*ಕುಡಿದು ಶಾಲಾ ವಾಹನ ಚಲಾಯಿಸುತ್ತಿದ್ದ 7 ಜನ ಚಾಲಕರ ವಿರುದ್ಧ ಪ್ರಕರಣ ದಾಖಲು* *ಡಿ ಎಲ್ ರದ್ದು ಮಾಡಲು ಶಿಫಾರಸು ಮಾಡಿರುವ ಟ್ರಾಫಿಕ್ ಪೊಲೀಸರು* *ಸಂಚಾರಿ ಪೊಲೀಸರಿಂದ ಸ್ಪೆಷಲ್ ಡ್ರೈವ್*

*ಕುಡಿದು ಶಾಲಾ ವಾಹನ ಚಲಾಯಿಸುತ್ತಿದ್ದ 7 ಜನ ಚಾಲಕರ ವಿರುದ್ಧ ಪ್ರಕರಣ ದಾಖಲು*

*ಡಿ ಎಲ್ ರದ್ದು ಮಾಡಲು ಶಿಫಾರಸು ಮಾಡಿರುವ ಟ್ರಾಫಿಕ್ ಪೊಲೀಸರು*

*ಸಂಚಾರಿ ಪೊಲೀಸರಿಂದ ಸ್ಪೆಷಲ್ ಡ್ರೈವ್*

ಕುಡಿದು ಶಾಲಾ ವಾಹನಗಳನ್ನು ಚಲಾಯಿಸುತ್ತಿದ್ದ 7 ಶಾಲಾ ವಾಹನ ಸವಾರರ ವಿರುದ್ಧ ಡಿಡಿ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಶಿವಮೊಗ್ಗದ ಸಂಚಾರಿ ಪೊಲೀಸರು, ಅವರ ಚಾಲನಾ ಪರವಾನಿಗೆ(DL) ರದ್ಧತಿಗೆ ಶಿಫಾರಸು ಮಾಡಿ ಪತ್ರ ಬರೆದಿದ್ದಾರೆ.

ಈಗಾಗಲೇ ಶಾಲೆಗಳು ಪ್ರಾರಂಭವಾಗಿದ್ದು, ಶಾಲಾ ಮಕ್ಕಳ ಸುರಕ್ಷತೆಯ ಸಂಬಂಧ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ Special Drive ಕೈಗೊಂಡು, ಶಾಲಾ ವಾಹನಗಳನ್ನು ಚಾಲನೆ ಮಾಡುವ ವಾಹನ ಸವಾರರು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿರುವ ಬಗ್ಗೆ ಪರಿಶೀಲಿಸಿದ ಪೊಲೀಸರು, ಜಿಲ್ಲೆಯಾದ್ಯಂತ ಒಟ್ಟು 457 ಶಾಲಾ ವಾಹನಗಳ ಚಾಕರುಗಳನ್ನು Drunk and Drive Test ಗೆ ಒಳಪಡಿಸಿದರು.

ಮದ್ಯಪಾನ ಮಾಡಿದ್ದ *ಒಟ್ಟು 07 ಶಾಲಾ ವಾಹನಗಳ ಸವಾರರ ವಿರುದ್ದ ಡಿಡಿ ಪ್ರಕರಣಗಳನ್ನು ದಾಖಲಿಸಿ, 7 ಪ್ರಕರಣಗಳಲ್ಲಿ ಚಾಲಕರುಗಳ DL Cancellation ಗೆ* ವರದಿ ನೀಡಲಾಗಿದೆ ಪೊಲೀಸ್ ಇಲಾಖೆ ತಿಳಿಸಿದೆ.