*ಈದ್ ಮಿಲಾದ್ ಹಿನ್ನೆಲೆಯಲ್ಲಿ ನಾಳೆಯಿಂದ 2 ದಿನ ಮದ್ಯ ಮಾರಾಟ ನಿಷೇಧ* *ಶಿವಮೊಗ್ಗ- ಶಿಕಾರಿಪುರ- ಸಾಗರದಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ…*
*ಈದ್ ಮಿಲಾದ್ ಹಿನ್ನೆಲೆಯಲ್ಲಿ ನಾಳೆಯಿಂದ 2 ದಿನ ಮದ್ಯ ಮಾರಾಟ ನಿಷೇಧ*
*ಶಿವಮೊಗ್ಗ- ಶಿಕಾರಿಪುರ- ಸಾಗರದಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ…*

ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಿವಮೊಗ್ಗ ನಗರ, ಸಾಗರ, ಶಿಕಾರಿಪುರ ಹಾಗೂ ಸುತ್ತಮುತ್ತಲಿನ ಕೆಲವು ಗ್ರಾಮಗಳಲ್ಲಿ ಮದ್ಯ ಮಾರಾಟವನ್ನು ಆ.25 ಮತ್ತು 26 ರಂದು ಎರಡು ದಿನಗಳ ಕಾಲ ನಿಷೇಧಿಸಿ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳೀಕಟ್ಟಿ ಆದೇಶಿಸಿದ್ದಾರೆ.
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ, ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿ, ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿ, ಭದ್ರಾವತಿ ತಾಲ್ಲೂಕು( ಹೊಳೆಹೊನ್ನೂರು ಹೋಬಳಿ ಹೊರತು ಪಡಿಸಿ) ಮದ್ಯ ಮಾರಾಟವನ್ನು ಆಗಸ್ಟ್ 25 ರ ಬೆಳಿಗ್ಗೆ 6 ಗಂಟೆಯಿಂದ 27 ರ ಬೆಳಿಗ್ಗೆ 6 ಗಂಟೆ ವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಅಂತೆಯೇ, ಶಿಕಾರಿಪುರ ತಾಲ್ಲೂಕಿನ ಅಂಬ್ಲಿಗೊಳ, ಸಾಲೂರು ಗ್ರಾ.ಪಂ, ಹಿತ್ತಲ, ಕವಾಸಪುರ, ಶಿಕಾರಿಪುರ ನಗರ, ಶಿರಾಳಕೊಪ್ಪ ಟೌನ್, ಸೊರಬ, ಆನವಟ್ಟಿ ಟೌನ್ ಗಳಲ್ಲಿ ಆ.26 ರ ಬೆಳಿಗ್ಗೆ 6 ರಿಂದ ರಾತ್ರಿ 12 ರ ವರೆಗೆ, ಸಾಗರ ಟೌನ್ ವ್ಯಾಪ್ತಿಯಲ್ಲಿ ಆ.25 ರ ಬೆಳಿಗ್ಗೆ 6 ರಿಂದ 26 ರ ರಾತ್ರಿ 10ರ ವರೆಗೆ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.


