ಗಿಡ ನೆಡುವುದರ ಮೂಲಕ ವರ್ಷಾರಂಭ*
*ಗಿಡ ನೆಡುವುದರ ಮೂಲಕ ವರ್ಷಾರಂಭ*
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ,ಶಿವಮೊಗ್ಗ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿ ಶಿಕಾರಿಪುರ ತಾಲೂಕಿನ ಹೊಸಗೊದ್ದನಕೊಪ್ಪ ಗ್ರಾಮದ ಶ್ರೀ ಸಾಲೇಶ್ವರ ಶಾಲೆಯಲ್ಲಿ ಸಂಕ್ರಾಂತಿ ಹಬ್ಬವನ್ನು ಗಿಡ ನೆಡುವುದರ ಮೂಲಕ ಹಬ್ಬವನ್ನು ಆಚರಿಸಿದರು. ಈ ಕಾರ್ಯಕ್ರಮಕ್ಕೆ ಗ್ರಾಮದ ಪಿಡಿಒ ಇಂತಿಯಾಸ್ ಅಹ್ಮದ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರುದ್ರ ನಾಯ್ಕ,ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರಶಾಂತ್ ರವರು, ಶಾಲೆಯ ಕಾರ್ಯದರ್ಶಿಯಾದ ರಾಮು ರವರು ಹಾಗೂ ಶಾಲೆಯ ವಿದ್ಯಾರ್ಥಿಗಳು ಆಗಮಿಸಿದ್ದರು. ಸಂಕ್ರಾಂತಿ ಹಬ್ಬದ ಶುಭಘಳಿಗೆಯಲ್ಲಿ ಎಳ್ಳು-ಬೆಲ್ಲವನ್ನು ಹಂಚಿ, ಹಬ್ಬದ ವಿಶೇಷತೆಯನ್ನು ವಿವರಿಸಲಾಯಿತು. ಈ ಸಂಕ್ರಾಂತಿ ಹಬ್ಬವು ರೈತರು ಆಚರಿಸುವ ಮುಖ್ಯ ಹಬ್ಬವಾಗಿದ್ದು, ಕಟಾವು ಮಾಡಿರುವ ಧಾನ್ಯಗಳನ್ನು ಪೂಜೆ ಮಾಡುವುದು ಹಾಗೂ ದನ-ಕರುಗಳನ್ನು ಕಿಚ್ಚು ಹಾಯಿಸುವುದು ರೈತರ ಮುಖ್ಯ ಗುರಿಯಾಗಿರುತ್ತದೆ.
*ಎಳ್ಳು-ಬೆಲ್ಲ ಏಕೆ ತಿನ್ನಬೇಕು?*
ಚಳಿಗಾಲದ ಈ ಸಮಯದಲ್ಲಿ ಮಾನವನ ದೇಹದಲ್ಲಿ ಕೊಬ್ಬಿನಾಂಶ ಕಡಿಮೆಯಾಗಿರುತ್ತದೆ ಹಾಗಾಗಿ ಶೇಂಗಾ,ಕಡಲೆ,ಎಳ್ಳು,ಬೆಲ್ಲ ಹಾಗೂ ಕಬ್ಬಿನಾಂಶವು ಹೇರಳವಾಗಿ ದೊರಕುವ ಧಾನ್ಯಗಳನ್ನು ತಿನ್ನಲಾಗುತ್ತದೆ.
*ದನ ಕರುಗಳನ್ನು ಕಿಚ್ಚು ಹಾಯಿಸುವುದು* ವೈಜ್ಞಾನಿಕ ಕಾರಣ:
ರೈತರು ವರ್ಷವಿಡಿ ತಮ್ಮ ದನ-ಕರುಗಳನ್ನು ಬೇಸಾಯ ಮಾಡುವುದಕ್ಕಾಗಿ ಉಪಯೋಗಿಸಿರುತ್ತಾರೆ. ಹಾಗಾಗಿ ಅವುಗಳ ದೇಹದಲ್ಲಿ ತಿಗಣೆಗಳು ಅಂಟಿಕೊಂಡಿರುತ್ತವೆ. ಈ ತಿಗಣೆಗಳನ್ನು ತೆಗೆಯುವ ಸುಲಭ ದಾರಿ ಬೆಂಕಿಯನ್ನು ಬಳಸಿಕೊಂಡು ಕಿಚ್ಚು ಹಾಯಿಸುವುದಾಗಿದೆ,
ಎಂದು ಶಾಲೆಯ ಮುಖ್ಯೋಪಾಧ್ಯಾಯರು ಮಕ್ಕಳಿಗೆ ತಿಳಿ ಹೇಳಿದರು. ನಂತರ ಶಾಲೆಯ ಮಕ್ಕಳನ್ನು ಕೃಷಿ ವಿದ್ಯಾರ್ಥಿಗಳು ಬೆಳೆದಿದ್ದ ಬೆಳೆ ಸಂಗ್ರಹಾಲಯಕ್ಕೆ ಕರೆದುಕೊಂಡು ಹೋಗಿ ವಿವಿಧ ಬೆಳೆಗಳನ್ನು ಪರಿಚಯಿಸುವುದರ ಮೂಲಕ ಹಬ್ಬದ ಮೆರಗನ್ನು ಹೆಚ್ಚಿಸಿದರು.