ತಲೆಮರೆಸಿಕೊಂಡರಾ ಯೂ ಆರ್ ಲಕ್ಕಿ ಸ್ಟಾರ್ ಸ್ಪಾ ಅಂಡ್ ಬ್ಯೂಟಿ ಪಾರ್ಲರಿನ ರೂಪಾ ಮತ್ತು ಅನಿಲ್?* *ಯೂ ಆರ್ ಲಕ್ಕಿ ಸ್ಟಾರ್ ಅಂತ ಹೆಸರು ಇಟ್ಟುಕೊಂಡಿರೋ ಈ ಯೂನಿಸೆಕ್ಸ್ ಫ್ಯಾಮಿಲಿ ಪಾರ್ಲರಲ್ಲಿ ಸಂಬಳ ಕೇಳಿದ್ದಕ್ಕೆ ಹೆಂಡತಿ ಇಶಾರೆ ಮೇಲೆ ನಡೆಯಿತಾ ಅತ್ಯಾಚಾರ ಪ್ರಯತ್ನ?!* *ಅವತ್ತು ಶಿವಮೊಗ್ಗದ ಶೇಷಾದ್ರಿ ಪುರಂ ಬಳಿಯ ಯೂ ಆರ್ ಲಕ್ಕಿ ಸ್ಟಾರ್ ಸ್ಪಾ ದಲ್ಲಿ ನಡೆದಿದ್ದೇನು?*

*ತಲೆಮರೆಸಿಕೊಂಡರಾ ಯೂ ಆರ್ ಲಕ್ಕಿ ಸ್ಟಾರ್ ಸ್ಪಾ ಅಂಡ್ ಬ್ಯೂಟಿ ಪಾರ್ಲರಿನ ರೂಪಾ ಮತ್ತು ಅನಿಲ್?*

*ಯೂ ಆರ್ ಲಕ್ಕಿ ಸ್ಟಾರ್ ಅಂತ ಹೆಸರು ಇಟ್ಟುಕೊಂಡಿರೋ ಈ ಯೂನಿಸೆಕ್ಸ್ ಫ್ಯಾಮಿಲಿ ಪಾರ್ಲರಲ್ಲಿ ಸಂಬಳ ಕೇಳಿದ್ದಕ್ಕೆ ಹೆಂಡತಿ ಇಶಾರೆ ಮೇಲೆ ನಡೆಯಿತಾ ಅತ್ಯಾಚಾರ ಪ್ರಯತ್ನ?!*

*ಅವತ್ತು ಶಿವಮೊಗ್ಗದ ಶೇಷಾದ್ರಿ ಪುರಂ ಬಳಿಯ ಯೂ ಆರ್ ಲಕ್ಕಿ ಸ್ಟಾರ್ ಸ್ಪಾ ದಲ್ಲಿ ನಡೆದಿದ್ದೇನು?*

ಕಳೆದ ಮೂರು ತಿಂಗಳುಗಳಿಂದ ಸಿಗದ ಸಂಬಳವನ್ನು ಕೊಡಿ ಎಂದು ಕೇಳಿದ್ದಕ್ಕೆ ಯೂ ಆರ್ ಲಕ್ಕಿ ಸ್ಟಾರ್ ಮಾಲೀಕರು ಸಿಬ್ಬಂದಿಯ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿದ ಬಗ್ಗೆ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಗರ ಮೂಲದ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಕೋಟೆ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದ್ದು, ಯೂ ಆರ್ ಲಕ್ಕಿ ಸ್ಟಾರ್ ಸ್ಪಾ ಅಂಡ್ ಬ್ಯೂಟಿ ಪಾರ್ಲರಿನ ರೂಪಾ ಮತ್ತು ಅನಿಲ್ ಎಂಬುವವರು ತಲೆಮರೆಸಿಕೊಂಡಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.

ಮೂರು ತಿಂಗಳ ಬಾಕಿ ಸಂಬಳ ಕೊಡಿ ಎಂದು ಅದೇ ಸ್ಪಾ ದಲ್ಲಿ ಕೆಲಸ ಮಾಡುವ ಸಾಗರ ಮೂಲದ ಮಹಿಳೆ ಕೇಳಲು ಹೋದಾಗ ಆ ಸ್ಪಾ ದ ರೂಪಾ ಎಂಬುವವರು ತನ್ನ ಗಂಡ ಅನಿಲ್ ಗೆ ಸಂಬಳ ಕೇಳಿದ ಮಹಿಳೆ ಮೇಲೆ ಅತ್ಯಾಚಾರ ಮಾಡಲು ಹೇಳಿದಳು.‌ ಆಗ ಅನಿಲ ಅತ್ಯಾಚಾರಕ್ಕೆ ಪ್ರಯತ್ನಿಸಿದ ಎಂದು ದೂರಿನಲ್ಲಿ ಸಂತ್ರಸ್ತ ಮಹಿಳೆ ವಿವರಿಸಿದ್ದಾಳೆ.

ಈ ದೂರಿನ ಆಧಾರದ ಮೇಲೆ ಬ್ಯೂಟಿ ಪಾರ್ಲರ್ ಮತ್ತು ಸ್ಪಾ ದ ಅನಿಲ್ ಮತ್ತು ರೂಪಾ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದ್ದು, ಈ ಆರೋಪಿಗಳ ವಿರುದ್ಧ 351(2), 76-3(5) ನಂತೆ ಪ್ರಕರಣ ದಾಖಲಾಗಿದೆ.

ಈ ಪ್ರಕರಣ ದಾಖಲಾಗುತ್ತಿದ್ದಂತೆ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆಂದು ಪೊಲೀಸ್ ಮೂಲಗಳು ವಿವರಿಸಿವೆ.