*ಹಿಂದೂ ಸಂಘಟನೆಯ ಗಣಪತಿ ವಿಸರ್ಜನೆಗೆ ಸಾಥ್ ನೀಡಿದ ಕ್ರಿಶ್ಚಿಯನ್ನರು- ಮುಸ್ಲೀಮರು…*
*ಹಿಂದೂ ಸಂಘಟನೆಯ ಗಣಪತಿ ವಿಸರ್ಜನೆಗೆ ಸಾಥ್ ನೀಡಿದ ಕ್ರಿಶ್ಚಿಯನ್ನರು- ಮುಸ್ಲೀಮರು…*

ಸೌಹಾರ್ದವನ್ನೇ ಕೆಡಿಸುವ ಕಿಡಿಗೇಡಿಗಳ ಮಧ್ಯೆ ಹೀಗೊಂದು ಅನುಕರಣೀಯ ಘಟನೆಯೊಂದು ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗೋಪಾಳದ ಪುರದಾಳ್ ರಸ್ತೆಯ ಸಿದ್ದೇಶ್ವರ ಸರ್ಕಲ್ಲಿನಲ್ಲಿ ಹಿಂದೂ ಸಂಘಟನೆಯ ಮುಖಂಡರಾದ ಪ್ರದೀಪ್ ಕಾವಡ ರವರ ನೇತೃತ್ವದಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಿ ವಿಸರ್ಜನೆ ಮಾಡುವಾಗ ಅದೇ ಏರಿಯಾದ ಮುಸ್ಲಿಂ ಮುಖಂಡ ರಿಜ್ವಾನ್ ಮತ್ತು ತಂಡ, ಕ್ರಿಶ್ಚಿಯನ್ ಮುಖಂಡರಾದ ಚಿರಂಜೀವಿ ಬಾಬಣ್ಣ ಮತ್ತು ತಂಡ ಹಣ್ಣು, ತಂಪು ಪಾನೀಯ ನೀಡಿ ಮೆರವಣಿಗೆಗೆ ಮೆರಗು ಒದಗಿಸಿದರು.


