*ಶಾಸಕ ಚನ್ನಿ ನಮ್ ಹುಡುಗ; ನಾನು ಅಥವಾ ಕಾಂತೇಶ್ ಸ್ಪರ್ಧೆ ಖಚಿತ;ಕೆ.ಎಸ್.ಈಶ್ವರಪ್ಪ*
*ಶಾಸಕ ಚನ್ನಿ ನಮ್ ಹುಡುಗ; ನಾನು ಅಥವಾ ಕಾಂತೇಶ್ ಸ್ಪರ್ಧೆ ಖಚಿತ;ಕೆ.ಎಸ್.ಈಶ್ವರಪ್ಪ*
ಶಾಸಕ ಚನ್ನಬಸಪ್ಪ ನಮ್ಮ ಹುಡುಗ. ನೀವು ಸೀರಿಯಸ್ಸಾಗಿ ತಗೋಬೇಡಿ. ಹಿಂದುತ್ವ ಉಳಿಸುವ ಹೊತ್ತಲ್ಲಿ ರಾಜಕಾರಣವೂ ಬರುತ್ತೆ. ಏನೋ ಅವನ ಬಾಯಲ್ಲಿ ಬಂದಿದೆ ಎಂದು
ಮಾಜಿ ಉಪಮುಖ್ಯಮಂತ್ರಿ, ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಕೆ.ಎಸ್.ಈಶ್ವರಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಚುನಾವಣೆಯಲ್ಲಿ ಸ್ಪರ್ಧೆ ಖಚಿತ. ಎಲ್ಲರೊಂದಿಗೂ ಕುಳಿತು ಮಾತಾಡಿದ ನಂತರ ಈ ಸ್ಪರ್ಧೆಯ ನಿರ್ಧಾರ ಕೈಗೊಂಡಿದ್ದೇವೆ. ಬಿಜೆಪಿ ರಾಜ್ಯದ ನಾಯಕರಿಗೂ ಮಾಹಿತಿ ನೀಡಿದ್ದೇವೆ. ಅವರ ತೀರ್ಮಾನ ಏನೆಂದು ಗೊತ್ತಾಗಲಿದೆ ಎಂದರು.
ಅಪ್ಪ ನಿಲ್ಲುವರೋ ಮಗ ನಿಲ್ಲುವರೋ ತೀರ್ಮಾನ ತೆಗೆದುಕೊಳ್ಳುತ್ತೇವೆ. ಈಗಷ್ಟೇ ಆರಂಭವಾಗಿದೆ.ಯಾವ ಕಾರಣಕ್ಕೂ ಕೈಬಿಡೋಲ್ಲ ಎಂದು ಎಲ್ಲ ವರ್ಗದ ಜನ ಹೇಳಿದ್ದಾರೆ.ಅದರಂತೆ ಸ್ಪರ್ಧೆ ಖಚಿತ ಎಂದರು.


