*ಎ ಸಿ ಸತ್ಯನಾರಾಯಣ ರವರಿಗೆ ಮತ್ತೆ ವರ್ಗಾವಣೆ;* *ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ವರ್ಗಾವಣೆ* *ಡಾ.ಮೈತ್ರಿ ಇದ್ದ ಜಾಗಕ್ಕೆ ಸತ್ಯನಾರಾಯಣ್ ವರ್ಗ*
*ಎ ಸಿ ಸತ್ಯನಾರಾಯಣ ರವರಿಗೆ ಮತ್ತೆ ವರ್ಗಾವಣೆ;*
*ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ವರ್ಗಾವಣೆ*
*ಡಾ.ಮೈತ್ರಿ ಇದ್ದ ಜಾಗಕ್ಕೆ ಸತ್ಯನಾರಾಯಣ್ ವರ್ಗ*

ಶಿವಮೊಗ್ಗ ಉಪವಿಭಾಗದ ಉಪವಿಭಾಗಾಧಿಕಾರಿ ಜಿ.ಹೆಚ್.ಸತ್ಯನಾರಾಯಣ ರವರನ್ನು ಸರ್ಕಾರ ಮತ್ತೆ ಇಂದುವ ವರ್ಗಾವಣೆ ಮಾಡಿದ್ದು, ಈ ಬಾರಿ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿ ಹುದ್ದೆಗೆ ವರ್ಗಾಯಿಸಿದೆ.
ಶಿವಮೊಗ್ಗದ ನೂತನ ಉಪವಿಭಾಗಾಧಿಕಾರಿಯಾಗಿ ಡಾ.ಹೆಚ್.ಪಿ.ಮೈತ್ರಿಯವರು ಶಿವಮೊಗ್ಗಕ್ಕೆ ಬರುವ ಮುನ್ನ ಕಾರ್ಯ ನಿರ್ವಹಿಸುತ್ತಿದ್ದ ಜಾಗಕ್ಕೇ ಸತ್ಯನಾರಾಯಣ್ ರವರನ್ನು ನೇಮಿಸಿ ಆದೇಶಿಸಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಮೈತ್ರಿ ಇದೀಗ ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ವರ್ಗಾವಣೆಯಾಗಿದ್ದೇ ತಡ ಇಲ್ಲಿದ್ದ ಎಸಿ ಸತ್ಯನಾರಾಯಣ್ ರವರು ಕಾನೂನು ಹೋರಾಟಕ್ಕಿಳಿದಿದ್ದರು.
ಯಾವುದೇ ಸೇರುವಿಕೆ ಕಾಲವನ್ನು ಬಳಸಿಕೊಳ್ಳದೇ ಕೂಡಲೇ ವರ್ಗ ಮಾಡಿರುವ ಜಾಗಕ್ಕೆ ಕಾರ್ಯವರದಿ ಮಾಡಿಕೊಳ್ಳಬೇಕೆಂದು ಈ ಹೊಸ ವರ್ಗಾವಣೆ ಆದೇಶದಲ್ಲಿ ಎಚ್ಚರಿಕೆ ಕೂಡ ಇದೆ.
ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ಶಿವಮೊಗ್ಗ ಎಸಿ ಹುದ್ದೆಯ ಕುರ್ಚಿ ಇದೀಗ ಮತ್ತೊಂದು ಚರ್ಚೆಗೂ ಅವಕಾಶ ಮಾಡಿಕೊಟ್ಟಿದ್ದು, ಸತ್ಯನಾರಾಯಣ್ ಮತ್ತು ಡಾ.ಮೈತ್ರಿ- ಈ ಇಬ್ಬರಲ್ಲಿ ಯಾರು ಶಿವಮೊಗ್ಗದಲ್ಲೇ ಮುಂದುವರೆಯಲಿದ್ದಾರೆಂಬುದು ಕುತೂಹಲ ಉಂಟು ಮಾಡಿದೆ.
ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿದ್ದ ಸತ್ಯನಾರಾಯಣರವರಿಗೆ ಈ ಹಿಂದಿನ ವರ್ಗಾವಣೆ ಆದೇಶದಲ್ಲಿ ಸ್ಥಳ ನಿಗದಿ ಮಾಡಿರಲಿಲ್ಲ.


