ಎಂ.ಶ್ರೀಕಾಂತ್ ಜನ್ಮದಿನ; ಟೆಲೆಕ್ಸ್ ರವಿಕುಮಾರ್/ ಶಿ.ಜು.ಪಾಶರ ಆತ್ಮೀಯ ಬರಹಗಳು

ಶ್ರೀಕಾಂತ್ ಎಂಬ ‘ ಬುದ್ಧ ಕಾರುಣ್ಯ’ ಕ್ಕೆ ಶುಭಾಶಯಗಳು

ಈ ಸಮಾಜದಲ್ಲಿ ಎರಡು ತರಹದ ವ್ಯಕ್ತಿತ್ವಗಳನ್ನು ಕಾಣುತ್ತೇವೆ‌ . ಮೊದಲನೆಯದು ತನ್ನ ವೈಯುಕ್ತಿಕ ಕಷ್ಟ,ದುಃಖಗಳನ್ನೆ ಈ ಸಮಾಜದ ದುಃಖ ಎಂದು ವಂಚಿಸುವವರು. ಸ್ವಾರ್ಥಿಗಳು. ಇಂತಹವರ ಸಂಖ್ಯೆಯೆ ಹೆಚ್ಚು.

* ಎರಡನೆಯ ವ್ಯಕ್ತಿತ್ವ ಎಂದರೆ ಈ ಸಮಾಜದಲ್ಲಿ ಬದುಕುವ ಸಾಮಾನ್ಯರ, ಬಡವರ,ಅಸಹಾಯಕರ, ನೋವು,ಕಷ್ಟಗಳನ್ನೆಲ್ಲಾ ತನ್ನ ನೋವು – ದುಃಖಗಳೆಂದೆ ಭಾವಿಸುತ್ತಾ ಅವರಿಗಾಗಿ ಜೀವನಪೂರ್ತಿ ಮರುಗುವವರು,  ನವೆಯುವವರು. ಇಂತಹವರ ಸಂಖ್ಯೆ ಬಹಳ ವಿರಳ.  ಇಂತಹ  ಎರಡನೆ ವರ್ಗದ ಅಪರೂಪದ ವ್ಯಕ್ತಿಗಳ ಸಾಲಿನಲ್ಲಿ ಎಂ.ಶ್ರೀಕಾಂತ್ ಕಾಣಸಿಗುತ್ತಾರೆ.

ಯಾರಿಗೆ ಗೊತ್ತಿಲ್ಲ , ಅಭಿಮಾನಿಗಳು, ಆಪ್ತರೆಲ್ಲಾ  ‘ಅಯ್ಯ’ ಎಂದೆ  ಅದಮ್ಯ ಅಭಿಮಾನದಿಂದ ಕರೆಯುವ ಈ ‘ಎಂ. ಶ್ರೀಕಾಂತ್ .’

ಹೆರಿಗೆ ಯಿಂದ ಆರಂಭಗೊಂಡು ಶಾಲಾ – ಕಾಲೇಜು ಫೀ, ಜಾತ್ರೆ- ಉತ್ಸವ , ಕಾಯಿಲೆ ಕಸಾಲೆಗೆ ,  ಮದುವೆ,ಸಾವು , ತಿಥಿ ………..ಎಲ್ಲದಕ್ಕೂ ಶ್ರೀಕಾಂತ್ ಆಪತ್ಭಾಂದವರಂತೆ ಆತುಕೊಂಡಿದ್ದಾರೆ.

ಶಿವಮೊಗ್ಗ ದ ಮಟ್ಟಿಗೆ ಹೇಳುವುದೇ ಆದರೆ ಕಳೆದೆರೆಡು ದಶಕಗಳಿಂದ  ಮನೆಮಾತಾಗಿರುವ ಈ ‘ ಅಯ್ಯ’  ಜಾತಿ.ಧರ್ಮ ,ಪಕ್ಷ ಪಂಗಡದ  ಭೇದ – ಭಾವವಿಲ್ಲದೆ  ಕಷ್ಟದಲ್ಲಿರುವವರು,ಸ್ನೇಹಕ್ಕೆ ಬಿದ್ದವರ ಪಾಲಿಗೆ  ತಾಯ್ತನದ ಅಕ್ಷಯಪಾತ್ರೆಯಂತೆ ಬದುಕಿದ್ದಾರೆ.  ತನ್ನ ಕಷ್ಟ – ನಷ್ಟಗಳ ನೋವಿನ ಗೆರೆಗಳು ಮುಖದಲ್ಲಿ ಎಂದಿಗೂ ಕಾಣದಂತೆ ನಗುನಗುತ್ತಲೆ ನೊಂದವರಿಗೆಲ್ಲಾ ಕೈ ನೀಡುತ್ತಾ ಬಂದಿದ್ದಾರೆ.  ಕೊಟ್ಟು ಕೊರಗದ ಗುಣಶ್ರೇಷ್ಠ.

ಇಂತಹ ಶ್ರೀಕಾಂತ್ ಅವರಿಗೆ ರಾಜಕೀಯ ಮಹತ್ವಾಕಾಂಕ್ಷೆ ಇದೆಯೇನೋ ನಿಜ,  ಆದರೆ ಅದಕ್ಕಾಗಿ ಅವರೆಂದೂ ನಂಬಿದವರ ಬೆನ್ನಿಗೆ ಇರಿದವರಲ್ಲ,   ದೇಶಾವರಿತನ ಅನ್ನೋದನ್ನು ಹತ್ತಿರಕ್ಕೂ ಬಿಟ್ಟುಕೊಂಡವರಲ್ಲ, ಕುತಂತ್ರಗಳ ಧರಿಸಿದವರಲ್ಲ.  ಉದಾತ್ತವಾಗಿ ಕೊಟ್ಟಿದ್ದನ್ನು ಮರೆವ ದಾನಿ,  ಕೇಡು – ಸೇಡುಗಳ ಸುಳಿಗೆ ಸಿಲುಕದೆ ಪ್ರೀತಿ – ಸ್ನೇಹ ದ ಬೋರ್ಗವರೆವ  ದಡವಿಲ್ಲದ ನದಿಯಂತೆ ಸದಾ ಹರಿಯುತ್ತಾರೆ ಅನ್ನೋದು ಅವರ  ಆಲಿಂಗನಕ್ಕೆ  ದಕ್ಕಿದವರ ಅನುಭವಕ್ಕೆ ನಿಲುಕುತ್ತದೆ.

ಶ್ರೀಕಾಂತ್ ಅವರಿಂದ  ಉಪಕಾರ ಪಡೆದ ಕುಟುಂಬಗಳೆ ಓಟು ಹಾಕಿದ್ದರೆ ಸಾಕಿತ್ತು,  ಶ್ರೀಕಾಂತ್  ಅವರು ಹತ್ತು ವರ್ಷಗಳ ಹಿಂದೆಯೇ ಈ ಊರಿನ ಶಾಸಕರಾಗಿ  ಈ ಕ್ಷೇತ್ರದ ರಾಜಕಾರಣಕ್ಕೊಂದು ಘನತೆ ಇರುತ್ತಿತ್ತು.
ವಿಪರ್ಯಾಸವೆಂದರೆ ಜನ ಒಮ್ಮೊಮ್ಮೆ ಅತ್ಯಂತ ಕೃತಘ್ನಹೀನರಾಗಿ ವರ್ತಿಸುತ್ತಾರೆ ಅನ್ನೋದು ಶ್ರೀಕಾಂತ್ ಅವರ ವಿಷಯದಲ್ಲಿ ದಿಟವಾಗಿಬಿಟ್ಟಿದೆ.

ಸಮಾಜದ ಇಂತಹ ಅಪಕಾರಗಳ ಬಗ್ಗೆ ಶ್ರೀಕಾಂತ್ ಎಂದಿಗೂ ತಲೆ ಕೆಡಿಸಿಕೊಂಡವರಲ್ಲ,  ಮೇಣದಂತೆ ಕರಗುತ್ತಲೆ ಬೆಳಕ ಸುಯ್ಯುವುದು ಶ್ರೀಕಾಂತ್ ಅವರಿಗೆ ಮಾತ್ರ ಸಿದ್ದಿಸಿದ ವ್ಯಕ್ತಿತ್ವ. ಇದನ್ನೆ ಸಕಲ ಜೀವಿಗಳನ್ನು ನಿಷ್ಕಲ್ಮಶವಾಗಿ  ಪ್ರೀತಿಸುವ, ಅವುಗಳಿಗಾಗಿ ಮಿಡಿಯುವ  ಬುದ್ಧ ಪ್ರಜ್ಞೆ.  ಮತ್ತು ಬುದ್ಧ ಪ್ರತಿಪಾದಿಸಿದ “ಕಾರುಣ್ಯ”  ಎನ್ನುವುದು.

ಇಂತಹ ಕಾರುಣ್ಯರೂಪ ಶ್ರೀಕಾಂತ್ ಅವರಿಗೆ ಇಂದು ಜನ್ಮದಿನದ  ಸಂಭ್ರಮ.
‘ಅಯ್ಯ’ ನಿಮ್ಮ ಆಯಸ್ಸು – ಆರೋಗ್ಯ  ಅಕ್ಷಯವಾಗಲಿ  ಎಂದಷ್ಟೆ  ಬುದ್ದನಲ್ಲಿ ಪ್ರಾರ್ಥಿಸುತ್ತೇನೆ.

ಹ್ಯಾಪಿ ಬರ್ತಡೇ ಸರ್.

2.

*ಜನ್ಮದಿನದ ಶುಭಾಶಯಗಳು*

*ಅಪರೂಪದಲ್ಲಿ ಅಪರೂಪ ನಮ್ ಎಂ.ಶ್ರೀಕಾಂತ್ @ ಶ್ರೀಕಾಂತಣ್ಣ*

ಒಬ್ಬ ಮನುಷ್ಯನಲ್ಲಿ ತಾಯ್ತನ ಅಂತ ಇರುತ್ತೆ. ಅದು ಅಗಾಧವಾಗಿದ್ದರೆ ಸಮಾಜಕ್ಕೆ ಅದು ಹೇಗೆ ಸ್ಪಂದಿಸುತ್ತೆ ಅನ್ನೋದಕ್ಕೊಂದು ವಿಶೇಷವೂ ಅಪರೂಪದ್ದೂ ಉದಾಹರಣೆ ನಮ್ಮ ಎಂ. ಶ್ರೀಕಾಂತ್ @ ಶ್ರೀಕಾಂತಣ್ಣ.

ಬಹಳಷ್ಟು ಜನ ತೊಂದರೆಯಲ್ಲಿದ್ದವರ ಹಾಗೂ ಎಂ.ಶ್ರೀಕಾಂತಣ್ಣನ ಮಧ್ಯೆ ನಾನು ಸೇತುವೆಯಾಗಿದ್ದೇನೆ. ಬಹಳಷ್ಟನ್ನು ಎಲ್ಲಿಯೂ ಪ್ರಸ್ತಾಪಿಸದ ರೀತಿಯಲ್ಲಿ ಅವರ ಸಹಾಯವಿದೆ.
ಮೊನ್ನೆ ಮೊನ್ನೆ ಕೋಟೆ ಶ್ರೀ ಮಾರಿಕಾಂಬ ದೇವಿಯ ಗುಡಿ ಅಲಂಕಾರವನ್ನು ವಿಶೇಷ ಕಾಳಜಿಯಿಂದ ಮಾಡಿದಂತೆಯೇ ಬಹಳಷ್ಟು ಜನರ ಬದುಕನ್ನೂ ಅವರು ಅಲಂಕರಿಸಿದ್ದಾರೆ. ಬಹಳ ಜನ ಅವರ ಹೆಸರಿಂದಲೇ ಬದುಕನ್ನು ಕಟ್ಟಿಕೊಂಡಿದ್ದಾರೆ.

ಅವರಿಗೆ ಈಗಲಾದರೂ ರಾಜಕೀಯ ಲೋಕದಲ್ಲಿ ಜನಸೇವೆಯ ಅಧಿಕೃತ ಅವಕಾಶ ಸಿಗುವಂತಾಗಲಿ…

ಜನ್ಮದಿನದ ಶುಭಾಶಯಗಳು ಶ್ರೀಕಾಂತಣ್ಣ

– *ಶಿ.ಜು.ಪಾಶ*