ಮೃತರ ಪತ್ನಿಗೆ ಅಪಘಾತ ಪರಿಹಾರ ನಿಧಿಯಿಂದ ಚೆಕ್ ಹಸ್ತಾಂತರ* ರೂ.10 ಲಕ್ಷಗಳ ಚೆಕ್ಕನ್ನು ನೀಡಿದ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನವೀನ್ ಟಿ ಆರ್

*ಮೃತರ ಪತ್ನಿಗೆ ಅಪಘಾತ ಪರಿಹಾರ ನಿಧಿಯಿಂದ ಚೆಕ್ ಹಸ್ತಾಂತರ*

ರೂ.10 ಲಕ್ಷಗಳ ಚೆಕ್ಕನ್ನು ನೀಡಿದ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನವೀನ್ ಟಿ ಆರ್

2024 ರ ಜು.22 ರಂದು ಶಿರಸಿ ಮತ್ತು ಸಾಗರ ಮಾರ್ಗದಲ್ಲಿ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಸಂಖ್ಯೆ ಕೆಎ 17 ಎಫ್ 1445 ರಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬಿದ್ದು ಗಾಯಗೊಂಡು ಮೃತಪಟ್ಟ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಹಂಗಾರಖಂಡದ ಸುಮಾರು 64 ವರ್ಷದ ಮೋಹನ್ ದ್ಯಾವ ನಾಯಕ ಇವರ ಪತ್ನಿ ಶಾರದಾ ಮೋಹನ ದ್ಯಾವ ನಾಯಕ ಇವರಿಗೆ ಅಪಘಾತ ಪರಿಹಾರ ನಿಧಿಯಿಂದ ರೂ.10 ಲಕ್ಷಗಳ ಚೆಕ್‌ನ್ನು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನವೀನ್ ಟಿ.ಆರ್. ಇವರು ಹಸ್ತಾಂತರಿಸಿದರು.

2024 ರ ಜು.22 ರಂದು ಶಿರಸಿಯಿಂದ ಸಾಗರ ಮಾರ್ಗದಲ್ಲಿ ಕಾರ್ಯಾಚರಣೆ ಮಾಡುವಾಗ ಸುಮಾರು 03.15 ಗಂಟೆಗೆ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಮೋಹನ್ ದ್ಯಾವ ನಾಯಕ ಕಾನಸೂರು ಗ್ರಾಮದ ಹಳದೋಟ ಕ್ರಾಸ್ ಹತ್ತಿರ ಬಲ ತಿರುವಿನ ರಸ್ತೆಯಲ್ಲಿ ವಾಹನದಿಂದ ಬಿದ್ದು, ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಶಿರಸಿಯ ಪಂಡಿತ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ.

ಏಪ್ರಿಲ್ 24 ರಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಯವರು ದಿವಂಗತ ಮೋಹನ್ ದ್ಯಾವ ನಾಯಕರವರ ಪತ್ನಿ ಶಾರದಾ ಮೋಹನ ದ್ಯಾವ ನಾಯಕ ಇವರಿಗೆ ಅಪಘಾತ ಪರಿಹಾರ ನಿಧಿಯಿಂದ ರೂ.10 ಲಕ್ಷಗಳ ಚೆಕ್ಕನ್ನು ನೀಡಲಾಯಿತು ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನವೀನ್ ಟಿ ಆರ್ ತಿಳಿಸಿದ್ದಾರೆ.