ಅದ್ಧೂರಿ ಸ್ವಾಗತ ಬೇಡ: ಸಚಿವ ಮಧು ಬಂಗಾರಪ್ಪ ಸೂಚನೆ
ಅದ್ದೂರಿ ಸ್ವಾಗತ ಬೇಡ: ಸಚಿವ ಮಧು ಬಂಗಾರಪ್ಪ ಸೂಚನೆ
ಶಿವಮೊಗ್ಗ: ಮುಖ್ಯ ಮಂತ್ರಿ ಡಿ.ಕೆ.ಶಿಕುಮಾರ್ ಸಂಪಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿರುವ ಸಚಿವ ಮಧುಬಂಗಾರಪ್ಪ ಅವರು, ಯಾವುದೇ ಅದ್ದೂರಿ ಸ್ವಾಗತ, ರ್ಯಾಲಿಗಳನ್ನು ಆಯೋಜಿಸಬಾರದೆಂದು ಬೆಂಬಲಿಗರು ಹಾಗೂ ಅಭಿಮಾನಿಗಳಿಗೆ ಸೂಚಿಸಿದ್ದಾರೆ.
ಜಿಲ್ಲೆಯಲ್ಲಿ ಬರಗಾಲ ಇದೆ. ಜೂನ್ ತಿಂಗಳಲ್ಲಿ ಮಳೆಯಾಗಿಲ್ಲ. ಕೆರೆ ಕಟ್ಟೆಗಳಿಗೆ ನೀರು ಬಾರದ ಕಾರಣ ಬಹುತೇಕ ರೈತರು ಭೂಮಿಗೆ ಭಿತ್ತನೆ ಕೂಡ ಮಾಡಿಲ್ಲ. ಬರ ಪ್ರದೇಶಗಳಿಗೆ ಹಾಗೂ ಅತಿವೃಷ್ಟಿ ಪ್ರದೇಶ ಗಳಿಗೆ ಭೇಟಿ ನೀಡಿ ರೈತರ ಸಂಕಷ್ಟ ಆಲಿಸಬೇಕು. ಇದು ನಮಗೆ ಮೊದಲ ಆದ್ಯತೆಯಾಗಿದೆ ಆದ್ದರಿಂದ ಪಕ್ಷದ ಕಾರ್ಯಕರ್ತರು ಯಾವುದೇ ಅದ್ದೂರಿ ಸ್ವಾಗತ ಸಮಾರಂಭ ಏರ್ಡಿಸಬಾರದೆಂದು ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಜಿಲ್ಲಾ ಕಾಂಗ್ರೆಸ್‌ನಿಂದ ಸಚಿವರನ್ನು ಸ್ವಾಗತಿಸುವ ಅದ್ದೂರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೈಕ್, ಕಾರ್ ರ್ಯಾಲಿ ಮೂಲಕ ಆಹ್ವನಿಸುವ ಮತ್ತು ಅದಕ್ಕಾಗಿ ತಯಾರಿ ಮಾಡುವ ಯೋಚನೆ ಇತ್ತು. ಆದರೆ ಸಚಿವ ಮಧುಬಂಗಾರಪ್ಪ ಅವರು, ಪಕ್ಷದ ಮುಖಂಡರನ್ನು ಸಂಪರ್ಕಿಸಿ ಯಾವುದೇ ಕಾರಣಕ್ಕೂ ಬೇಡ ಎಂದು ಹೇಳಿದ್ದಾರೆ.
ಸೊರಬದಲ್ಲಿಯೂ ಕಾರ್ಯಕರ್ತರಿಗೆ ಇದ್ದನ್ನೇ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಶನಿವಾರ ಶಿವಮೊಗ್ಗ ನಗರಕ್ಕೆ ಆಗಮಿಸುವ ಸಚಿವರು, ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡಲಿದ್ದಾರೆ, ಬಳಿಕ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯುವ ಪ್ರಗತಿ ಪರಿಶೀಲನೆ ಸಭೆಗೆ ಹಾಜರಾಗುವರು ಎಂದು ಪಕ್ಷದ ಮೂಲಗಳು ತಿಳಿಸಿವೆ.


