*ರಾಷ್ಟ್ರಭಕ್ತರ ಬಳಗ ಮತ್ತು ಪರಿಸರಕ್ಕಾಗಿ ನಾವು ಸಂಘಟನೆಗಳ ತೀವ್ರ ಖಂಡನೆ…* *ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕುರಿತ ನಿಯಾಸ್ ವರದಿ;* *ಕೆಪಿಸಿಎಲ್ ನಿಂದ ನ್ಯಾಯಾಲಯ- ಸಾವರ್ಜನಿಕರಿಗೆ ದಾರಿ ತಪ್ಪಿಸುವ ಕೆಲಸ*
*ರಾಷ್ಟ್ರಭಕ್ತರ ಬಳಗ ಮತ್ತು ಪರಿಸರಕ್ಕಾಗಿ ನಾವು ಸಂಘಟನೆಗಳ ತೀವ್ರ ಖಂಡನೆ…*
*ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕುರಿತ ನಿಯಾಸ್ ವರದಿ;*
*ಕೆಪಿಸಿಎಲ್ ನಿಂದ ನ್ಯಾಯಾಲಯ- ಸಾವರ್ಜನಿಕರಿಗೆ ದಾರಿ ತಪ್ಪಿಸುವ ಕೆಲಸ*

ಶರಾವತಿ ಪಂಪಡ್ ಸ್ಟೋರೆಜ್‌ನ ಯೋಜನೆ ಕುರಿತಂತೆ ನಿಯಾಸ್ ಸಂಸ್ಥೆಯವರು ನೀಡಿರುವ ವರದಿಯಿಂದ ಕೆ.ಪಿ.ಸಿ,ಎಲ್ ನವರು ಸಾರ್ವಜನಿಕರನ್ನು ಹಾಗೂ ನ್ಯಾಯಾಲಯವನ್ನು ತಪ್ಪು ಮಾಹಿತಿಯ ಮೂಲಕ ದಿಕ್ಕು ತಪ್ಪಿಸುತ್ತಿದ್ದಾರೆಂದು ರಾಷ್ಟ್ರಭಕ್ತರ ಬಳಗ ಮತ್ತು ಪರಿಸರಕ್ಕಾಗಿ ನಾವು ಸಂಸ್ಥೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮತ್ತು ಕೆ.ಇ.ಕಾಂತೇಶ್ ನೇತೃತ್ವದಲ್ಲಿ ಟೀಕಿಸಿದ್ದಾರೆ.
1) ನಿಯಾಸ್ ಒಂದು ಸ್ವತಂತ್ರ ಸಂಸ್ಥೆಯಾಗಿದ್ದು( ಆಟೋನಮಸ್ ಬಾಡಿ) ಈ ಸಂಸ್ಥೆಯ ವರದಿಯ ಕಾನೂನು ಮಾನ್ಯತೆ ಬಗ್ಗೆ ಪ್ರಶ್ನೆಗಳಿವೆ.
2) ಕೇಂದ್ರ ಸರ್ಕಾರದ ಪರಿಸರ ಇಲಾಖೆಯ ಡಾ| ಹೆಚ್.ಎಸ್. ಸಿಂಗ್ ಮತ್ತು ಪ್ರೋ. ಸುಕುಮಾರನ್ ವರದಿಯಲ್ಲಿ ಈ ಯೋಜನೆಯ ಬಗ್ಗೆ ಸ್ಪಷ್ಟವಾಗಿ ವಿರೋಧ ವ್ಯಕ್ತಪಡಿಸಿರುತ್ತಾರೆ.
3) ಕೇಂದ್ರ ಸರ್ಕಾರದ ಪರಿಸರ ಇಲಾಖೆಯ ಶ್ರೀಮತಿ ಪ್ರಣಿತಾ ಕೌಲ್ ವರದಿಯು ಸಹ ಈ ಯೋಜನೆಯು ಪರಿಸರಕ್ಕೆ ಮಾರಕ ಎಂದು ಸ್ಪಷ್ಟವಾಗಿ ತಿಳಿಸಿದೆ.
4) ಕೇಂದ್ರ ವನ್ಯಜೀವಿ ಮಂಡಳಿಯ 85 ನೇ ಸ್ಥಾಯಿ ಸಮಿತಿ ಸಭೆಯಲ್ಲಿ ಸಮಿತಿಯ ಸದಸ್ಯರೇ ಈ ಯೋಜನೆಗೆ ಅನುಮತಿ ನೀಡುವ ಬಗ್ಗೆ ವಿರೋಧ ವ್ಯಕ್ತ ಪಡಿಸಿದ ಸಲುವಾಗಿ ಸ್ಥಳ ಪರಿಶೀಲನೆ ನಡೆಸಲು ನಿಯಾಸ್ ಸಂಸ್ಥೆಗೆ ಸೂಚಿಸಲು ರಾಜ್ಯ ಸರ್ಕಾರಕ್ಕೆ ಎನ್.ಬಿ.ಡಬ್ಲ್ಯೂ.ಎಲ್. ನವರು ಸೂಚಿಸಿದ್ದರು.
5) ರಾಜ್ಯ ಸರ್ಕಾರದಿಂದ ಸೂಚನೆ ಪಡೆದ ನಿಯಾಸ್ ಯಾವಾಗ ಸ್ಥಳ ಪರಿಶೀಲನೆ ನಡೆಸಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ನಿಯಾಸ್ ವರದಿಯು ಜೂನ್ 23 ಕ್ಕೆ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಈ ವರದಿ ಇನ್ನು ಸಾರ್ವಜನಿಕಗೊಂಡಿಲ್ಲ.
6) ರಾಜ್ಯ ಸರ್ಕಾರವೇ ಯೋಜನೆ ಬಗ್ಗೆ ವರದಿ ಕೇಳಿದ ಕಾರಣ ಯೋಜನೆಗೆ ಪೂರಕವಾಗಿರುವ ಸ್ಪಷ್ಟನೆಗಳನ್ನೇ ಕೇಳಿರುವ ಬಗ್ಗೆ ಅನುಮಾನವಿದೆ.
7) ನಿಯಾಸ್‌ನ ಈ ವರದಿಯನ್ನು ಕೇಂದ್ರ ಸರ್ಕಾರದ ಎನ್.ಬಿ.ಡಬ್ಲ್ಯೂ.ಎಲ್.ನವರು ಒಪ್ಪುತ್ತಾರೆ ಎಂಬ ಬಗ್ಗೆ ಖಾತ್ರಿ ಇಲ್ಲ, ನಿಯಾಸ್ ಸಂಸ್ಥೆಯವರು ಈ ಯೊಜನೆಯಿಂದ ಪರಿಸರಕ್ಕೆ ಆಗುವ ಸಾಧಕ ಬಾಧಕಗಳ ಬಗ್ಗೆ ಪರಿಶೀಲಿಸಿರುವ ಬಗ್ಗೆ ಖಾತ್ರಿ ಇಲ್ಲ.
8) ಸುಪ್ರೀಂ ಕೋರ್ಟ್‌ನ ಅಡಿಯಲ್ಲಿ ಕಾರ್ಯ ನಿರ್ವಹಿಸುವ Central empowered Committee ಸದಸ್ಯರು ಸಹ ಈ ಯೋಜನೆಯ ಬಗ್ಗೆ ಸುಮೊಟೋ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ವರದಿಯು ಸಹ ಇನ್ನು ಬಹಿರಂಗಗೊಂಡಿಲ್ಲ.
9) ಹೈಕೋರ್ಟ್ ನಲ್ಲಿ ಕೇಂದ್ರ ಸರ್ಕಾರವು ಸಹ ಈ ಯೋಜನೆಗೆ ಕೇಂದ್ರದ ತಜ್ಞರ ತಂಡ ಒಪ್ಪಿಗೆ ಸೂಚಿಸಿಲ್ಲ ಎಂದು ಒಪ್ಪಿಕೊಂಡಿದೆ.
10) ರಾಜ್ಯ ಸರ್ಕಾರವೇ ನಿಯಾಸಗೆ ಯೋಜನೆಗೆ ಬಗ್ಗೆ ಕೇಳಿಪಡೆದಿರುವುದು ಹಾಗೂ ತರಾತುರಿಯಲ್ಲಿ ಈ ವರದಿಯ ಬಗ್ಗೆ ಮಾಧ್ಯಮಗಳಿಗೆ ತಮಗೆ ಪೂರಕವಾಗಿರುವಂತಹ ಮಾಹಿತಿಯನ್ನು ಮಾತ್ರ ಬಿಡುಗಡೆಗೊಳಿಸುವ ಮೂಲಕ ಸಾರ್ವಜನಿಕರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಕೆ.ಪಿ.ಸಿ.ಎಲ್.ನವರು ಮಾಡುತ್ತಿದ್ದಾರೆ
11) ಕೆ.ಪಿ.ಸಿ.ಎಲ್.ನವರು ನಿಯಾಸ್ ಸಂಪೂರ್ಣ ವರದಿಯನ್ನು ಮೊದಲು ಸಾರ್ವಜನಿಕಗೊಳಿಸಬೇಕು, ಕೆ.ಪಿ.ಸಿ.ಎಲ್.ನವರು ತಪ್ಪು ಮಾಹಿತಿಯನ್ನು ನೀಡುವ ಮೂಲಕ ಸಾರ್ವಜನಿಕರನ್ನು ಮತ್ತು ನ್ಯಾಯಾಲಯವನ್ನು ಗೊಂದಲಕ್ಕೆ ಒಳಪಡಿಸಬಾರದೆಂದು ಒತ್ತಾಯ ಮಾಡುತ್ತಿದ್ದೇವೆ ಎಂದರು.


