*ನೂತನ ಕೆಪಿಸಿಸಿ ಅಧ್ಯಕ್ಷ ರನ್ನು ಅಭಿನಂದಿಸಿದ ಮಧು ಬಂಗಾರಪ್ಪ*

*ನೂತನ ಕೆಪಿಸಿಸಿ ಅಧ್ಯಕ್ಷ ರನ್ನು ಅಭಿನಂದಿಸಿದ ಮಧು ಬಂಗಾರಪ್ಪ*

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಆತ್ಮೀಯರು ಹಿರಿಯರಾದ ಬಿ.ಕೆ.ಹರಿಪ್ರಸಾದ್ ಅವರನ್ನು ಮಾಜಿ ಸಚಿವ ಎಸ್, ಮಧು ಬಂಗಾರಪ್ಪನವರು ಅವರ ಸದಾಶಿವ ನಗರದ ಮನೆಯಲ್ಲಿ ಭೇಟಿಯಾಗಿ ಅಭಿನಂದಿಸಿದರು.
ನಮಗೆಲ್ಲಾ ಮಾರ್ಗದರ್ಶಕರಾದ ಪಕ್ಷದ ಹಿರಿಯ ನಾಯಕರಾದ ಬಿ.ಕೆ. ಹರಿಪ್ರಸಾದ್‌ ನಮ್ಮ ಪಕ್ಷದ ಸಾರಥ್ಯ ವಹಿಸುತ್ತಿರುವುದು ಸಂತೋಷದ ವಿಷಯ. ಅವರ ಸೈದ್ಧಾಂತಿಕ ಬದ್ಧತೆ, ಪಕ್ಷ ನಿಷ್ಠೆ ಮತ್ತು ಹೋರಾಟದ ಬದುಕು ನಮಗೆಲ್ಲಾ ಸದಾ ಆದರ್ಶ ಪ್ರೇರಣೆ ಎಂದು ತಿಳಿಸಿದ ಅವರು.
ದೀರ್ಘಕಾಲದ ರಾಜಕೀಯ ಅನುಭವ ಹೊಂದಿರುವ ಅವರು ನಮ್ಮ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಬಲಪಡಿಸಲಿದ್ದು, ಅವರಿಗೆ ನಮ್ಮೆಲ್ಲಾ ಸಹಕಾರ ನೀಡುವುದಾಗಿ ಶುಭ ಹಾರೈಸಿದರು.