*ಈದ್ ಮಿಲಾದ್ ಆಚರಣೆ ವೇಳೆ ಕಲರ್ ಪೇಪರ್ ಬ್ಲಾಸ್ಟಿಂಗ್ ಹಾಗೂ ಸಿಡಿಮದ್ದು ನಿಷೇಧ…* *ಬೈಕ್ ರ್ಯಾಲಿ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ* *عید میلاد کی تقریبات میں کلر پیپر بلاسٹنگ اور پٹاخے چلانے پر پابندی…* *ضلع کلکٹر کا بائیک ریلی پر پابندی کا حکم*

*ಈದ್ ಮಿಲಾದ್ ಆಚರಣೆ ವೇಳೆ ಕಲರ್ ಪೇಪರ್ ಬ್ಲಾಸ್ಟಿಂಗ್ ಹಾಗೂ ಸಿಡಿಮದ್ದು ನಿಷೇಧ…*

*ಬೈಕ್ ರ್ಯಾಲಿ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ*

*عید میلاد کی تقریبات میں کلر پیپر بلاسٹنگ اور پٹاخے چلانے پر پابندی…*

*ضلع کلکٹر کا بائیک ریلی پر پابندی کا حکم*

ಶಿವಮೊಗ್ಗ ಜಿಲ್ಲೆಯಲ್ಲಿ ಈದ್ ಮಿಲಾದ್ ಹಬ್ಬದ ಆಚರಣೆ ಮತ್ತು ಮೆರವಣಿಗೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ಶಾಂತಿ ಹಾಗೂ ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಆಗಸ್ಟ್ 25 ರಿಂದ 28 ರವರೆಗೆ ಕಲರ್ ಪೇಪರ್ ಬ್ಲಾಸ್ಟಿಂಗ್ ಹಾಗೂ ಸಿಡಿಮದ್ದು ಸಿಡಿಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ.
ಆಗಸ್ಟ್ 26 ರಂದು ಜಿಲ್ಲಾದ್ಯಂತ ಈದ್ ಮಿಲಾದ್ ಹಬ್ಬ ನಡೆಯಲಿದ್ದು, ಮೆರವಣಿಗೆಯ ಸಮಯದಲ್ಲಿ ಕಲರ್ ಪೇಪರ್ ಬ್ಲಾಸ್ಟಿಂಗ್ ಮತ್ತು ಸಿಡಿಮದ್ದುಗಳನ್ನು ಬಳಸುವುದರಿಂದ ಪ್ರಾರ್ಥನಾ ಸ್ಥಳಗಳಿಗೆ ಹಾನಿಯಾಗುವ ಹಾಗೂ ಇತರ ಧರ್ಮೀಯರ ಭಾವನೆಗಳಿಗೆ ಧಕ್ಕೆಯುಂಟಾಗುವ ಸಾಧ್ಯತೆಗಳಿರುತ್ತವೆ.
ಈ ಹಿನ್ನೆಲೆಯಲ್ಲಿ, ಪೊಲೀಸ್ ಅಧೀಕ್ಷಕರ ಶಿಫಾರಸಿನಂತೆ ಮುಂಜಾಗ್ರತಾ ಕ್ರಮವಾಗಿ ಕರ್ನಾಟಕ ಪೊಲೀಸ್ ಕಾಯ್ದೆ-1963 ರ ಕಲಂ 35, 36 ರ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಚಲಾಯಿಸಿ, ಜಿಲ್ಲಾದ್ಯಂತ ಆಗಸ್ಟ್ 25 ರಿಂದ ಆಗಸ್ಟ್ 28 ರವರೆಗೆ ಈ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

*ಈದ್ ಮಿಲಾದ್: ಶಿವಮೊಗ್ಗ ಜಿಲ್ಲೆಯಾದ್ಯಂತ ಬೈಕ್ ರ್ಯಾಲಿ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ*
ಶಿವಮೊಗ್ಗ, ಆ, 25(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಈದ್ ಮಿಲಾದ್ ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿ ಕಾಪಾಡುವ ಮುಂಜಾಗ್ರತಾ ಕ್ರಮವಾಗಿ, ಆಗಸ್ಟ್ 25 ರಿಂದ 28 ರವರೆಗೆ ಜಿಲ್ಲೆಯಾದ್ಯಂತ ಯಾವುದೇ ಬೈಕ್ ರ್ಯಾಲಿಗಳನ್ನು ನಡೆಸದಂತೆ ನಿಷೇಧಿಸಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಪೊಲೀಸ್ ಕಾಯ್ದೆ-1963 ರ ಕಲಂ 35(3) ರಡಿ ನೀಡಿರುವ ಅಧಿಕಾರವನ್ನು ಬಳಸಿ ಈ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ದಿನಾಂಕ 25-08-2026 ರಿಂದ 28-08-2026 ರವರೆಗೆ ನಿಷೇಧ ಜಾರಿಯಲ್ಲಿರುತ್ತದೆ. ಆಗಸ್ಟ್ 26 ರಂದು ಈದ್ ಮಿಲಾದ್ ಆಚರಣೆ ನಡೆಯಲಿದ್ದು, ಸೌಹಾರ್ದತೆ, ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

*عید میلاد کی تقریبات میں کلر پیپر بلاسٹنگ اور پٹاخے چلانے پر پابندی…*

*ضلع کلکٹر کا بائیک ریلی پر پابندی کا حکم*

شیواموگا ضلع میں عید میلاد کی تقریبات اور جلوسوں کے پیش نظر عوامی امن اور ہم آہنگی کو برقرار رکھنے کے لیے، ضلع کلکٹر پربھولنگا کاوالی کٹی نے 25 سے 28 اگست تک رنگین کاغذ کے دھماکے اور پٹاخوں پر پابندی لگانے کا حکم جاری کیا ہے۔
ضلع بھر میں عید میلاد کا تہوار 26 اگست کو منایا جائے گا اور جلوسوں کے دوران رنگین پیپر بلاسٹنگ اور پٹاخوں کے استعمال سے عبادت گاہوں کو نقصان پہنچنے اور دیگر مذاہب کے لوگوں کے جذبات مجروح ہونے کا خدشہ ہے۔
اس تناظر میں، احتیاطی اقدام کے طور پر، جیسا کہ سپرنٹنڈنٹ آف پولیس کی سفارش کی گئی ہے، ضلع انتظامیہ نے کہا ہے کہ یہ امتناعی حکم 25 اگست سے 28 اگست تک پورے ضلع میں نافذ رہے گا، کرناٹک پولیس ایکٹ 1963 کی دفعہ 35، 36 کے تحت حاصل اختیارات کے استعمال میں۔

*عید میلاد: ڈپٹی کمشنر کا شیو موگا ضلع میں بائیک ریلیوں پر پابندی کا حکم*
شیواموگا، 25 اگست (کرناٹک نیوز): ضلع میں عید میلاد کے جشن کے پیش نظر امن و امان اور عوامی امن کو برقرار رکھنے کے لیے احتیاطی اقدام کے طور پر، ڈپٹی کمشنر اور ضلع مجسٹریٹ پربھولنگا کاوالی کٹی نے 25 اگست سے 28 اگست تک ضلع بھر میں کسی بھی قسم کی بائیک ریلی نکالنے پر پابندی لگا دی ہے۔
یہ امتناعی حکم کرناٹک پولیس ایکٹ 1963 کی دفعہ 35(3) کے تحت حاصل اختیارات کے استعمال میں جاری کیا گیا ہے اور یہ 25-08-2026 سے 28-08-2026 تک نافذ رہے گا۔ عید میلاد 26 اگست کو منائی جائے گی اور یہ اقدام ہم آہنگی، امن و امان برقرار رکھنے کے لیے کیا گیا ہے۔