*ಶಿವಮೊಗ್ಗ; ಗೋಪಾಳದ ಆಶೀರಾಜ್ ಬಿಲ್ಡರ್ಸ್ ಅ್ಯಂಡ್ ಡೆವಲಪರ್ಸ್ ಕಚೇರಿ ಮೇಲೆ ತುಂಗಾನಗರ ಪೊಲೀಸರ ದಾಳಿ* *ಯಾಕೆ ನಡೆದಿದೆ ದಾಳಿ? ಅಲ್ಲಿ ಸಿಕ್ಕಿದ್ದೇನು?*
*ಶಿವಮೊಗ್ಗ; ಗೋಪಾಳದ ಆಶೀರಾಜ್ ಬಿಲ್ಡರ್ಸ್ ಅ್ಯಂಡ್ ಡೆವಲಪರ್ಸ್ ಕಚೇರಿ ಮೇಲೆ ತುಂಗಾನಗರ ಪೊಲೀಸರ ದಾಳಿ*
*ಯಾಕೆ ನಡೆದಿದೆ ದಾಳಿ? ಅಲ್ಲಿ ಸಿಕ್ಕಿದ್ದೇನು?*

ಶಿವಮೊಗ್ಗ ಗೋಪಾಳದ ರಂಗನಾಥ ಬಡಾವಣೆಯಲ್ಲಿರುವ ಆಶೀರಾಜ್ ಬಿಲ್ಡರ್ಸ್ ಅ್ಯಂಡ್ ಡೆವಲಪರ್ಸ್ ಕಚೇರಿ ಮೇಲೆ ನ್ಯಾಯಾಲಯದಿಂದ ಶೋಧನಾ ವಾರಂಟ್ ಪಡೆದ ತುಂಗಾನಗರ ಪೊಲೀಸರು ಗುರುವಾರದಂದು ದಾಳಿ ನಡೆಸಿದರು.
ಕಡಿಮೆ ದರದಲ್ಲಿ ಮನೆ ಕಟ್ಟಿಕೊಡುವುದಾಗಿ ಹಾಗೂ ಮನೆ ಕಟ್ಟಲು ಕಡಿಮೆ ದರದಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದ ಆಶೀಸ್ ಡೆವೆಲಪರ್ಸ್ ಮೇಲೆ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ತನಿಖಾ ಸಂಬಂಧಿತ ದಾಳಿ ಇದಾಗಿದ್ದು, ಮಹತ್ವದ ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ.
ವಿಜಯ್ ಕುಮಾರ್ ಮತ್ತು ಲಕ್ಷ್ಮೀಕಾಂತ್ ತಾವು ಮೋಸ ಹೋಗಿದ್ದರ ಬಗ್ಗೆ ನೀಡಿದ ದೂರಿನ ಆಧಾರದ ಮೇಲೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


