ಏಪ್ರಿಲ್ 7 ರ ಸೋಮವಾರ ಬೆಳಿಗ್ಗೆ ಉದ್ಯೋಗ ಖಾತ್ರಿ (MNREGA) ಯೋಜನೆಯಡಿ ಸೊರಬ ತಾಲೂಕು ಹುರಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಹಾಗು ಅಡುಗೆ ಮನೆ ನಿರ್ಮಾಣದ ಶಂಕುಸ್ಥಾಪನೆಗೆ ಶ್ರಮದಾನ ಕಾರ್ಯಕ್ರಮ
ಏಪ್ರಿಲ್ 7 ರ ಸೋಮವಾರ ಬೆಳಿಗ್ಗೆ
ಉದ್ಯೋಗ ಖಾತ್ರಿ (MNREGA) ಯೋಜನೆಯಡಿ ಸೊರಬ ತಾಲೂಕು ಹುರಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಹಾಗು ಅಡುಗೆ ಮನೆ ನಿರ್ಮಾಣದ ಶಂಕುಸ್ಥಾಪನೆಗೆ ಶ್ರಮದಾನ ಕಾರ್ಯಕ್ರಮ

*ಆತ್ಮೀಯರೇ…*
ದಿನಾಂಕ 07.04.2025ರ ಸೋಮವಾರ ಬೆಳಗ್ಗೆ 8 ಗಂಟೆಗೆ ಉದ್ಯೋಗ ಖಾತ್ರಿ (MNREGA) ಯೋಜನೆಯಡಿ ಸೊರಬ ತಾಲೂಕು ಹುರಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಹಾಗು ಅಡುಗೆ ಮನೆ ನಿರ್ಮಾಣದ ಶಂಕುಸ್ಥಾಪನೆಗೆ ಶ್ರಮದಾನ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಮಾನ್ಯ, ಸಚಿವರಾದ ಶ್ರೀ ಡಿ. ಸುಧಾಕರ್ ರವರು, ಜಿಲ್ಲೆಯ – ಪಕ್ಷದ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಆಗಮಿಸಿ ಶ್ರಮದಾನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ
ಈ ನಾಡು ಕಂಡ ಅಪ್ರತಿಮ ನಾಯಕ ರಾಜೀವ್ ಗಾಂಧಿಯವರ ಕನಸಿನ ಯೋಜನೆಯನ್ನು ಸನ್ಮಾನ್ಯ ಶ್ರೀ ಮನಮೋಹನ್ ಸಿಂಗ್ ರವರು ಪ್ರಧಾನಮಂತ್ರಿಯಾಗಿದ್ದಾಗ ಪರಿಣಾಮಕಾರಿಯಾಗಿ ಜಾರಿಗೆ ತಂದು ದುಡಿಯುವ ಕೈಗಳಿಗೆ ಉದ್ಯೋಗದ ಜೊತೆಗೆ ರಾಷ್ಟ್ರೀಯ ಸಾಕ್ಷರತಾ ಆಂದೋಲನಕ್ಕೆ ನಾಂದಿ ಹಾಡಿದರು. ಇಂತಹ ಅಭೂತಪೂರ್ವ ಕಾರ್ಯಕ್ರಮದಲ್ಲಿ ಭಾಗವಹಿಸುವುದು ನಮ್ಮೆಲ್ಲರ ಭಾಗ್ಯವೆಂದು ಭಾವಿಸಿ ನಾವೆಲ್ಲರೂ ಈ ಸಮಾರಂಬದಲ್ಲಿ ಕೈಜೋಡಿಸಿ ಕಾರ್ಯಕ್ರಮದ ಯಶಸ್ವಿನಲ್ಲಿ ಭಾಗಿಯಾಗೋಣ.
*(ನೀವು ಬನ್ನಿ ನಿಮ್ಮವರನ್ನು ಕರೆತನ್ನಿ ಬರುವಾಗ ಗುದ್ದಲಿ ಹಾಗೂ ಬುಟ್ಟಿ ತರುವುದನ್ನು ಮರೆಯಬೇಡಿ*.)
ನಿಮ್ಮ ಪ್ರೀತಿಯ
*ಎಸ್, ಮಧು ಬಂಗಾರಪ್ಪ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರು ಜಿಲ್ಲಾ ಉಸ್ತುವಾರಿ ಸಚಿವರು ಶಿವಮೊಗ್ಗ.*
(ಈ ಹಿಂದೆ ಶಾಸಕರಾಗಿದ್ದಾಗ ನರೇಗಾ ಯೋಜನೆಯಡಿ ಶ್ರಮದಾನ ಮಾಡಿರುವ ಫೋಟೋ ಇಲ್ಲಿವೆ)