*ಇಸ್ಪೀಟ್ ನರಸಿಂಹನ ಭೀಕರ ಮರ್ಡರ್ ಕೇಸ್ ಆರೋಪಿಗಳ ಬಂಧನ* *ಅಂಬು @ ಅನಿಲ, ಶಬರೀಶ,ಕತ್ತೆ ರವಿ, ಮಧು- ಭದ್ರಾವತಿಯಲ್ಲಿ ಬಂಧನ* *ಸಿಪಿಐ ಹರೀಶ್ ಪಾಟೀಲ್ ಟೀಮಿಂದ ಕ್ಷಿಪ್ರ ಬಂಧನ*
*ಇಸ್ಪೀಟ್ ನರಸಿಂಹನ ಭೀಕರ ಮರ್ಡರ್ ಕೇಸ್ ಆರೋಪಿಗಳ ಬಂಧನ*
*ಅಂಬು @ ಅನಿಲ, ಶಬರೀಶ,ಕತ್ತೆ ರವಿ, ಮಧು- ಭದ್ರಾವತಿಯಲ್ಲಿ ಬಂಧನ*
*ಸಿಪಿಐ ಹರೀಶ್ ಪಾಟೀಲ್ ಟೀಮಿಂದ ಕ್ಷಿಪ್ರ ಬಂಧನ*
ಇಸ್ಪೀಟ್ ನರಸಿಂಹನ ಭೀಕರ ಮರ್ಡರ್ ಕೇಸಿಗೆ ಸಂಬಂಧಿಸಿದಂತೆ ಕೋಟೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಅಂಬು @ ಅನಿಲ, ಶಬರೀಶ,ಕತ್ತೆ ರವಿ, ಮಧುರವರನ್ನು ಭದ್ರಾವತಿಯಲ್ಲಿ ಬಂಧಿಸಲಾಗಿದೆ. ಕೊಲೆ ಮಾಡಿದವರು ಇವರೇನಾ? ಕೊಲೆಗೆ ಕಾರಣವೇನು? ಎಂಬಿತ್ಯಾದಿ ವಿವರಗಳನ್ನು ಸಂಗ್ರಹಿಸಲು ಪೊಲೀಸರು ತನಿಖೆಗೊಳಪಡಿಸಿದ್ದಾರೆ.
ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಮತ್ತೆ ರೌಡಿಗಳ ಅಟ್ಟಹಾಸ ಮುಂದುವರೆದಿದೆ. ನಗರದ ಲಷ್ಕರ್ ಮೊಹಲ್ಲಾದಲ್ಲಿ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ರೌಡಿಶೀಟರ್ ಹಾಗೂ ಇಸ್ಪೀಟ್ ಗ್ಯಾಂಬ್ಲರ್ ಆಗಿದ್ದ ‘ಬ್ಯಾಟ್ ನರಸಿಂಹ’ ಎಂಬಾತನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.
ಕೊಲೆಯಾದ ನರಸಿಂಹ ಮತ್ತೊಬ್ಬ ಕುಖ್ಯಾತ ರೌಡಿಶೀಟರ್ ಕಾಡಾ ಕಾರ್ತಿಕ್‌ನ ಆಪ್ತ ಸಹಚರ ಎಂದು ತಿಳಿದುಬಂದಿದೆ. ಲಷ್ಕರ್ ಮೊಹಲ್ಲಾ ಬಳಿ ನರಸಿಂಹ ಒಂಟಿಯಾಗಿ ಸಿಕ್ಕಿದ್ದನ್ನು ಗಮನಿಸಿದ ಸೀಗೆಹಟ್ಟಿಯ ಅಂಬು @ ಅನಿಲ ಮತ್ತವನ ಗ್ಯಾಂಗ್, ಮಚ್ಚು ಮತ್ತು ಲಾಂಗ್‌ಗಳಂತಹ ಮಾರಕಾಸ್ತ್ರಗಳಿಂದ ಏಕಾಏಕಿ ದಾಳಿ ನಡೆಸಿದೆ. ರಕ್ತದ ಮಡುವಿನಲ್ಲಿ ಬಿದ್ದ ನರಸಿಂಹ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ದಾಳಿ ನಡೆಸಿದ ಅಂಬು ಮತ್ತು ಆತನ ಸಹಚರರು ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ಕೋಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಹರೀಶ್ ಪಟೇಲ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಹತ್ಯೆಯು ಶಿವಮೊಗ್ಗದ ರೌಡಿಗಳ ನಡುವಿನ ಗ್ಯಾಂಗ್ ವಾರ್‌ನ ಭಾಗವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಅಂಬು ಮತ್ತು ಆತನ ಗ್ಯಾಂಗ್‌ಗಾಗಿ ಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ. ಈ ಘಟನೆಯಿಂದಾಗಿ ಲಷ್ಕರ್ ಮೊಹಲ್ಲಾ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಇಸ್ಪೀಟ್ ನರಸಿಂಹನ ಭೀಕರ ಕೊಲೆಯಿಂದ ಮತ್ತೆ ಆರಂಭವಾಗಲಿದೆಯೇ ಶಿವಮೊಗ್ಗದಲ್ಲಿ ಗ್ಯಾಂಗ್ ವಾರ್? ಅನುಮಾನಗಳು ದಟ್ಟವಾಗಿವೆ.


