ಸುಬ್ಬಯ್ಯ ಮೆಡಿಕಲ್ ಕಾಲೇಜು*; *ಗಲ್ಫಿನ ಬೆಹರೈನ್ ಮೂಲದ ಮೆಡಿಕಲ್ ವಿದ್ಯಾರ್ಥಿನಿ ಆತ್ಮಹತ್ಯೆ* *ಆಂಧ್ರ ಮೂಲದ ಹುಡುಗನಿಗೆ ಪ್ರೀತಿಸುತ್ತಿದ್ದ ಮಗಳಿಗೆ ತಂದೆ ಬುದ್ದಿ ಹೇಳಿದ್ದೇ ಆತ್ಮಹತ್ಯೆಗೆ ಕಾರಣಾನಾ?*

*ಸುಬ್ಬಯ್ಯ ಮೆಡಿಕಲ್ ಕಾಲೇಜು*;

*ಗಲ್ಫಿನ ಬೆಹರೈನ್ ಮೂಲದ ಮೆಡಿಕಲ್ ವಿದ್ಯಾರ್ಥಿನಿ ಆತ್ಮಹತ್ಯೆ*

*ಆಂಧ್ರ ಮೂಲದ ಹುಡುಗನಿಗೆ ಪ್ರೀತಿಸುತ್ತಿದ್ದ ಮಗಳಿಗೆ ತಂದೆ ಬುದ್ದಿ ಹೇಳಿದ್ದೇ ಆತ್ಮಹತ್ಯೆಗೆ ಕಾರಣಾನಾ?*

ಶಿವಮೊಗ್ಗದ ಸುಬ್ಬಯ್ಯ ಮೆಡಿಕಲ್ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿನಿ ಪೋಷಕರೊಂದಿಗೆ ಪ್ರೇಮದ ವಿಚಾರದಲ್ಲಿ ಜಗಳ ಮಾಡಿಕೊಂಡು ಆತ್ಯಹತ್ಯೆ ಮಾಡಿಕೊಂಡಿರೋ ಘಟನೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವಿದ್ಯಾರ್ಥಿನಿ ಕುಮಾರಿ ವಿಷ್ಣುಪ್ರಿಯಾ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.

ಕುಮಾರಿ ವಿಷ್ಣುಪ್ರಿಯಾಳ ತಂದೆ ಮತ್ತು ತಾಯಿ ಬಹರೈನ್ ನಲ್ಲಿ ವಾಸಿಸುತ್ತಿದ್ದು, ತಮ್ಮ ಮಗಳ ಸಾವಿನ ಸುದ್ದಿ‌ ಕೇಳಿ ಶಿವಮೊಗ್ಗದತ್ತ ಹೊರಟಿದ್ದಾರೆ. ಶಿವಮೊಗ್ಗಕ್ಕೆ ನಾಳೆ ಬಂದು ಮೃತದೇಹ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕುಮಾರಿ ವಿಷ್ಣುಪ್ರಿಯಾ ವೈದ್ಯಕೀಯ ಶಿಕ್ಷಣ ಮುಗಿಸಿ ಇಂಟರ್ನ್ ಶಿಪ್ ಮಾಡುತ್ತಿದ್ದಳು ಎಂದು ಹೇಳಲಾಗಿದ್ದು, ಆಂಧ್ರ ಮೂಲದ ಯುವಕನನ್ನು ಪ್ರೀತಿಸುತ್ತಿದ್ದಳೆಂದು ಪ್ರಾಥಮಿಕ ಮೂಲಗಳು ತಿಳಿಸಿವೆ.

ಆತ್ಮಹತ್ಯೆಗೆ ಮುನ್ನ ವಿದ್ಯಾರ್ಥಿನಿ ತನ್ನ ತಂದೆಯೊಂದಿಗೆ ಮದುವೆ ವಿಚಾರದಲ್ಲಿ ಸಾಕಷ್ಟು ಜಗಳವನ್ನು ಫೋನಿನಲ್ಲಿಯೇ ಮಾಡಿಕೊಂಡಿದ್ದಳು. ಅಪ್ಪನ ಬುದ್ದಿವಾದ ಕೇಳದೇ ತಾನು ಪ್ರೀತಿಸುವ ಹುಡುಗನ ಬಗ್ಗೆಯೇ ಹೇಳುತ್ತಿದ್ದುದರಿಂದ ಬೈಸಿಕೊಂಡಿದ್ದಳು. ಆ ನಂತರ ಬೇಸರದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಮೂಲಗಳು ತಿಳಿಸಿವೆ.

ಹಾಸ್ಟೆಲ್ಲಿನ ವಾರ್ಡ್ ರೋಬಿನ ಹ್ಯಾಂಡಲ್ಲಿಗೆ ಹಗ್ಗ ಸಿಗಿಸಿ, ಕೊರಳೊಡ್ಡಿರುವ ವಿದ್ಯಾರ್ಥಿನಿ ವಿಷ್ಣುಪ್ರಿಯಾ ಕಾಲು ನೆಲಕ್ಕೆ ತಾಕುತ್ತಿದ್ದುದರಿಂದ ಬಲವಂತದಿಂದಲೇ ಕಾಲು ಉದ್ದ ಮಾಡಿಕೊಂಡು ಉಸಿರು ಬಿಗಿದುಕೊಂಡಿರುವುದು ಮೇಲ್ನೋಟಕ್ಕೆ ಪೊಲೀಸರಿಗೆ ಕಂಡಿದೆ.

ಪೊಲೀಸರ ತನಿಖೆಯಿಂದ ಸತ್ಯ ಏನೆಂಬುದು ಬಯಲಿಗೆ ಬರಲಿದೆ.