*ಶಿವಮೊಗ್ಗ ಎಪಿಎಂಸಿಯಲ್ಲಿ ಅನುಮಾನಾಸ್ಪದ ಕಾಮಗಾರಿಗಳು!* *ಲೋಕಾಯುಕ್ತ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಿ…* *ಎಪಿಎಂಸಿಯಲ್ಲಿ ಟ್ರಸ್ ಮತ್ತು ಶೀಟ್ ಅಳವಡಿಸಿಕೊಂಡ 33 ಮಳಿಗೆಗಳು ಮತ್ತು ಎಇಇ ಚಂದ್ರಶೇಖರ್…* *ಏನಿದು ಕಥೆ?- ಕಾರ್ಯದರ್ಶಿ ಸತೀಶ್ ಯಾಕೆ ಸಂಪೂರ್ಣ ಮೌನ?*

*ಶಿವಮೊಗ್ಗ ಎಪಿಎಂಸಿಯಲ್ಲಿ ಅನುಮಾನಾಸ್ಪದ ಕಾಮಗಾರಿಗಳು!*

*ಲೋಕಾಯುಕ್ತ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಿ…*

*ಎಪಿಎಂಸಿಯಲ್ಲಿ ಟ್ರಸ್ ಮತ್ತು ಶೀಟ್ ಅಳವಡಿಸಿಕೊಂಡ 33 ಮಳಿಗೆಗಳು ಮತ್ತು ಎಇಇ ಚಂದ್ರಶೇಖರ್…*

*ಏನಿದು ಕಥೆ?- ಕಾರ್ಯದರ್ಶಿ ಸತೀಶ್ ಯಾಕೆ ಸಂಪೂರ್ಣ ಮೌನ?*

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಶಿವಮೊಗ್ಗದ ಸಗಟು ತರಕಾರಿ ಮಾರುಕಟ್ಟೆ ಪ್ರಾಂಗಣದಲ್ಲಿ ಲೀವ್ ಅಂಡ್ ಲೈಸೆನ್ಸ್ ಆಧಾರದ ಮೇಲೆ ಹಂಚಿಕೆ ಮಾಡಲಾಗಿರುವ ಒಟ್ಟು 20 ಮಳಿಗೆಗಳು ಹಾಗೂ ಲೀಸ್ ಕಂ ಸೇಲ್ ಆಧಾರದ ಮೇಲೆ ಹಂಚಿಕೆಯಾಗಿರುವ 13 ಮಳಿಗೆಗಳ ಮುಂದೆ ನಿರ್ಮಿಸಲಾಗಿರುವ ಟ್ರಸ್ ಮತ್ತು ಶೀಟ್ ಗಳ ಅಳವಡಿಕೆ ಕಾಮಗಾರಿಯಲ್ಲಿ ಎಲ್ಲದೂ ಸರಿಯಿಲ್ಲ. ಈ ಬಗ್ಗೆ ಲೋಕಾಯುಕ್ತ ಸು ಮೋಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವುದೇ?

ಶಿವಮೊಗ್ಗ ಎಪಿಎಂಸಿ ಆವರಣದಲ್ಲಿ ನಿರ್ಮಿಸಲಾಗಿರುವ ಲೀವ್ ಅಂಡ್ ಲೈಸೆನ್ಸ್ ಆಧಾರದ ಒಟ್ಟು 20 ಮಳಿಗೆಗಳ ಮುಂಭಾಗಕ್ಕೆ ಟ್ರಸ್ ಮತ್ತು ಶೀಟ್ ಗಳ ನಿರ್ಮಾಣಕ್ಕೆ 2025-26ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಯಡಿ ಷರತ್ತುಗಳಿಗೊಳಪಟ್ಟು ಆಡಳಿತಾತ್ಮಕ ಮಂಜೂರಾತಿ ನೀಡಲಾಗಿತ್ತು.

ಇದಕ್ಕೆ ಅನುಮೋದನೆ ನೀಡಿರುವ ಟೆಂಡರ್ ಮೊತ್ತ 38,49,362(ಜಿ.ಎಸ್.ಟಿ+)₹.

ಉಳಿದಂತೆ, ಲೀಸ್ ಕಂ ಸೇಲ್ ಆಧಾರದಲ್ಲಿ ಹಂಚಿಕೆಯಾಗಿರುವ ಒಟ್ಟು 13 ಮಳಿಗೆಗಳ ಮುಂದೆಯೂ ಥೇಟು ಅದೇ ರೀತಿಯಲ್ಲಿ ಟ್ರಸ್ ಮತ್ತು ಶೀಟ್ ಗಳನ್ನು ಅಳವಡಿಸಲಾಗಿದೆ. ಈ ಮಳಿಗೆಗಳ ವರ್ತಕರು/ ದಲ್ಲಾಳರು ತಮ್ಮ ಸ್ವಂತ ಖರ್ಚಿನಲ್ಲಿ ತಮ್ಮ ಮಳಿಗೆಗಳ ಮುಂದೆ ಟ್ರಸ್ ಮತ್ತು ಶೀಟ್ ಗಳನ್ನು ಅಳವಡಿಸಿಕೊಳ್ಳಲು ಅನುಮತಿ ನೀಡಿರು ಕೃಷಿ ಮಾರಾಟ ಇಲಾಖೆಯ ಜಂಟಿ ನಿರ್ದೇಶಕರು ಅಲ್ಲಿ ಸ್ಪಷ್ಟವಾಗಿ ಈ ವರ್ತಕರು/ ದಲ್ಲಾಳರಿಂದ ಎಷ್ಟು ಹಣ ಪಡೆಯಬಹುದೆಂದು ಅಂದಾಜು ಸೂಚಿಸಿಲ್ಲ.

ಶಿವಮೊಗ್ಗ ಎಪಿಎಂಸಿಯಲ್ಲಿ ಗುತ್ತಿಗೆದಾರರು ಅಳವಡಿಸಿದ ಶೀಟಿನ ಗೇಜ್, ಗುಣಮಟ್ಟ ಬಹಿರಂಗ ಪಡಿಸಿಲ್ಲದಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

ಈ ಬಗ್ಗೆ ಲೋಕಾಯುಕ್ತ ಪೊಲೀಸರು ಶಿವಮೊಗ್ಗ ಎಪಿಎಂಸಿ ಮಳಿಗೆಗಳ ಮುಂದೆ ಅಳವಡಿಸಿದ ಟ್ರಸ್ ಮತ್ತು ಶೀಟ್ ಕಾಮಗಾರಿಯ ಅಸಲಿಯತ್ತು ಬಯಲು ಮಾಡಬೇಕು. ಜೊತೆಗೆ, ಕಳೆದ 15 ವರ್ಷಗಳಲ್ಲಿ ಶಿವಮೊಗ್ಗ ಎಪಿಎಂಸಿ ವ್ಯಾಪ್ತಿಯಲ್ಲಿ ಆಗಿರುವ ವಿವಿಧ ಕಾಮಗಾರಿಗಳ ಸತ್ಯಾಸತ್ಯತೆ ಕೂಡ ಓರೆಗೆ ಹಚ್ಚಲು ಮುಂದಾಗಬೇಕಿದೆ.