*ಸ್ಬೂಡಾ ಅಧ್ಯಕ್ಷ ಸ್ಥಾನದಲ್ಲೇ ಮುಂದುವರೆಯಲಿದ್ದಾರಾ ಹೆಚ್.ಎಸ್.ಸುಂದರೇಶ್?* *ಸಿಎಂ ಡಿಕೆಶಿ ಏನಂದ್ರು?!*

*ಸ್ಬೂಡಾ ಅಧ್ಯಕ್ಷ ಸ್ಥಾನದಲ್ಲೇ ಮುಂದುವರೆಯಲಿದ್ದಾರಾ ಹೆಚ್.ಎಸ್.ಸುಂದರೇಶ್?*

*ಸಿಎಂ ಡಿಕೆಶಿ ಏನಂದ್ರು?!*

ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಎರಡನೇ ಅವಧಿಯಲ್ಲೂ ಮುಂದುವರೆದಿರುವ ಹೆಚ್.ಎಸ್.ಸುಂದರೇಶ್, ಕಾಂಗ್ರೆಸ್ ಸರ್ಕಾರದ ಅವಧಿ ಮುಗಿಯುವವರೆಗೂ ಅಧ್ಯಕ್ಷರಾಗಿಯೇ ಮುಂದುವರೆಯುವ ಸೂಚನೆಗಳು ದಟ್ಟವಾಗಿವೆ.

ಡಿ.ಕೆ.ಶಿವಕುಮಾರ್ ರವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ವಿರೋಧ ಪಕ್ಷದ ಸ್ಥಾನದಲ್ಲಿದ್ದೂ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿದ್ದ ಸುಂದರೇಶ್ ರವರನ್ನು ಕಾಂಗ್ರೆಸ್ ತನ್ನ ಸರ್ಕಾರ ಬರುತ್ತಿದ್ದಂತೆಯೇ ಸ್ಬೂಡಾ ಅಧ್ಯಕ್ಷಗಿರಿಗೆ ಸುಂದರೇಶ್ ರನ್ನು ನೇಮಕ ಮಾಡಲಾಗಿತ್ತು.

ಆನಂತರ, ಎರಡು ವರ್ಷ ಮುಗಿಯುತ್ತಿದ್ದಂತೆಯೇ ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರ ಬದಲಾವಣೆ ಆಗಬೇಕಿತ್ತು. ಮುಖ್ಯಮಂತ್ರಿ ಗಾದಿಯ ಅಲುಗಾಟದ ಹಿನ್ನೆಲೆಯಲ್ಲಿ ಬದಲಾವಣೆಯ ಕಂಟಕದಿಂದ ಅಧ್ಯಕ್ಷರ ಆಡಳಿತಾವಧಿ ಮತ್ತೆ ಮುಂದುವರೆಸಲಾಗಿತ್ತು.

ಡಿಕೆಶಿ ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ಮತ್ತೆ ಶಿವಮೊಗ್ಗದ ಸ್ಬೂಡಾ ಅಧ್ಯಕ್ಷ ಗಾದಿಗೆ ಬೇರೊಬ್ಬರ ನೇಮಕದ ಚರ್ಚೆಗಳು ಎದ್ದಿದ್ದು, ಈ ಸ್ಥಾನಕ್ಕೆ ಹಲವರ ಲಾಬಿಗಳು ಮುಂದುವರೆದಿವೆ.

ಕೆಲವರು ಸ್ವತಃ ಮುಖ್ಯಮಂತ್ರಿ ಡಿಕೆಶಿಯವರ ಬಳಿ ಹೋಗಿ ಸುಂದರೇಶ್ ರವರನ್ನು ಬದಲಾಯಿಸಿ ಸ್ಬೂಡಾ ಅಧ್ಯಕ್ಷ ಗಾದಿಗೆ ತಮ್ಮನ್ನು ಪರಿಗಣಿಸಬೇಕೆಂದು ಒತ್ತಡ ಹೇರಲು ಹೋದಾಗ ಸ್ವತಃ ಡಿಕೆಶಿಯವರೇ, ನಾನೇ ನೇಮಕ ಮಾಡಿರೋ ಸುಂದರೇಶನನ್ನು ನಾನೇಕೆ ಕಿತ್ತಾಕಲಿ…ಸಾಧ್ಯವಿಲ್ಲ ಎಂದು ನೇರವಾಗಿಯೇ ಹೇಳಿ ಕಳಿಸಿದ್ದಾರೆಂದು ಶಿವಮೊಗ್ಗದಲ್ಲಿ ಚರ್ಚೆಗಳು ನಡೆದಿವೆ.