ಕವಿಸಾಲು

*ಕವಿಸಾಲು*
(7/6/2026)

1.
ಈ ಜನರ ಬಗ್ಗೆ
ಹುಷಾರು ಹೃದಯವೇ,

ಸೂರ್ಯನಿಗೂ
ಸಾಕ್ಷಿ ಕೇಳುತ್ತಾರೆ
ಬೆಳಕಿನದು!

2.
ಹೇಗೆ ಬೇಕೋ ಹಾಗೆ
ಸಾಗು ನೀ ಬದುಕೇ,
ನಿನ್ನಿಂದೇನೂ
ನಿರೀಕ್ಷೆಗಳಿಲ್ಲ ಇತ್ತಿತ್ತಲಾಗಿ…

3.
ಮುಗುಳ್ನಕ್ಕು ಮುಂದೆ ಸಾಗುವುದು ಕಲಿತುಕೋ ಹೃದಯವೇ…

ಬದುಕು
ಭಯಗೊಳಿಸುವುದಿಲ್ಲ
ಆಗ!

– *ಶಿ.ಜು.ಪಾಶ*
8050112067