*ಡಾಕ್ಟರ್ ಸರ್ಜಿ ಆತ್ಮವಿಮರ್ಶೆ ಮಾಡಿಕೊಳ್ಳಲಿ: ವೈ.ಎಚ್.ಎನ್.*

*ಡಾಕ್ಟರ್ ಸರ್ಜಿ ಆತ್ಮವಿಮರ್ಶೆ ಮಾಡಿಕೊಳ್ಳಲಿ: ವೈ.ಎಚ್.ಎನ್.*

*ಶಿವಮೊಗ್ಗ:* ಭ್ರಷ್ಟಾಚಾರದ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡುವ ಬಿಜೆಪಿ ಎಂಎಲ್‌ಸಿ ಡಾ. ಧನಂಜಯ್ ಸರ್ಜಿ ಅವರು ತಾವು ಪರಿಷತ್ ಚುನಾವಣೆಯನ್ನು ಹೇಗೆ ಗೆದ್ದರು ಎನ್ನುವುದನ್ನು ಮೊದಲು ಆತ್ಮವಿಮರ್ಶೆ ಮಾಡಿಕೊಳ್ಳಬೇಕು, ಎಂದು ಕೆಪಿಸಿಸಿ ಸದಸ್ಯ ವೈ.ಎಚ್. ನಾಗರಾಜ್ ಹೇಳಿದ್ದಾರೆ.

ಸರ್ಜಿಯವರು ಕೆಪಿಎಸ್‌ಸಿಯನ್ನು “ಕ್ಯಾಶ್ ಪೋಸ್ಟ್ ಸೆಂಟರ್ ಕಾಂಗ್ರೆಸ್ ಪಾರ್ಟಿ” ಎಂದು ಕರೆದಿದ್ದಾರೆ. ಆದರೆ ಇದೇ ಕೆಪಿಎಸ್‌ಸಿಗೆ ಅಧ್ಯಕ್ಷರನ್ನು ನೇಮಕ ಮಾಡಿದ್ದು ಯಾರು ಎಂದು ಯೋಚಿಸಬೇಕಲ್ಲವೇ ಎಂದು ತಿರುಗೇಟು ನೀಡಿದ್ದಾರೆ.

ದೇಶದಲ್ಲಿ ನಡೆದಿರುವ NEET ಹಗರಣ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ವೈಫಲ್ಯವನ್ನು ಮರೆಮಾಚಲು ಬಿಜೆಪಿ ಈ ರೀತಿ ವಿಷಯಾಂತರ ಮಾಡುತ್ತಿದೆ. ತಮ್ಮ ಆಡಳಿತದ ವೈಫಲ್ಯಗಳನ್ನು ಮುಚ್ಚಿಹಾಕಲು ಕಾಂಗ್ರೆಸ್ ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡುವುದು ಬಿಜೆಪಿಯ ಹಳೆಯ ತಂತ್ರ.

ಕೆಪಿಎಸ್‌ಸಿ ಅಧ್ಯಕ್ಷರನ್ನು ನೇಮಕ ಮಾಡಿದ್ದೇ ಬಿಜೆಪಿ ಸರ್ಕಾರ. ಒಬ್ಬ ಭ್ರಷ್ಟನನ್ನು ನೇಮಕ ಮಾಡಿದ್ದು ನೀವೇ ಅಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.ಭ್ರಷ್ಟಾಚಾರ ದ ಮೂಲ ಬಿ ಜಿ ಪಿ ಯಿಂದಲೇ ಬಂದಿದ್ದು ಅಲ್ಲವೇ ಅದರ ಹೊಣೆಯನ್ನು ಬಿಜಿಪಿಯೇ ಹೊರ ಬೇಕಲ್ಲವೆ…ಇದರ ಅರಿವು ಸರ್ಜಿಯವರಿಗೆ ಇರ ಬೇಕಿತ್ತು ಗಾಜಿನ ಮನೆಯಲ್ಲಿದ್ದು ಕೊಂಡು ಕಲ್ಲು ಹೊಡೆಯುವ ಕೆಲಸ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಬಿಜೆಪಿ ಆಡಳಿತದಲ್ಲಿ PSI ನೇಮಕಾತಿ ಹಗರಣ, ಪೇಪರ್ ಲೀಕ್, 40% ಕಮಿಷನ್ ನಡೆದಿದೆ. 54,000 ಅಭ್ಯರ್ಥಿಗಳ ಭವಿಷ್ಯದೊಂದಿಗೆ ಆಟವಾಡಿದವರು ನೀವೇ. ಅವಾಗ ಯಾಕೆ ಬಾಯಿ ಮುಚ್ಚಿಕೊಂಡಿದ್ದೀರಿ?

ರಾಜ್ಯ ಸರ್ಕಾರ ಪಾರದರ್ಶಕ ಆಡಳಿತಕ್ಕೆ ಬದ್ಧವಾಗಿದೆ. ಯಾವುದೇ ಅಕ್ರಮದ ಬಗ್ಗೆ ದೂರು ಬಂದರೂ ತಕ್ಷಣ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ರಾಜ್ಯ ಸರ್ಕಾರ ಈ ಬಗ್ಗೆ ತನಿಖೆಗೆ ಆದೇಶಿಸಿ ಕಠಿಣ ಕ್ರಮ ಕೈಗೊಂಡಿದೆ.

ಪದವೀಧರ ಕ್ಷೇತ್ರದಿಂದ ಆಯ್ಕೆಯಾದ ಸರ್ಜಿಯವರು ಇದುವರೆಗೂ ಮಾಡಿದ್ದಾದರೂ ಏನು… ಬೊಂಬೆಯಂತೆ ಪತ್ರಿಕಾ ಗೋಷ್ಠಿಗಳಲ್ಲಿ ಬಂದು ಕುಳಿತಿದ್ದು ಬಿಟ್ಟರೆ ಬೇರೆ ಏನು ಮಾಡಿದ್ದಾರೆ ಹೇಳಲಿ.

ನೀಟ್ ಪರೀಕ್ಷೆಯಲ್ಲಿ ಮೃತಪಟ್ಟ ಮಕ್ಕಳ ಬಗ್ಗೆ ಯಾವತ್ತಾದರೂ ಯೋಚಿಸಿದ್ದಾರಾ…

ಸುಮ್ಮನೇ ವಿಷಯಾಂತರ ಮಾಡಲು, ರಾಜಕಾರಣಕ್ಕಾಗಿ ಮತ್ತು ತಮ್ಮ ಇರುವಿಕೆಯನ್ನು ತೋರಿಸಲು ಈ ರೀತಿ ಹೇಳಿಕೆ ನೀಡುವುದನ್ನು ನಿಲ್ಲಿಸಲಿ.

ಭ್ರಷ್ಟಾಚಾರ ಯಾರು ಮಾಡಿದರೂ ತಪ್ಪೇ. ಸರ್ಜಿ ಅವರು ತಮ್ಮ ಚುನಾವಣೆಯಲ್ಲಿ ಹೇಗೆ ಗೆದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ವೈ.ಎಚ್. ನಾಗರಾಜ್ ತಿಳಿಸಿದ್ದಾರೆ.