ಪ್ರಾದೇಶಿಕ ಆಯುಕ್ತರು- ಆಯುಕ್ತರ ಹೆಸರಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಮಹಾ ಲೂಟಿಜನರ ರಕ್ತ ಹೀರುತ್ತಿರುವುದನ್ನು ರೀಜನಲ್ ಕಮೀಷನರ್ ಕೂಡಲೇ ಗಂಭೀರವಾಗಿ ಗಮನಿಸಿಮಾಜಿ ಶಾಸಕ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್ ಗಂಭೀರ ಆರೋಪ

ಪ್ರಾದೇಶಿಕ ಆಯುಕ್ತರು- ಆಯುಕ್ತರ ಹೆಸರಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಮಹಾ ಲೂಟಿ

ಜನರ ರಕ್ತ ಹೀರುತ್ತಿರುವುದನ್ನು
ರೀಜನಲ್ ಕಮೀಷನರ್ ಕೂಡಲೇ ಗಂಭೀರವಾಗಿ ಗಮನಿಸಿ

ಮಾಜಿ ಶಾಸಕ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್ ಗಂಭೀರ ಆರೋಪ

ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಹಗಲು ದರೋಡೆ. ಯಾವತ್ತೂ ಇಂಥದ್ದು ನೋಡಿರಲಿಲ್ಲ. ಇ- ಸ್ವತ್ತು ಹೆಸರಲ್ಲಿ ಅಧಿಕಾರಿಗಳ ಹಿಂಸೆ. ತಮ್ಮ ಆಸ್ತಿಯ ಮೇಲೆ ಸಾಲ, ಮಾರಾಟದ ಹಕ್ಕಿಗಿಂತ ಅಧಿಕಾರಿಗಳ ಕಿರುಕುಳ ಹೆಚ್ಚಾಗಿದೆ.

ಆಯುಕ್ತರು, ಪ್ರಾದೇಶಿಕ ಆಯುಕ್ತರಿಗೆ ಕೊಡಬೇಕು ಅಂತ ನೇರವಾಗಿ ಕೇಳುತ್ತಿದ್ದಾರೆ ಶಿವಮೊಗ್ಗ ಪಾಲಿಕೆ ಅಧಿಕಾರಿಗಳು. ಸ್ವಚ್ಛತೆ ಕೇಳೋ ಹಾಗಿಲ್ಲ. ರಸ್ತೆಗಳೋ ಗುಂಡಿಮಯ. ಸಾರ್ವಜನಿಕರ ಕಷ್ಟ ಕೇಳೋಹಾಗಿಲ್ಲ.
ಪುಣ್ಯಕ್ಕೆ ಆಯುಕ್ತರು ಫೋನ್ ರಿಸೀವ್ ಮಾಡಿದ್ರು. ಅಧಿಕಾರಿಗಳು ಜಾಸ್ತಿ ಆದರೂ ಕೆಲಸ ಮಾಡ್ತಿಲ್ಲ. ಹೊಸ ಕಾಮಗಾರಿ ಆಗ್ತಿಲ್ಲ.

ನಗರಪಾಲಿಕೆ ಪರಿಸ್ಥಿತಿ ದುರಂತಕ್ಕೀಡಾಗಿದೆ. ಜಿಲ್ಲಾಧಿಕಾರಿಗಳು ಶಿವಮೊಗ್ಗದಲ್ಲಿ ಓಡಾಡಿ ಸಮಸ್ಯೆ ಬಗೆಹರಿಸಬೇಕು. ಅಧಿಕಾರಿಗಳ ವರ್ಗಾವಣೆ ಹೆಸರಲ್ಲಿ ಮ್ಯೂಸಿಕಲ್ ಚೇರ್ ಆಗೋಗಿದೆ.

ಇ- ಸ್ವತ್ತು ಖಾತೆ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ಗಮನಹರಿಸಬೇಕು.

ಸರ್ಕಾರಿ ಸಿಟಿ ಬಸ್ 40 ಇದ್ದವು. ಈಗ ಅದನ್ನೆಲ್ಲ ತೆಗೆದು ಬೇರೆ ಬೇರೆ ಕಡೆ ಹಾಕಲಾಗಿದೆ. ಸಾರಿಗೆ ಅಧಿಕಾರಿಗಳು ಕೂಡಲೇ ನಗರ ಸಾರಿಗೆ ಆರಂಭಿಸದಿದ್ದರೆ ಮುತ್ತಿಗೆ ಹಾಕಲಾಗುವುದು.

ಉಪಸ್ಥಿತಿ;
ರಾಮಕೃಷ್ಣ,ಸಿದ್ದಪ್ಪ, ದೀಪಕ್ ಸಿಂಗ್,ನರಸಿಂಹ ಗಂಧದ ಮನೆ, ರಾಜಮ್ಮ, ರಘು…