ಉದ್ಘಾಟನೆ; ಆಯುಕ್ತೆ ಶ್ರೀಮತಿ ಕವಿತಾ ಯೋಗಪ್ಪನವರ್ಗಮನ ಸೆಳೆದ ಮಹಿಳಾ ದಸರಾ; ಮಹಿಳಾ ದರ್ಬಾರಲ್ಲಿ ವಿವಿಧ ಸ್ಪರ್ಧೆ…

ಉದ್ಘಾಟನೆ; ಆಯುಕ್ತೆ ಶ್ರೀಮತಿ ಕವಿತಾ ಯೋಗಪ್ಪನವರ್

ಗಮನ ಸೆಳೆದ ಮಹಿಳಾ ದಸರಾ;
ಮಹಿಳಾ ದರ್ಬಾರಲ್ಲಿ ವಿವಿಧ ಸ್ಪರ್ಧೆ…

ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ಬುಧವಾರವಾದ ಇಂದು ಬೆಳಿಗ್ಗೆ ಇಲ್ಲಿನ ಎನ್ ಡಿ ವಿ ಹಾಸ್ಟೆಲ್ ಮೈದಾನದಲ್ಲಿ ಆಯುಕ್ತೆ ಶ್ರೀಮತಿ ಕವಿತಾ ಯೋಗಪ್ಪನವರ್ ಮಹಿಳಾ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಈ ಕ್ರೀಡಾಕೂಟದಲ್ಲಿ ಪಾಲಿಕೆ ವ್ಯಾಪ್ತಿಯ ಸುಮಾರು ನೂರಕ್ಕೂ ಹೆಚ್ಚಿನ ಮಹಿಳೆಯರು ಪಾಲ್ಗೊಂಡು ರಂಗೇರಿಸಿದರು. ರಂಗೋಲಿ ಸ್ಪರ್ಧೆ, ಥ್ರೋಬಾಲ್, ಹಗ್ಗ ಜಗ್ಗಾಟ, ಪಾಸಿಂಗ್ ದ ಬಾಲ್, ಮ್ಯೂಸಿಕಲ್ ಚೇರ್ ಆಟಗಳಲ್ಲಿ ಹೆಣ್ಣುಮಕ್ಕಳು ತೊಡಗಿಸಿಕೊಂಡು ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಮಹಿಳಾ ದಸರಾ ಕಾರ್ಯದರ್ಶಿ ಅನುಪಮಾ, ಇ ಇ ಗಳಾದ ಪುಷ್ಪ, ಲಕ್ಷ್ಮೀ, ಸಿಡಿಎಸ್ ಅಧ್ಯಕ್ಷೆ ಯಶೋಧ, ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.