ನಾಳೆ ಪದವೀಧರರ ಸಹಕಾರ ಸಂಘದ 50ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ; ಅಧ್ಯಕ್ಷ ಎಸ್.ಪಿ.ದಿನೇಶ್ ವಿವರಣೆ*
*ನಾಳೆ ಪದವೀಧರರ ಸಹಕಾರ ಸಂಘದ 50ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ; ಅಧ್ಯಕ್ಷ ಎಸ್.ಪಿ.ದಿನೇಶ್ ವಿವರಣೆ*
ಶಿವಮೊಗ್ಗ: ಪದವೀಧರರ ಸಹಕಾರ ಸಂಘದ 50ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಆ. 24ರ ನಾಳೆ ಬೆಳಗ್ಗೆ 9.30ಕ್ಕೆ ಸವಳಂಗ ರಸ್ತೆಯಲ್ಲಿರುವ ಸರ್ಜಿ ಕನ್ವೆನ್ಷನ್ ಹಾಲ್ ನಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎಸ್.ಪಿ. ದಿನೇಶ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 54 ವರ್ಷಗಳ ಹಿಂದೆ ಕೇವಲ 163 ಸದಸ್ಯರಿಂದ ಆರಂಭವಾದ ಸಂಘ ಇಂದು 7051 ಸದಸ್ಯರನ್ನು ಹೊಂದಿದೆ. ಪ್ರಸ್ತುತ ಷೇರು ಬಂಡವಾಳ 3,08,76,400 ರೂ. ಹೊಂದಿದ್ದು, 3,43,62,255 ರೂ. ಆಪತ್ ಧನ ನಿಧಿ ಹೊಂದಿದೆ. ಸದಸ್ಯರಿಂದ 64,33,77,577 ರೂ. ಠೇವಣಿ ಇದೆ. 55,19,40,831 ರೂ. ಸಾಲ ನೀಡಲಾಗಿದೆ. ಒಟ್ಟಾರೆ 1,57,08,918.61 ರೂ. ನಿವ್ವಳ ಲಾಭ ಗಳಿಸಿದೆ ಎಂದರು.
ಆಡಿಟ್ ವರ್ಗೀಕರಣದಲ್ಲಿ ಸಂಘವು ಬಿ ಶ್ರೇಣಿ ಹೊಂದಿದ್ದು, ಸುಸ್ತಿ ಸಾಲದ ಪ್ರಮಾಣ ಶೇ. 2.07ರಷ್ಟು ಇದೆ. 2023-24ನೇ ಸಾಲಿನಲ್ಲಿ 1,29,16,136 ರೂ. ನಿವ್ವಳ ಲಾಭ ಗಳಿಸಿದ್ದ ಸಂಘ 2024-25ನೇ ಸಾಲಿನಲ್ಲಿ 1,57,08,918.61 ರೂ. ನಿವ್ವಳ ಲಾಭ ಗಳಿಸಿದ್ದು, ಕಳೆದ 7 ವರ್ಷದಿಂದ ದಾಖಲೆಯ ಲಾಭ ಗಳಿಸುತ್ತಾ ಬಂದಿದೆ ಎಂದರು.
ಕಳೆದ ಸಾಲಿಗೆ ಹೋಲಿಸಿದರೆ ಈ ವರ್ಷ ವಹಿವಾಟು ಕಡಿಮೆಯಾಗಿದೆ. ಇ-ಖಾತೆಯ ಸಮಸ್ಯೆಯಿಂದಾಗಿ ವ್ಯವಹಾರ ಕಡಿಮೆಯಾಗಿದೆ. 1001 ರೂ. ಠೇವಣಿ ಸಂಗ್ರಹಣೆ ಹಾಗೂ 54 ಸಾವಿರ ರೂ. ಸಾಲ ನೀಡಿಕೆಯಿಂದ 34ರೂ. ನಿವ್ವಳ ಲಾಭ ಗಳಿಸಿದೆ. 2025ರ ಮಾರ್ಚ್ ಪ್ರಗತಿಗೆ ಹೋಲಿಸಿದಾಗ ಸದಸ್ಯರ ಸಂಖ್ಯೆ 7050 ಆಗಿದ್ದು, 3,08,76,400 ರೂ. ಷೇರು ಬಂಡವಾಳ ಹೊಂದಿದ್ದು, 64.33 ಕೋಟಿ ರೂ. ನಿವ್ವಳ ಠೇವಣಿ ಸಂಗ್ರಹಿಸಿ 55.19 ಕೋಟಿ ರೂ. ಸಾಲ ನೀಡುವುದರೊಂದಿಗೆ 172.73 ಕೋಟಿ ರೂ. ವಹಿವಾಟು ನಡೆಸಲಾಗಿದೆ ಎಂದರು.
2022ರಲ್ಲಿ ಸಂಘವು 50 ವರ್ಷ ಪೂರೈಸಿದ್ದು, ಸುವರ್ಣ ಮಹೋತ್ಸವ ಆಚರಿಸಿಕೊಂಡಿದ್ದು, ಈ ಸವಿನೆನಪಿಗಾಗಿ ಶಾಖೆ ಮತ್ತು ಶೈಕ್ಷಣಿಕ ಆಡಳಿತ ಕಚೇರಿಯ ನೂತನ ಕಟ್ಟಡ ನಿರ್ಮಾಣದ ಶಿಲಾನ್ಯಾಸ ನೆರವೇರಿಸಲಾಯಿತು. ಶಿವಮೊಗ್ಗದ ಕೃಷಿನಗರದಲ್ಲಿ 4 ಅಂತಸ್ತಿನ ಕಟ್ಟಡ ನಿರ್ಮಾಣ ಅಂತಿಮ ಹಂತದಲ್ಲಿದ್ದು, ಡಿಸೆಂಬರ್ ನಲ್ಲಿ ಉದ್ಘಾಟನೆಗೆ ಸಜ್ಜುಗೊಳ್ಳಲಿದೆ ಎಂದರು.
ಸರ್ವ ಸದಸ್ಯರ ಮಹಾಸಭೆಯಲ್ಲಿ ಸಾಧನೆಗೈದಿರುವ ಸದಸ್ಯರಿಗೆ, ಕುವೆಂಪು ವಿವಿಯಲ್ಲಿ 4 ಪದವಿಗಳಿಗೆ ಚಿನ್ನದ ಪದಕ ಇಟ್ಟಿದ್ದು, ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು. ಹಾಗೆಯೇ ಅತಿ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೂ ಸನ್ಮಾನಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಡಾ.ಯು. ಚಂದ್ರಶೇಖರಪ್ಪ, ನಿರ್ದೇಶಕರಾದ ಡಾ.ಎಸ್.ಹೆಚ್. ಪ್ರಸನ್ನ, ಎಸ್.ಕೆ. ಕೃಷ್ಣಮೂರ್ತಿ, ಪಿ. ರುದ್ರೇಶ್, ಜೋಗದ ವೀರಪ್ಪ, ಡಾ.ಕೆ.ಎಂ. ನಾಗರ್ಷ, ಎಸ್. ಮಮತಾ, ಡಿ.ಎಸ್. ಭುವನೇಶ್ವರಿ, ಬಿ. ಜಗದೀಶ್, ಯು. ಶಿವಾನಂದ್, ಬಿ.ವಿ. ಗೋಪಾಲಕೃಷ್ಣ, ಯು. ರಮ್ಯಾ, ಪ್ರಭಾರ ಕಾರ್ಯದರ್ಶಿ ಬಿ.ಎಸ್. ಕವಿತಾ, ಹರಿಣಾಕ್ಷಿ ಬಿ. ಶೆಟ್ಟಿ ಇನ್ನಿತರರು ಇದ್ದರು.