ವಿನೋಬನಗರ ಪೊಲೀಸ್ ಸ್ಟೇಷನ್ನಲ್ಲಿ ಸಿಪಿಐ ಚಂದ್ರಕಲಾ ವಿವಾದಂ!*ದುಡ್ಡು ಕೊಟ್ರೆ ಜಡ್ಜ್ ಕೂಡ ಬೇಲ್ ಕೊಡ್ತಾರೆ ಅಂದಿದ್ದ ವಿನೋಬನಗರ ಪೊಲೀಸ್ ಇನ್ಸ್ ಪೆಕ್ಟರ್ ವಿರುದ್ಧ ವಿಚಾರಣೆಗೆ ಆದೇಶ*

ವಿನೋಬನಗರ ಪೊಲೀಸ್ ಸ್ಟೇಷನ್ನಲ್ಲಿ ಸಿಪಿಐ ಚಂದ್ರಕಲಾ ವಿವಾದಂ!

*ದುಡ್ಡು ಕೊಟ್ರೆ ಜಡ್ಜ್ ಕೂಡ ಬೇಲ್ ಕೊಡ್ತಾರೆ ಅಂದಿದ್ದ ವಿನೋಬನಗರ ಪೊಲೀಸ್ ಇನ್ಸ್ ಪೆಕ್ಟರ್ ವಿರುದ್ಧ ವಿಚಾರಣೆಗೆ ಆದೇಶ*

ದುಡ್ಡು ಕೊಟ್ಟರೇ ಜಡ್ಜ್ ಜಾಮೀನು ನೀಡುತ್ತಾರೆ ಎಂಬ ಹೇಳಿಕೆ ನೀಡಿದ ಇನ್ಸ್‌ಪೆಕ್ಟರ್ ಚಂದ್ರಕಲಾ ವಿರುದ್ಧ ವಿಚಾರಣೆಗೆ ಆದೇಶ ಹೊರಡಿಸಲಾಗಿದೆ. ವಿನೋಬ ನಗರ ಠಾಣೆ ಇನ್ಸ್‌ಪೆಕ್ಟರ್ ಚಂದ್ರಕಲಾ ಅವರು ಲಕ್ಷಗಟ್ಟಲೆ ದುಡ್ಡು ಕೊಟ್ಟರೆ ಜಡ್ಜ್ ಕೂಡ ಬೇಲ್ ನೀಡುತ್ತಾರೆ ಅಂತ ಫೋನಿನಲ್ಲಿ ಮಾತಾಡಿರೋ ಆಡಿಯೋವೊಂದು ವೈರಲ್​ ಆಗಿತ್ತು. ಅಲ್ಲದೇ ಈ ಇಬ್ಬರ ಆಡಿಯೋ ನ್ಯಾಯಾಂಗ ಹಾಗೂ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಅಡಕೆ ಮಂಡಿ ಮಾಲೀಕ‌ ಮಂಜುನಾಥ ಗೌಡ ಎಂಬುವವರ ಜೊತೆ ಇನ್ಸ್‌ಪೆಕ್ಟರ್ ಚಂದ್ರಕಲಾ ಮಾತನಾಡುವ ಸಂಭಾಷಣೆ ವೈರಲ್​ ಆದ ಬಳಿಕ ಅವರನ್ನು ಪೂರ್ವ ವಲಯ ಐಜಿಪಿ ಡಾ.ತ್ಯಾಗರಾಜನ್ ಅವರು ವಿಚಾರಣೆಗೆ ಬರುವಂತೆ ಆದೇಶಿಸಿದ್ದಾರೆ. ಮಂಜುನಾಥ ಗೌಡ ಎಂಬುವವರು ತಮ್ಮ ಮಂಡಿಯಲ್ಲಿ ನಡೆದಿದ್ದ ಹಣದ ವಂಚನೆ ಕುರಿತು ಠಾಣೆಗೆ ದೂರು ನೀಡಿದ್ದರು. ಜೊತೆಗೆ ವಂಚಕರು ಬೇಲ್ ಮೇಲೆ ಓಡಾಡುತ್ತಿದ್ದಾರೆ ಎಂದು ಹೇಳಿದ್ದರು.

ಈ ವೇಳೆ ವಿನೋಬ ನಗರ ಠಾಣೆ ಇನ್ಸ್‌ಪೆಕ್ಟರ್ ಚಂದ್ರಕಲಾ ಲಕ್ಷಗಟ್ಟಲೆ ದುಡ್ಡು ಕೊಟ್ಟರೆ ಜಡ್ಜ್ ಸಹ ಬೇಲ್ ನೀಡುತ್ತಾರೆ ಅಂತ ಹೇಳಿದ್ದರು. ಈ ಕುರಿತು ನ್ಯೂಸ್​ಫಸ್ಟ್ ಚಾನೆಲ್ ವಿಸ್ತ್ರತವಾಗಿ​ ವರದಿ ಮಾಡಿತ್ತು. ವರದಿ ಮಾಡಿದ್ದ ಬೆನ್ನಲ್ಲೇ ಇನ್ಸ್‌ಪೆಕ್ಟರ್ ಚಂದ್ರಕಲಾ ಮಾತನ್ನು ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಾಧೀಶರು, ಎಸ್ಪಿಯ ಗಮನಕ್ಕೆ ತಂದು ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ನ್ಯಾಯಾಲಯದ ಸೂಚನೆ ಹಿನ್ನೆಲೆಯಲ್ಲಿ ಇಲಾಖೆ ಇನ್ಸ್‌ಪೆಕ್ಟರ್ ಚಂದ್ರಕಲಾಗೆ ಶೋ ಕಾಸ್ ನೋಟಿಸ್ ನೀಡಿದ್ದಾರೆ. ಇನ್ನು, ಐಜಿಪಿ ತ್ಯಾಗರಾಜನ್ ಅವರು ಪತ್ರ ತಲುಪಿದ 7 ದಿನದೊಳಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದಾರೆ. ಹೀಗಾಗಿ ಈ ಕೇಸ್​ ಸಂಬಂಧ ವಿಚಾರಣಾಧಿಕಾರಿಯಾಗಿ ಶಿವಮೊಗ್ಗ ಉಪ ವಿಭಾಗದ 1 ಡಿಎಸ್ಪಿಯನ್ನು ನೇಮಕ ಮಾಡಲಾಗಿದೆ.