ಕವಿಸಾಲು
01
ನಗರದಲ್ಲಿ ಕಲುಷಿತ ಕುಡಿಯುವ ನೀರು ಸರಬರಾಜು ಕೃಷ್ಣರಾಜ ಶುದ್ಧೀಕರಣ ಘಟಕಕ್ಕೆ ಮಾಜಿ ಪಾಲಿಕೆ ಸದಸ್ಯರಿಂದ ಪರಿಶೀಲನೆ*
ನಗರದಲ್ಲಿ ಕಲುಷಿತ ಕುಡಿಯುವ ನೀರು ಸರಬರಾಜು ಕೃಷ್ಣರಾಜ ಶುದ್ಧೀಕರಣ ಘಟಕಕ್ಕೆ ಮಾಜಿ ಪಾಲಿಕೆ ಸದಸ್ಯರಿಂದ ಪರಿಶೀಲನೆ*
*ಶಿವಮೊಗ್ಗ ನಗರದಲ್ಲಿ ಕೆಲ ದಿನಗಳಿಂದ ಮಣ್ಣು ಮಿಶ್ರಿತ ಕಲುಷಿತ ನೀರು, ಪೂರೈಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಸಾರ್ವಜನಿಕರಿಗೆ ತುಂಬಾ ನೀರಿನ ಸಮಸ್ಯೆಯನ್ನು ಉಂಟು ಮಾಡಿರುವ ಬಾರಿ ಮಳೆ ಕಾರಣದಿಂದ ತುಂಗಾ ಜಲಾಶಯದಲ್ಲಿ ಅಪಾರ ಪ್ರಮಾಣದ ಮಣ್ಣು ಮಿಶ್ರಿತ ನೀರು ಸಂಗ್ರಹವಾಗಿದ್ದು ನವರಾತ್ರಿ ಹಬ್ಬದ ಸಂದರ್ಭದಲ್ಲಿ ಕಲುಷಿತ ಕುಡಿಯುವ ನೀರು ಪೂರೈಕೆಯಾಗಿದ್ದಕ್ಕೆ ನಾಗರೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು*
*ಸಾರ್ವಜನಿಕರು ಈ ನೀರು ಸೇವನೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರಿದ್ದು ಜ್ವರ ಜಾಂಡಿಸ್ ಇತರೆ ಆರೋಗ್ಯದ ಮೇಲೆ ಪರಿಣಾಮ ಬೀರಿದ್ದು ನೀರಿನ ಪ್ರಯೋಗಶಾಲೆ, ಶುದ್ಧೀಕರಣ ಘಟಕದ ಸಮಸ್ಯೆ ಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು*
*ನೀರಿನಲ್ಲಿ ಟಾರ್ಬಿಡಿಟಿ ಪ್ರಮಾಣ ಹೆಚ್ಚಾಗಿದೆ ಶುದ್ಧೀಕರಣದ ಹೊರತಾಗಿಯೂ ಟಾರ್ಬಿಡಿಟಿ ಪ್ರಮಾಣ ಕಡಿಮೆಯಾಗುತ್ತಿಲ್ಲ ಇದರಿಂದ ಕೆಂಪು ಬಣ್ಣದ ನೀರು ಪೂರೈಕೆಯಾಗುತ್ತಿದ್ದು ಈಗಾಗಲೇ 150ಕ್ಕೂ ಹೆಚ್ಚು ಕಾರ್ಮಿಕರನ್ನು ಬಳಸಿಕೊಂಡು ಶುದ್ಧೀಕರಣ ಕಾರ್ಯ ಮಾಡುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿದರು,*
*ಪಾಲಿಕೆ ಮಾಜಿ ಸದಸ್ಯರಾದ ಹೆಚ್ ಸಿ ಯೋಗೇಶ್, ಕೆ ರಂಗನಾಥ್ ಶಿವಕುಮಾರ್ ಕಲೀಂಪಾಶ ರವರು ತಕ್ಷಣ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.*