*ಶಿವಮೊಗ್ಗ ಜಿಲ್ಲಾ N S U I ವತಿಯಿಂದ ಡಿಕೆಶಿ ಘೋಷಿತ ಮಹತ್ವದ ಯೋಜನೆಗಳನ್ನು ಸ್ವಾಗತಿಸಿ ಸಂಭ್ರಮಾಚರಣೆ*

*ಶಿವಮೊಗ್ಗ ಜಿಲ್ಲಾ N S U I ವತಿಯಿಂದ ಡಿಕೆಶಿ ಘೋಷಿತ ಮಹತ್ವದ ಯೋಜನೆಗಳನ್ನು ಸ್ವಾಗತಿಸಿ ಸಂಭ್ರಮಾಚರಣೆ*

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಯುವಕ, ಯುವತಿಯರಿಗೆ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಲವು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿರುವ ಡಿ.ಕೆ.ಶಿವಕುಮಾರ್ ಅವರಿಗೆ ಎನ್ ಎಸ್ ಯು ಐ ಅಭಿನಂದಿಸಿ ಸಂಭ್ರಮಾಚರಣೆ ಮಾಡಿದೆ.

ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಯೋಜನೆಯನ್ನು ಘೋಷಿಸಿದ್ದಾರೆ.
ಈ ಜನಪರ ಹಾಗೂ ವಿದ್ಯಾರ್ಥಿ ಸ್ನೇಹಿ ನಿರ್ಧಾರವನ್ನು ಸ್ವಾಗತಿಸಿ, National Students’ Union of India (NSUI) ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಿಸಿ ಸಂಭ್ರಮಾಚರಣೆ ನಡೆಸಲಾಯಿತು.

ಈ ಸಂದರ್ಭದಲ್ಲಿ N.S.U.I ಜಿಲ್ಲಾ ಅಧ್ಯಕ್ಷರಾದ ವಿಜಯಕುಮಾರ್ ,ನಗರ ಅದ್ಯಕ್ಷ ರವಿ ನಗರ ಉಪಾಧ್ಯಕ್ಷರಾದ ಅಬ್ದುಲ್ ಸುಭಾನ್ ,ಆದಿತ್ಯ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಾಜಿ ರಾವ್ ವರುಣ್ ಹಾಗೂ ಯುಸೂಪ್ ಟೊಪಿಕ್ ಶ್ರೀಕಾಂತ್,ಹಾಲಸ್ವಾಮಿ
ಮಹಾದೇವ ಹಿರೇಮಠ,
ಜೀವಿತ್,ಶಶಿಕಲಾ,ಸೃಜನ್ ,ದೀಪಕ್,ಅಭಿಲಾಷ್,ಲೋಹಿತ್ ,ಚೇತನ್,ಅನಿರುಧ್,ಹಾಗೂ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.