*ಇಸ್ಪೀಟ್ ವಿಚಾರದಲ್ಲಿ ದ್ವೇಷ;* *ಇಸ್ಪೀಟ್ ವಿಶ್ವನ ಮೇಲೆ ಭೀಕರ ದಾಳಿ* *ಭೀಕರ ದಾಳಿಯಲ್ಲಿ ಜಾತ್ಯಾತೀತ ಜನತಾದಳ ಪಾತ್ರ- ಶಾಸಕ ಸಂಗಮೇಶ್ ಪುತ್ರ ಬಸವೇಶ್ ಆರೋಪ*
*ಇಸ್ಪೀಟ್ ವಿಚಾರದಲ್ಲಿ ದ್ವೇಷ;*
*ಇಸ್ಪೀಟ್ ವಿಶ್ವನ ಮೇಲೆ ಭೀಕರ ದಾಳಿ*
*ಭೀಕರ ದಾಳಿಯಲ್ಲಿ ಜಾತ್ಯಾತೀತ ಜನತಾದಳ ಪಾತ್ರ- ಶಾಸಕ ಸಂಗಮೇಶ್ ಪುತ್ರ ಬಸವೇಶ್ ಆರೋಪ*
ಭದ್ರಾವತಿ ಅನ್ವರ್ ಕಾಲೋನಿಯಲ್ಲಿ 35 ವರ್ಷ ವಯಸ್ಸಿನ ವಿಶ್ವ @ ಇಸ್ಪೀಟ್ ವಿಶ್ವನ ಮೇಲೆ ಮಾರಕಾಸ್ತ್ರಗಳಿಂದ ಭೀಕರ ಹಲ್ಲೆ ಮಾಡಿದ ಘಟನೆ ಇಂದು ನಡೆದಿದೆ.
ಆರು ಜನರಿದ್ದ ಗ್ಯಾಂಗಿನಿಂದ ಈ ಭೀಕರ ಹಲ್ಲೆ ನಡೆದಿದ್ದು, ಭದ್ರಾವತಿ ಹಳದಮ್ಮ ಬೀದಿಯ ನಿವಾಸಿ ವಿಶ್ವ ಎಂದು ತಿಳಿದು ಬಂದಿದೆ.
ಕೂಡಲೇ ಹಲ್ಲೆಗೊಳಗಾದ ವಿಶ್ವನನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೊಳಪಡಿಸಿದ್ದಾರೆ.
ಹಲ್ಲೆಕೋರರ ಬಂಧನಕ್ಕೆ ಎಸ್ ಪಿ ನಿಖಿಲ್ ಬಲೆ ಬೀಸಿದ್ದಾರೆ. ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶ್ವನ ಸ್ಥಿತಿ ಗಂಭೀರವಾಗಿದೆ.


