*ಶಿವಮೊಗ್ಗ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾಗಿ ಜಿ.ಎನ್.ಸುಧೀರ್ ಆಯ್ಕೆ;* *ಕೆಂಪಾದ ಕಾಂಗ್ರೆಸ್ ಅಧ್ಯಕ್ಷರು…* *ಕಾಂಗ್ರೆಸ್ ಆಫೀಸಿಗೆ ಸುಧೀರ್ ಬಂದರೆ ಗೇಟು ಹಾಕುತ್ತೇವೆಂದ ಅಧ್ಯಕ್ಷ ಯೋಗೇಶ್…*

*ಶಿವಮೊಗ್ಗ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾಗಿ ಜಿ.ಎನ್.ಸುಧೀರ್ ಆಯ್ಕೆ;*

*ಕೆಂಪಾದ ಕಾಂಗ್ರೆಸ್ ಅಧ್ಯಕ್ಷರು…*

*ಕಾಂಗ್ರೆಸ್ ಆಫೀಸಿಗೆ ಸುಧೀರ್ ಬಂದರೆ ಗೇಟು ಹಾಕುತ್ತೇವೆಂದ ಅಧ್ಯಕ್ಷ ಯೋಗೇಶ್…*

ಕೆಪಿಸಿಸಿ ಅಧ್ಯಕ್ಷರು, ಕಾರ್ಯಾಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ಮೀರಿ ಶಿವಮೊಗ್ಗ ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಪಕ್ಷದಿಂದ ಒಂದಿಷ್ಟು ದೂರವನ್ನೇ ಕಾಪಾಡಿಕೊಂಡು ಬಂದ ಜಿ.ಎನ್.ಸುಧೀರ್ ರವರಿಗೆ ನೀಡಲಾಯಿತೇ?

ನ.6 ರಂದು ಇಡೀ ದಿನ ಶಿವಮೊಗ್ಗ ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಸ್ಥಾನದ ಆಯ್ಕೆಗೆ ಸಂಬಂಧಿಸಿದಂತೆ ಎಡ- ಬಲ ವಾದಗಳು ನಡೆದೇ ಇದ್ದವು. ಚುನಾವಣಾ ಹಿಂದಿನ ದಿನ ಕೂಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೂ ಸೇರಿದಂತೆ ಹಿರಿಯ ತಲೆಗಳು ಕೂಡಿ ಕಾಂಗ್ರೆಸ್ ಕಾರ್ಯಕರ್ತರಿಗೇ ಡಿಸಿಸಿ ಉಪಾಧ್ಯಕ್ಷ ಸ್ಥಾನ ನೀಡಿಸಬೇಕೆಂದು ಜಿಲ್ಲಾಧ್ಯಕ್ಷ ಯೋಗೇಶ್ ರಿಗೆ ಒತ್ತಾಯಿಸಿದ್ದರು. ಅಧ್ಯಕ್ಷರು ಈ ಸಂಬಂಧ ಸಭೆಯನ್ನು ಕರೆದು ಚರ್ಚಿಸಿ ಇಂದು ಬೆಳಿಗ್ಗೆಯಿಂದಲೂ ಡಿಸಿಸಿ ಆವರಣದಲ್ಲೇ ಕಾಯುತ್ತಿದ್ದರು.

ಉಪಾಧ್ಯಕ್ಷ ಸ್ಥಾನಕ್ಕೆ ಎಂ.ಶ್ರೀಕಾಂತ್, ಸುಧೀರ್, ಸಿ.ಹನುಮಂತು ಮತ್ತು ದುಗ್ಗಪ್ಪ ಗೌಡರವರು ನಾಮಪತ್ರ ಸಲ್ಲಿಸಿದ್ದರು. ನಂತರದ ಸ್ಕೂಟನಿಯಲ್ಲಿ ಹನುಮಂತು ಮತ್ತು ದುಗ್ಗಪ್ಪ ಗೌಡರ ನಾಮಪತ್ರಗಳು ತಿರಸ್ಕರಿಸಲ್ಪಟ್ಟಿದ್ದವು.

ನಂತರ, ಕಣದಲ್ಲಿ ಉಳಿದಿದ್ದ ಸುಧೀರ್ ಮತ್ತು ಎಂ.ಶ್ರೀಕಾಂತ್ ರವರಿಬ್ಬರಲ್ಲಿ ಶ್ರೀಕಾಂತ್ ತಮ್ಮ ನಾಮಪತ್ರ ವಾಪಸ್ ಪಡೆದು ಸುಧೀರ್ ರವರಿಗೆ ಡಿಸಿಸಿ ಉಪಾಧ್ಯಕ್ಷ ಪಟ್ಟ ಬಿಟ್ಟುಕೊಟ್ಟರು.

ಕಾಂಗ್ರೆಸ್ ಪಕ್ಷದವರಲ್ಲದ ಸುಧೀರ್ ಉಪಾಧ್ಯಕ್ಷರಾಗುತ್ತಿದ್ದಾರೆಂಬ ಮಾಹಿತಿ ಪಡೆದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಸಿ.ಯೋಗೇಶ್ ನೇತೃತ್ವದ ತಂಡ ಮುನಿಸಿನಿಂದಲೇ ಡಿಸಿಸಿ ಬ್ಯಾಂಕ್ ಆವರಣ ತೊರೆಯಿತು

ಸುಧೀರ್ ರವರನ್ನು ಕಾಂಗ್ರೆಸ್ ಕಚೇರಿಗೆ ಕರೆತರುವೆ ಎಂಬ ಕಾಂಗ್ರೆಸ್ ಮುಖಂಡರೊಬ್ಬರ ಮಾತಿಗೆ, ಆತ ಬಂದರೆ ಒಳಗೆ ಬರದಂತೆ ಗೇಟು ಹಾಕುತ್ತೇವೆಂದು ಯೋಗೇಶ್ ಉತ್ತರಿಸಿದ್ದು ಕೂಡ ಕಂಡು ಬಂತು.