ಮೇ 1ರಿಂದ 4ರವರೆಗೆ ಶಿವಮೊಗ್ಗದ ನವುಲೆಯಲ್ಲಿರುವ ಕೆಎಸ್‌ಸಿಎ ಮೈದಾನದಲ್ಲಿ ಶಿವಮೊಗ್ಗ ಪ್ರಿಮೀಯರ್ ಲೀಗ್ (ಎಸ್‌ಪಿಎಲ್)ನ ಮೂರನೇ ಆವೃತ್ತಿ ಆಯೋಜನೆ* *ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಕೆಎಸ್‌ಸಿಎ ಸದಸ್ಯ, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್*

*ಮೇ 1ರಿಂದ 4ರವರೆಗೆ ಶಿವಮೊಗ್ಗದ ನವುಲೆಯಲ್ಲಿರುವ ಕೆಎಸ್‌ಸಿಎ ಮೈದಾನದಲ್ಲಿ ಶಿವಮೊಗ್ಗ ಪ್ರಿಮೀಯರ್ ಲೀಗ್ (ಎಸ್‌ಪಿಎಲ್)ನ ಮೂರನೇ ಆವೃತ್ತಿ ಆಯೋಜನೆ*

*ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಕೆಎಸ್‌ಸಿಎ ಸದಸ್ಯ, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್*

ಶಿವಮೊಗ್ಗ: ಮೇ 1ರಿಂದ 4ರವರೆಗೆ ಶಿವಮೊಗ್ಗದ ನವುಲೆಯಲ್ಲಿರುವ ಕೆಎಸ್‌ಸಿಎ ಮೈದಾನದಲ್ಲಿ ಶಿವಮೊಗ್ಗ ಪ್ರಿಮೀಯರ್ ಲೀಗ್ (ಎಸ್‌ಪಿಎಲ್)ನ ಮೂರನೇ ಆವೃತ್ತಿಯನ್ನು ಆಯೋಜಿಸಲಾಗಿದೆ ಎಂದು ಕೆಎಸ್‌ಸಿಎ ಸದಸ್ಯರಾಗಿರುವ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ತಿಳಿಸಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳು ತಮ್ಮದೇ ಆದ ಮಾಲೀಕತ್ವದಡಿ ಪಾಲ್ಗೊಳ್ಳಲಿವೆ ಎಂದರು.

ಪ್ರತಿದಿನ ಎರಡು ಪಂದ್ಯಗಳು ಕೆಎಸ್‌ಸಿಎ 1 ಮತ್ತು 2ನೇ ಮೈದಾನದಲ್ಲಿ ಬೆಳಗ್ಗೆ 9.30 ರಿಂದ 12.30 ರವರಗೆ ಮೊದಲ ಪಂದ್ಯ ಹಾಗೂ 1.30ರಿಂದ 4.30 ರವರೆಗೆ 2ನೇ ಪಂದ್ಯ ನಡೆಯಲಿದೆ. ಈ ಪಂದ್ಯಾವಳಿಗೆ ಏ. 11 ರಂದು ಶಿವಮೊಗ್ಗದ ಕಂಟ್ರಿ ಕ್ಲಬ್‌ನಲ್ಲಿ ಪಾಯಿಂಟ್ಸ್ ಆಧಾರದ ಮೇಲೆ ಆಟಗಾರರ ಹರಾಜು ಪ್ರಕ್ರಿಯೆ ನಡೆದಿದ್ದು, ಒಟ್ಟು 168 ಆಟಗಾರರು ಹರಾಜಿನಲ್ಲಿ ಭಾಗವಹಿಸಿ 140 ಆಟಗಾರರು ವಿವಿಧ ತಂಡಗಳಿಗೆ ಆಯ್ಕೆಯಾಗಿದ್ದಾರೆ ಎಂದರು.

ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ ನೇತೃತ್ವದಲ್ಲಿ ಮಾಸ್ಟರ್ ಕನ್ಸಲ್ಟೆನ್ಸಿ ಸರ್ವಿಸಸ್, ನಾರಾಯಣ ಹೆಲ್ತ್, ಮಲ್ನಾಡ್ ಅಲಾಯ್ ಕಾಸ್ಟಿಂಗ್ ಪ್ರೈ. ಲಿ. ಮತ್ತು ಇತರ ಪ್ರಮುಖ ಪ್ರಾಯೋಜಕರ ಸಹಕಾರದೊಂದಿಗೆ ಈ ಪಂದ್ಯಾವಳಿ ಆಯೋಜಿಸಲಾಗಿದೆ. ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್, ಟಿಪ್‌ಟಾಪ್ ಬೈಸನ್ಸ್, ಕಲ್ಯಾಣಿ ಶಿವಮೊಗ್ಗ ಬ್ಲಾಸ್ಟರ್ಸ್, ಸಿರಿ ಸಮೃದ್ಧಿ ಮಾಸ್ಟರ್ ಬ್ಲೀಸ್, ಸಹ್ಯಾದ್ರಿ ಸ್ಟ್ರೈಕರ್ಸ್, ಮೈಟಿ ಟಸ್ಕರ್ಸ್, ದಿ ವಾಲ್ ಸಿಸಿ ಭದ್ರಾವತಿ ಹಾಗೂ ತುಂಗಾ ತಂಡರ್ಸ್ ಮಾಲೀಕತ್ವದ 8 ತಂಡಗಳು ಭಾಗವಹಿಸುತ್ತಿವೆ ಎಂದ ಅವರು, ಬಿಳಿ ಬಣ್ಣದ ಲೆದರ್ ಬಾಲ್ ನಲ್ಲಿ 20 ಓವರ್‌ನ ಪಂದ್ಯ ಇದಾಗಿದ್ದು, ಕಲರ್ ಡ್ರೆಸ್ ನಲ್ಲಿ ಆಟಗಾರರು ಪಾಲ್ಗೊಳ್ಳಲಿದ್ದಾರೆ ಎಂದರು.

ಹಲವಾರು ಕೆಪಿಎಲ್ ಅನುಭವಿಗಳಾದ ಆಟಗಾರರು ಹಾಗೂ ರಾಜ್ಯಮಟ್ಟದ ಪ್ರತಿಷ್ಠಿತ ಆಟಗಾರರು ಎಸ್.ಪಿ.ಎಲ್. ಸೀಸನ್ -3ರಲ್ಲಿ ಭಾಗವಹಿಸುತ್ತಿದ್ದು, ಇದು ಶಿವಮೊಗ್ಗದ ಕ್ರೀಡಾಭಿಮಾನಿಗಳಿಗೆ ಅತ್ಯಂತ ಮನರಂಜನೆಯ ಕ್ರೀಡಾ ಹಬ್ಬವಾಗಲಿದೆ ಎಂದರು.
ಕೆಎಸ್‌ಸಿಎ ಶಿವಮೊಗ್ಗ ವಲಯ ಸಂಚಾಲಕರಾಗಿದ್ದ ಡಿ.ಆರ್. ನಾಗರಾಜ್ ಮಾತನಾಡಿ, ಮೇ 8, 9 ಹಾಗೂ 10ರಂದು ಶಿವಮೊಗ್ಗದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಸ್ಪಿನ್ನರ್ ಗಳಿಗೆ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ವಲಯ ಸಂಚಾಲಕ ಸದಾನಂದ್, ರಾಜೇಂದ್ರ ಕಾಮತ್, ಅಜರ್, ಶಬರೀಶ್, ದೀಪಕ್, ಅನಿಲ್ ಕುಮಾರ್ ಮೊದಲಾದವರಿದ್ದರು.