ಆಕಳ ಕೆಚ್ಚಲು ಕೊಯ್ದದ್ದರ ಹಿಂದೆ ದೊಡ್ಡ ಷಡ್ಯಂತ್ರ ಮುಖ್ಯಮಂತ್ರಿಗಳೇ ಗೋಮಾತೆ ಶಾಪಕ್ಕೊಳಗಾಗಬೇಡಿ ನಾಳೆ ಬೆಳಿಗ್ಗೆ ಡಿಸಿ ಕಚೇರಿ ಮುಂದೆ ರಾಷ್ಟ್ರಭಕ್ತರ ಪ್ರತಿಭಟನೆಮಾಜಿ ಉಪ ಮುಖ್ಯಮಂತ್ರಿ, ರಾಷ್ಟ್ರಭಕ್ತರ ಮುಖಂಡರಾದ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ

ಆಕಳ ಕೆಚ್ಚಲು ಕೊಯ್ದದ್ದರ ಹಿಂದೆ ದೊಡ್ಡ ಷಡ್ಯಂತ್ರ
ಮುಖ್ಯಮಂತ್ರಿಗಳೇ ಗೋಮಾತೆ ಶಾಪಕ್ಕೊಳಗಾಗಬೇಡಿ
ನಾಳೆ ಬೆಳಿಗ್ಗೆ ಡಿಸಿ ಕಚೇರಿ ಮುಂದೆ ರಾಷ್ಟ್ರಭಕ್ತರ ಪ್ರತಿಭಟನೆ

ಮಾಜಿ ಉಪ ಮುಖ್ಯಮಂತ್ರಿ, ರಾಷ್ಟ್ರಭಕ್ತರ ಮುಖಂಡರಾದ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ

ಪತ್ರಕರ್ತರಾದ ಶಿವಮೊಗ್ಗ ನಂದನ್ ಮತ್ತು ಶಶಿಧರ್ ಸಾವಿಗೆ ಸಂತಾಪ.

ರಾಜ್ಯ ಸರ್ಕಾರ ಹಿಂದೂಗಳಿಗೆ ಅಲಕ್ಷ್ಯದ ಜೊತೆಗೆ ಗೋ ಹಂತಕರಿಗೆ ಬೆಂಬಲಿಸ್ತಿದೆ. ಹಿಂದಿನ ಸರ್ಕಾರದಿಂದ 14 ಜಿಲ್ಲೆಗಳಲ್ಲಿ ಗೋಶಾಲೆ ಆರಂಭ. ಈಗಿನ ಸರ್ಕಾರ ಕ್ಯಾಬಿನೆಟ್ ನಲ್ಲಿಯೇ ಗೋಶಾಲೆ ಆರಂಭಕ್ಕೆ ತಡೆ ಕೊಟ್ಟಿದೆ.ದುರಂತ.
ಗೋಮಾತೆ ಕೆಚ್ಚಲು, ಕಾಲಿಗೆ ಕತ್ತಿ ಏಟು. ದುರಂತ. ನಸ್ರೂ ಕುಡುಕ ಅಂತು, ಹುಚ್ಚ ಅಂತು. ಪೊಲೀಸ್ ಇಲಾಖೆ ಹೀಗೆ ಹೇಳಿದ್ದು ನೋವಿನ ಸಂಗತಿ. ರಾಕ್ಷಸೀ ಕೃತ್ಯ ಎಸಗಿದ ರಾಕ್ಷಸನ ಪರವಾಗಿ ಪೊಲೀಸ್ ಇಲಾಖೆ ನಿಂತಿರೋದು ಅಪಮಾನದ ಸಂಗತಿ.

ನಜ್ರೂ ಕುಡುಕ, ಹುಚ್ಚ ಆಗಿದ್ರೆ ಕರ್ಣ ಮನೆಗೆ ಹೋಗಿ ಮೂರು ಆಕಳ ಕೆಚ್ಚಲು ಕೊಯ್ದಿದ್ದರ ಹಿಂದೆ ರಾಷ್ಟ್ರದ್ರೋಹಿತನವಿದೆ. ಈ ಪಾಪಕ್ಕೆ ರಾಜ್ಯ ಸರ್ಕಾರ ಉಳಿಯೋದು ಕಷ್ಟ. ಪೊಲೀಸ್ ಅಧಿಕಾರಿಗಳು ಸುಳ್ಳು ಹೇಳಿಕೆಗಳನ್ನು ನೀಡಿರೋದು ಹೇಯ ಕೃತ್ಯ.

ರಾಜ್ಯದಲ್ಲಿ ಮುಂದೆ ಹಿಂದೂ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವಾಗಬಹುದಾದ ಎಚ್ಚರಿಕೆಯನ್ನು ಹಿರಿಯ ಸ್ವಾಮೀಜಿಗಳು ಹೇಳಿದ್ದರಲ್ಲಿ ಅರ್ಥವಿದೆ.
ಗೋಮಾತೆಯ ಶಾಪಕ್ಕೆ ಬಲಿಯಾಗುವುದಕ್ಕಿಂತ ಮುಂಚೆ ಸಿಎಂ ಆ ಮತಾಂಧರ ವಿರುದ್ಧ ಕ್ರಮಕೈಗೊಳ್ಳಲಿ.

ತನಿಖೆಗೆ ಆರೋಪಿ ಸಹಕರಿಸುತ್ತಿಲ್ಲ ಅಂತಿದೆ ಪೊಲೀಸ್ ಇಲಾಖೆ. ನಸ್ರೂ ತನಿಖೆ ಗಂಭೀರವಾದ್ರೆ ಹಿಂದಿನ ಷಡ್ಯಂತ್ರ ಹೊರಕ್ಕೆ ಬರುತ್ತೆ. ರಾಷ್ಟ್ರದ್ರೋಹಿಗಳನ್ನು ಹುಡುಕಿ ಕ್ರಮ ಕೈಗೊಳ್ಳಿ. ಇಲ್ಲದಿದ್ದರೆ ಶಾಪ ತಟ್ಟದೇ ಬಿಡುವುದಿಲ್ಲ.

ಶಿವಮೊಗ್ಗ ಮಹಾನಗರ ಪಾಲಿಕೆ ಅನ್ವರ್ ಎಂಡ್ ಕೋ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲು ದೂರು ಕೊಟ್ಟು ಎರಡು ತಿಂಗಳಾದರೂ ಕ್ರಮ ಇಲ್ಲ. ಕೂಡಲೇ ಲೈಸೆನ್ಸ್  ರದ್ದು ಮಾಡಲು ಕಮೀಷನರ್ ಗೆ ಹೇಳಿದ್ದೇನೆ. ಇಲ್ಲದಿದ್ದರೆ ಹೋರಾಟ ಅನಿವಾರ್ಯ.

ಭಗವಾನ್ ಅಯೋಗ್ಯ. ಭಗವಾನ್ ಅಂತ ಹೆಸರಿಟ್ಟುಕೊಂಡಿದ್ದಾನೆ. ನಾವು ಹಿಂದೂ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ.

ಸಣ್ಣ ಸಣ್ಣ ಮಠಗಳು ತೊಂದರೆಯಲ್ಲಿವೆ. ಅಂಥ ಮಠಗಳಿಗೆ ಬಜೆಟ್ ನಲ್ಲಿ ಹಣ ಮೀಸಲಿಡಿ.
ಉಪಸ್ಥಿತಿ; ಈ. ವಿಶ್ವಾಸ್, ಬಾಲು, ಮಹಾಲಿಂಗಶಾಸ್ತ್ರೀ ಸೇರಿದಂತೆ ಹಲವರು