*ಕವಿಸಾಲು*
(30/05/2026)
1.
ಎಲ್ಲರ
ಅಸಲಿ ಚಹರೆಗಳನ್ನು
ತೋರಿಸಲೇಬೇಡ ಹೃದಯವೇ…
ಒಂದಿಷ್ಟು ಜನರನ್ನು
ತುಂಬಾ ಗೌರವಿಸುತ್ತೇನೆ
ನಾನು!
2.
ಯುದ್ಧಕ್ಕೆ ಸಿದ್ಧವಾದ
ಕುದುರೆ
ಮದುಮಗನ ಕೂರಿಸಿಕೊಂಡು
ಕುಣಿಯುವುದಿಲ್ಲ…
3.
ಜಗತ್ತನ್ನು
ಗೆಲ್ಲುತ್ತಾರಾದರೂ
ಸಾವು
ಸೋಲಿಸಿಕೊಳ್ಳುವುದಿಲ್ಲ
ಅಂದಿಗೂ ಇಂದಿಗೂ ಎಂದೆಂದಿಗೂ…
– *ಶಿ.ಜು.ಪಾಶ*
(8050112067)