
ಈತನಿಂದಲೇ ತನಿಖೆ ಆರಂಭಿಸಿದರೆ ಇಡೀ ಹೊಳೆಹೊನ್ನೂರು ಠಾಣಾ ವ್ಯಾಪ್ತಿಯ ದಂಧೆಗಳ ಕಲೆಕ್ಷನ್ನು ಮತ್ತು ಕನೆಕ್ಷನ್ನು ಬಹಿರಂಗವಾಗುವುದರಲ್ಲಿ ಅನುಮಾನವಿಲ್ಲ!


