ಕೆ.ಎಸ್.ಈಶ್ವರಪ್ಪ ವಿರುದ್ಧ ಲಿಖಿತ ದೂರು ದಾಖಲಿಸಲಿದ್ದಾರಾ ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್?* *ನೀರಿಳಿಸಿದ ಈಶ್ವರಪ್ಪ ವಿರುದ್ಧ ಬೆವರಿಳಿಸಲು ಹೊರಟರಾ ರಕ್ಷಣಾಧಿಕಾರಿ?*
*ಕೆ.ಎಸ್.ಈಶ್ವರಪ್ಪ ವಿರುದ್ಧ ಲಿಖಿತ ದೂರು ದಾಖಲಿಸಲಿದ್ದಾರಾ ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್?*
*ನೀರಿಳಿಸಿದ ಈಶ್ವರಪ್ಪ ವಿರುದ್ಧ ಬೆವರಿಳಿಸಲು ಹೊರಟರಾ ರಕ್ಷಣಾಧಿಕಾರಿ?*
ನಿಮಗೆ ಕಣ್ ಕಾಣೋದಿಲ್ವಾ? ನೀವ್ ಯಾಕೆ ಎಸ್ ಪಿ ಆಗಿದೀರಾ? ಎಂದೆಲ್ಲಾ ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ, ರಾಷ್ಟ್ರಭಕ್ತರ ಬಳಗದ ಸ್ಥಾಪಕ ಕೆ.ಎಸ್.ಈಶ್ವರಪ್ಪ ವರ್ತನೆಯ ವಿರುದ್ಧ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಲಿಖಿತ ದೂರು ದಾಖಲಿಸಿ ಎಫ್ ಐ ಆರ್ ಮಾಡಿಸಲಿದ್ದಾರಾ?
ಶಿವಮೊಗ್ಗದ ಈದ್ಗಾ ಮೈದಾನಕ್ಕೆ ಸಂಬಂಧಿಸಿದಂತೆ, ಆ ಮೈದಾನಕ್ಕೆ ಬೇಲಿ ಹಾಕಲು ರೈಲ್ವೆ ಕಬ್ಬಿಣ ಬಳಸಲಾಗಿದೆ ಎಂಬ ಬಗ್ಗೆ ತಕರಾರು ತೆಗೆದು ಆ ಮೈದಾನ ಆಟದ ಮೈದಾನ ಅದನ್ನು ಉಳಿಸಿ ಎಂದು ಕೆ.ಎಸ್.ಈಶ್ವರಪ್ಪ ನೇತೃತ್ವದ ರಾಷ್ಟ್ರಭಕ್ತರ ಬಳಗ ಜಿಲ್ಲಾಧಿಕಾರಿಗಳ ಕಚೇರಿ ಬಳಿಯಲ್ಲಿ ಶನಿವಾರ ಬೆಳಿಗ್ಗೆ ಪ್ರತಿಭಟನೆ ಹಮ್ಮಿಕೊಂಡಿತ್ತು.
ಈ ಪ್ರತಿಭಟನೆಯ ನಂತರ ಜಿಲ್ಲಾಧಿಕಾರಿ ಗುರುದತ್ತ ಹೆಗಡೆಯವರೊಂದಿಗೆ ಎಸ್ ಪಿ ಮಿಥುನ್ ಕುಮಾರ್ ಕೂಡ ಆಗಮಿಸಿದರು.
ಮನವಿ ನೀಡುವ ಸಂದರ್ಭದಲ್ಲಿ ಈಶ್ವರಪ್ಪ, ಸಣ್ಣಪುಟ್ಟ ವಿಚಾರಕ್ಕೆಲ್ಲ ಸುಮೋಟೋ ಕೇಸು ದಾಖಲಿಸಿಕೊಳ್ತೀರಿ ಎಂದು ಪ್ರಸ್ತಾಪಿಸುತ್ತಾ ತಮ್ಮ ಮೇಲೆ ಹಾಕಿರುವ ಸುಮೋಟೋ ಪ್ರಕರಣಗಳ ಬಗ್ಗೆ ಸೂಕ್ಷ್ಮವಾಗಿ ತಟ್ಟುತ್ತಾ, ಮೈದಾನಕ್ಕೆ ರೈಲ್ವೆ ಹಳಿಯ ಕಬ್ಬಿಣ ಬಳಸಿ ಬೇಲಿ ಹಾಕಿದರೂ ಪ್ರಕರಣ ದಾಖಲಿಸಿಲ್ಲ ಎಂದು ಕ್ರುದ್ಧರಾದರು. ಎಸ್ ಪಿ ಮಿಥುನ್ ರವರನ್ನು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ನಿಮಗೆ ಕಣ್ ಕಾಣೋದಿಲ್ವಾ? ನೀವ್ ಯಾಕೆ ಎಸ್ ಪಿ ಆಗಿದೀರಾ? ಎಂದೆಲ್ಲಾ ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ, ರಾಷ್ಟ್ರಭಕ್ತರ ಬಳಗದ ಸ್ಥಾಪಕ ಕೆ.ಎಸ್.ಈಶ್ವರಪ್ಪ ಎಸ್ ಪಿ ಗೆ ಜಿಲ್ಲಾಧಿಕಾರಿಗಳ ಮುಂದೆಯೇ ಅವಮಾನಿಸುವಂತೆ ಮಾತಾಡಿದರು.
ಸ್ಪಷ್ಟನೆ ಕೊಡಲು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಮುಂದಾದರೂ ಈಶ್ವರಪ್ಪ ಬೆಂಬಲಿಗರ ಕೂಗಾಟದಿಂದಾಗಿ ಅದು ಸ್ಥಳದಲ್ಲಿ ಸಾಧ್ಯವಾಗದೇ ಹೋಯ್ತು.
ಜೈಕಾರದೊಂದಿಗೆ ಈಶ್ವರಪ್ಪ ಮನೆಗೆ ಮರಳಿದರೆ, ಅವಮಾನದೊಂದಿಗೆ ಎಸ್ ಪಿ ಮಿಥುನ್ ಕುಮಾರ್ ತೆರಳುವಂತಾಯಿತು.
ಪೊಲೀಸ್ ಇಲಾಖೆಯ ಮೂಲಗಳೀಗ ಬೇರೆಯದೇ ಸುದ್ದಿ ಹೇಳುತ್ತಿವೆ. ಎಸ್ ಪಿ ಮಿಥುನ್ ಕುಮಾರ್ ರವರು ಈಶ್ವರಪ್ಪ ವಿರುದ್ಧ ಈ ಬಗ್ಗೆ ಲಿಖಿತ ದೂರು ನೀಡಿ ಎಫ್ ಐ ಆರ್ ದಾಖಲಿಸುವ ಬಗ್ಗೆ ತಮ್ಮ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸುತ್ತಿದ್ದಾರೆಂದೇ ಹೇಳಲಾಗುತ್ತಿದೆ. ಕಾನೂನು ತಜ್ಞರ ಅಭಿಪ್ರಾಯ ಸಂಗ್ರಹದಲ್ಲೂ ತೊಡಗಿದ್ದಾರೆಂದೇ ಹೇಳಲಾಗುತ್ತಿದೆ.
ಈ ಬಗ್ಗೆ ಎಸ್ ಪಿ ಮಿಥುನ್ ಕುಮಾರ್ ರವರು ಸ್ಷಷ್ಟ ಪಡಿಸದಿದ್ದರೂ ಪೊಲೀಸ್ ಇಲಾಖೆ ಪಡಸಾಲೆಯಲ್ಲಿ ಈ ಸುದ್ದಿಗೆ ಸಾಕಷ್ಟು ರೆಕ್ಕೆಪುಕ್ಕ ಸೃಷ್ಟಿಯಾಗುತ್ತಿವೆ!