*2018ರ ಖೋಟಾನೋಟು ಪ್ರಕರಣ;* *ಶಿವಮೊಗ್ಗದ ಟಿಪ್ಪುನಗರದ ಅಮ್ಜದ್ ಪಾಷಾ- ಮೊಹಸೀನ್ ಖಾನ್- ತೌಸೀಫ್- ಸೈಯದ್ ಇರ್ಫಾನ್ ಗೆ ಶಿಕ್ಷೆ ಪ್ರಕಟ*
*2018ರ ಖೋಟಾನೋಟು ಪ್ರಕರಣ;*
*ಶಿವಮೊಗ್ಗದ ಟಿಪ್ಪುನಗರದ ಅಮ್ಜದ್ ಪಾಷಾ- ಮೊಹಸೀನ್ ಖಾನ್- ತೌಸೀಫ್- ಸೈಯದ್ ಇರ್ಫಾನ್ ಗೆ ಶಿಕ್ಷೆ ಪ್ರಕಟ*
ದಿನಾಂಕ: 07/02/2018 ರಂದು ಆರ್.ವಿ ಗಂಗಾಧರಪ್ಪ ಪಿಐ ರವರು ತುಂಗಾನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಖೋಟಾನೋಟನ್ನು ಚಲಾವಣೆ ಮಾಡಲು ಟಿಪ್ಪುನಗರದ ಇಬ್ಬರು ಆಸಾಮಿಗಳು* ನೇತಾಜಿ ಸರ್ಕಲ್ ನಿಂದ ಅನುಪಿನಕಟ್ಟೆಯ ಕಡೆಗೆ ಬೈಕ್ ನಲ್ಲಿ ಖೋಟಾ ನೋಟುಗಳನ್ನು ಸಾಗಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಮೇರೆಗೆ ತಮ್ಮ ಸಿಬ್ಬಂದಿಯವರೊಂದಿಗೆ ಹಾಗೂ ಪಂಚರೊಂದಿಗೆ ಗೋಪಾಳ ಖಾಸಗಿ ಬಸ್ ಸ್ಟ್ಯಾಂಡ್ ಹತ್ತಿರ ಕಾಯುತ್ತಿರುವಾಗ, ನೇತಾಜಿ ಸರ್ಕಲ್ ಕಡೆಯಿಂದ ಗೋಪಾಳದ ಪೊಲೀಸ್ ಚೌಕಿ ಕಡೆಗೆ ಆರೋಪಿತರಾದ ಎ1 ಅಮ್ಜದ್ ಪಾಷಾ (39 ವರ್ಷ) ಮತ್ತು ಎ2 ಮೌಸಿನ್ ಖಾನ್ (33 ವರ್ಷ) ರವರು ಬೈಕಿನಲ್ಲಿ ಬರುತ್ತಿರುವಾಗ ಬೈಕ್ನ್ನು ಅಡ್ಡಗಟ್ಟಿ ನಿಲ್ಲಿಸಿ ಅವರ ಹೆಸರು ವಿಳಾಸ ಕೇಳಿ, ಪಂಚರುಗಳ ಸಮಕ್ಷಮದಲ್ಲಿ ಅವರನ್ನು ತಪಾಸಣೆ ಮಾಡಿದಾಗ ಆರೋಪಿ 01 ರವರಿಂದ 500 ರೂ.ಗಳ ಮುಖ ಬೆಲೆಯ 95 ನೋಟುಗಳು ಮತ್ತು ಆರೋಪಿ 02 ರವರಿಂದ 500 ರೂ.ಗಳ ಮುಖ ಬೆಲೆಯ 167 ನೋಟುಗಳನ್ನು ಅಮಾನತ್ತುಪಡಿಸಿಕೊಂಡಿದ್ದು, ಸದರಿ ಖೋಟಾನೋಟುಗಳ ಬಗ್ಗೆ ವಿಚಾರ ಮಾಡಿದಾಗ. ಆರೋಪಿತನಾದ ಎ3 ತೌಸಿಫ್, ಆತನ ಸ್ನೇಹಿತನಾದ ಎ4 ಸೈಯದ್ ಇರ್ಪಾನ್ ನೊಂದಿಗೆ ಸೇರಿ ಪಶ್ಚಿಮ ಬಂಗಾಳಕ್ಕೆ ಅಮ್ಜದ್ ಪಾಷಾ ಈತನನ್ನು ಕರೆದುಕೊಂಡು ಹೋಗಿ ಅಲ್ಲಿ ಮೊಬೈಲ್ ನಂಬರ್ 7478534210 ನೊಂದಿಗೆ ಸಂಪರ್ಕಿಸಿ ಆತನಿಂದ 500 ರೂ. ಮುಖ ಬೆಲೆಯ 2 ಲಕ್ಷ ರೂ. ಖೋಟಾ ನೋಟುಗಳನ್ನು 70 ಸಾವಿರ ರೂ.ಗಳು ಅಸಲು ನೋಟುಗಳನ್ನು ಪಾವತಿಸಿ ತಂದಿದ್ದಾಗಿದ್ದು, ಆರೋಪಿತರು ಶಿವಮೊಗ್ಗ ಮತ್ತು ಭದ್ರಾವತಿ ಹಾಗೂ ಬೇರೆ ಬೇರೆ ಕಡೆ *ಚಲಾವಣೆ ಮಾಡಿರುವುದಾಗಿ ತಿಳಿಸಿದ್ದು, ಸದರಿ ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ನೀಡಿದ ದೂರಿನ ಮೇರೆಗೆ ತುಂಗಾನಗರ ಪೊಲೀಸ್ ಠಾಣೆ ಗುನ್ನೆ ನಂ 248/2018 ಕಲಂ 489A,489B,420,489C ಸಹಿತ 34 ಐಪಿಸಿ ರೀತ್ಯ ಪ್ರಕರಣ ದಾಖಲಿಸಿರುತ್ತದೆ.*
ಪ್ರಕರಣದ ಆಗಿನ ತನಿಖಾಧಿಕಾರಿಗಳಾದ *ಶ್ರೀ ಆರ್.ವಿ ಗಂಗಾಧರಪ್ಪ ಪಿಐ ಡಿಸಿಐಬಿ ಶಿವಮೊಗ್ಗ ಜಿಲ್ಲೆ ರವರು ಪ್ರಕರಣದ* ತನಿಖೆ ನಡೆಸಿರುತ್ತಾರೆ.
ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ *ಶ್ರೀಮತಿ ಮಮತಾ ಬಿ.ಎಸ್, ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದು 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದು,* ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ *ಮಾನ್ಯ ನ್ಯಾಯಾಧೀಶರಾದ ಯಶವಂತ ಕುಮಾರ್ ರವರು ದಿನಾಂಕ:14-07-2026 ರಂದು ಆರೋಪಿತರಿಗೆ ಕಲಂ 489ಅ ಡಿ/ತಿ 34 IPC ಕಾಯಿದೆಗಳಿಗೆೆ 3 ವರ್ಷ ಕಠಿಣ ಕಾರಾಗೃಹ ವಾಸ ಮತ್ತು 52,000 ರೂ ದಂಡವನ್ನು ವಿಧಿಸಿ* ಆದೇಶಿಸಿರುತ್ತದೆ.


