ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆಯಾಗಲು ಅಣಬೆ ಕೃಷಿ: ಕೃಷಿ ವಿವಿ.*

*ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆಯಾಗಲು ಅಣಬೆ ಕೃಷಿ: ಕೃಷಿ ವಿವಿ.*

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿ ಶಿಕಾರಿಪುರ ತಾಲೂಕಿನ ಹೊಸಗೊದ್ದನಕೊಪ್ಪ ಗ್ರಾಮದಲ್ಲಿ *ಅಣಬೆ ಕೃಷಿ* ಯ ಬಗ್ಗೆ ಒಂದು ಗುಂಪು ಚರ್ಚೆ ಹಾಗೂ ಪದ್ಧತಿ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಶಿಲ್ಪಾ ರವರು ಆಗಮಿಸಿದ್ದರು.
ಅಣಬೆಯನ್ನು ತುಂಬಾ ಸರಳವಾಗಿ ಮನೆಯಲ್ಲಿಯೇ ಭತ್ತದ ಹುಲ್ಲನ್ನು ಬಳಸಿ ಬೆಳೆಯಬಹುದು.ಮೊದಲು ಭತ್ತದ ಹುಲ್ಲನ್ನು ಒಂದೆರಡು ಇಂಚುಗಳಷ್ಟು ಕತ್ತರಿಸಿ ನೀರಿಗೆ ಹಾಕಿಕೊಂಡು,ಈ ನೀರಿಗೆ ಸ್ವಲ್ಪ ಸುಣ್ಣವನ್ನು ಮಿಶ್ರಣ ಮಾಡಿ (ಪ್ರತಿ 100ಲೀ. 10 ಗ್ರಾಂ ಸುಣ್ಣ) 5ಗಂಟೆಗಳ ಕಾಲ ಚೆನ್ನಾಗಿ ನೆನೆಸಬೇಕು. ನಂತರ ಭತ್ತದ ಹುಲ್ಲನ್ನು ಬೇಯಿಸಿಕೊಂಡು ನೆರಳಿನಲ್ಲಿ ಒಣಗಿಸಿ,ಪಾಲಿಥಿನ್ ಕವರ್ನಲ್ಲಿ ಹರಡಿ ಸ್ಪಾನ್ಸ್ಗಳನ್ನು(ಅಣಬೆ ಬೀಜ) ಹಾಕಬೇಕು.ಇದೇ ರೀತಿ 2 ಪದರಗಳಾಗಿ ಹಾಕಿ ಕತ್ತಲೆಯ ಕೋಣೆಯಲ್ಲಿ ಇಡಬೇಕು.3 ದಿನಗಳ ನಂತರ ಕವರ್ ನನ್ನು ಸ್ಪಾನ್ಸ್ಗಳು ಇರುವ ಜಾಗದಲ್ಲಿ ತೂತು ಮಾಡಬೇಕು. ಹೀಗೆ ಮಾಡಿದಾಗ ಶಿಲೀಂದ್ರವು (ಅಣಬೆ ಬೀಜ) ಬೆಳೆಯಲು ಪ್ರಾರಂಭವಾಗುತ್ತದೆ. ಕೋಣೆಯಲ್ಲಿ ಶುಚಿಯನ್ನು ಕಾಪಾಡಿಕೊಂಡು ಪ್ರತಿದಿನ ನೀರನ್ನು ಸ್ಪ್ರೇ ಮಾಡಿದಾಗ ಅಣಬೆಯು 20-25 ದಿನಗಳೊಳಗೆ ಕಟಾವಿಗೆ ಬರುತ್ತದೆ. ಅಣಬೆ ಕೃಷಿಯನ್ನು ಮಹಿಳೆಯರು ಸಣ್ಣ ಪ್ರಮಾಣದಲ್ಲಿ ಶುರು ಮಾಡಿಕೊಂಡು ಆರ್ಥಿಕವಾಗಿ ಸ್ವಾವಲಂಬಿ ಆಗಬೇಕು ಎಂದು ಸಂಪನ್ಮೂಲ ವ್ಯಕ್ತಿಗಳು ಅಭಿಪ್ರಾಯ ಪಟ್ಟರು.