*ಶಿವಮೊಗ್ಗ ಉಪ ವಿಭಾಗಾಧಿಕಾರಿಯಾಗಿ ಮತ್ತೆ ಜಿ.ಹೆಚ್.ಸತ್ಯನಾರಾಯಣ?!* *ವರ್ಗಾವಣೆ ಕುರಿತು ಕಾನೂನು ಏನು ಹೇಳುತ್ತೆ?* *ತ್ರಿಶಂಕು ಸ್ಥಿತಿಯಲ್ಲಿದ್ದಾರಾ ಡಾ.ಮೈತ್ರಿ?*

*ಶಿವಮೊಗ್ಗ ಉಪ ವಿಭಾಗಾಧಿಕಾರಿಯಾಗಿ ಮತ್ತೆ ಜಿ.ಹೆಚ್.ಸತ್ಯನಾರಾಯಣ?!*

*ವರ್ಗಾವಣೆ ಕುರಿತು ಕಾನೂನು ಏನು ಹೇಳುತ್ತೆ?*

*ತ್ರಿಶಂಕು ಸ್ಥಿತಿಯಲ್ಲಿದ್ದಾರಾ ಡಾ.ಮೈತ್ರಿ?*

ಶಿವಮೊಗ್ಗ ಉಪವಿಭಾಗಾಧಿಕಾರಿ ಕುರ್ಚಿ ಈಗ ಗೊಂದಲಕ್ಕೊಳಗಾಗಿದ್ದು, ಯಾವುದೇ ಹುದ್ದೆ ಸೂಚಿಸದೇ ಸರ್ಕಾರಿ ನೌಕರರ ಸಂಘದ ಪ್ರಮುಖ ಪದಾಧಿಕಾರಿಯೂ ಆಗಿರುವ ಜಿ.ಹೆಚ್.ಸತ್ಯನಾರಾಯಣ ಮತ್ತೆ ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಸೇವೆ ಮುಂದುವರೆಸುವ ಸಾಧ್ಯತೆಗಳು ದಟ್ಟವಾಗಿವೆ.

ಮೂಲತಃ ವೈದ್ಯೆಯೂ ಆಗಿರುವ ಡಾ.ಮೈತ್ರಿಯವರನ್ನು ರಾಜ್ಯ ಸರ್ಕಾರ ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ನೇಮಿಸಿ ವರ್ಗಾವಣೆ ಮಾಡಿತ್ತು. ಆದರೆ, ಎಸಿ ಸತ್ಯನಾರಾಯಣ್ ರವರಿಗೆ ಯಾವುದೇ ಸ್ಥಳ ತೋರಿಸದೇ ವರ್ಗಾವಣೆ ಮಾಡಿತ್ತು.

ಕೆ ಎ ಎಸ್(ಕಿರಿಯ ಶ್ರೇಣಿ) ಆಗಿರುವ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ.ಮೈತ್ರಿ ಹೆಚ್ ಪಿ ಎಸ್ ರವರನ್ನು ಆ.18 ರಂದು ಸರ್ಕಾರ ಶಿವಮೊಗ್ಗಕ್ಕೆ ವರ್ಗಾಯಿಸಿದ್ದು, ಮಾರನೇ ದಿನವೇ ಡಾ.ಮೈತ್ರಿ ಶಿವಮೊಗ್ಗ ಎಸಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ಸರ್ಕಾರಿ ನೌಕರರ ಸಂಘದ ಪ್ರಮುಖ ಹುದ್ದೆಯಲ್ಲಿರುವವರಿಗೆ ಇರುವ ವರ್ಗಾವಣೆ ಸಂಬಂಧದ ಕಾನೂನನ್ನೇ ಮುಂದಿಟ್ಟುಕೊಂಡು ಸತ್ಯನಾರಾಯಣ್ ರವರು ಕಾನೂನು ಹೋರಾಟಕ್ಕಿಳಿದಿದ್ದು, ಇವರ ಪರವಾಗಿಯೇ ನ್ಯಾಯಾಲಯ ಕೈ ಹಿಡಿಯುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಹೇಳಲಾಗುತ್ತಿದೆ.

*ಕಾನೂನು ಏನು ಹೇಳುತ್ತೆ?*

ಜಿ.ಹೆಚ್.ಸತ್ಯನಾರಾಯಣ್ ರವರನ್ನು ವರ್ಗಾವಣೆ ಮಾಡಿ *ಯಾವುದೇ ಸ್ಥಳ ನಿಯುಕ್ತಿ ಮಾಡದೇ ಇರುವುದು (Awaiting Posting Order – APO)* ಮತ್ತು ಅವರು ಸರ್ಕಾರಿ ನೌಕರರ ಸಂಘದ ಪ್ರಮುಖ ಹುದ್ದೆಯಲ್ಲಿರುವುದು, ಇವೆರಡಕ್ಕೂ ಸಂಬಂಧಿಸಿದಂತೆ ಕಾನೂನು ಹೀಗಿದೆ:

1. ಸ್ಥಳ ನಿಯುಕ್ತಿ ಇಲ್ಲದೆ ವರ್ಗಾವಣೆ – ಕಾನೂನು ಏನು?

– ಕರ್ನಾಟಕ ಸರ್ಕಾರಿ ನೌಕರರ ವರ್ಗಾವಣೆ ಕಾಯಿದೆ ಮತ್ತು *Karnataka Civil Services (CCA) Rules 1957* ಪ್ರಕಾರ, ಸರ್ಕಾರಕ್ಕೆ ಆಡಳಿತಾತ್ಮಕ ಹಿತದೃಷ್ಟಿಯಿಂದ ಅಧಿಕಾರಿಯನ್ನು ವರ್ಗಾವಣೆ ಮಾಡುವ ಪೂರ್ಣ ಅಧಿಕಾರ ಇದೆ.

– ಆದರೆ ಸ್ಥಳ ತೋರಿಸದೆ ವರ್ಗಾವಣೆ ಮಾಡುವುದು ಸಾಮಾನ್ಯ ಆಡಳಿತ ಕ್ರಮವಲ್ಲ. ಇದನ್ನು ಸಾಮಾನ್ಯವಾಗಿ ಶಿಸ್ತು ಕ್ರಮದ ಭಾಗವಾಗಿ ಅಥವಾ ತನಿಖೆ ಬಾಕಿ ಇರುವಾಗ ಮಾಡಲಾಗುತ್ತದೆ.
– ಇಂತಹ ಸಂದರ್ಭದಲ್ಲಿ ನೌಕರರು *Karnataka Administrative Tribunal (KAT)* ನಲ್ಲಿ ಮೇಲ್ಮನವಿ ಸಲ್ಲಿಸಬಹುದು. “ದ್ವೇಷದ ವರ್ಗಾವಣೆ (Victimization Transfer)” ಎಂದು ಸಾಬೀತಾದರೆ, ಸರ್ಕಾರ ಮತ್ತೆ ಸ್ಥಳ ನಿಯುಕ್ತಿ ಮಾಡಬೇಕಾಗುತ್ತದೆ.

2. ಸರ್ಕಾರಿ ನೌಕರರ ಸಂಘದ ಹುದ್ದೆ – ಯಾವ ನಿಯಮಗಳು ಅನ್ವಯ?

ಇದಕ್ಕೆ *Karnataka Civil Services (Conduct) Rules, 1966* ಅನ್ವಯಿಸುತ್ತದೆ.

ಒಬ್ಬ ಅಧಿಕಾರಿ ಸಂಘದ ಪ್ರಮುಖ ಹುದ್ದೆಯಲ್ಲಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಸ್ಥಳ ನಿಯುಕ್ತಿ ಇಲ್ಲದೆ ವರ್ಗಾವಣೆ ಮಾಡಿದ್ದರೆ, ಅದು *Article 19(1)(c) – ಸಂಘಟನೆಯ ಹಕ್ಕು* ನ ಉಲ್ಲಂಘನೆ ಎಂದು ಪರಿಗಣಿಸಲ್ಪಡುತ್ತದೆ. ಸುಪ್ರೀಂ ಕೋರ್ಟ್ ಹಲವು ತೀರ್ಪುಗಳಲ್ಲಿ “ಸಂಘದ ಚಟುವಟಿಕೆಯ ಕಾರಣಕ್ಕೆ ವರ್ಗಾವಣೆ ಮಾಡುವುದು ಕಾನೂನುಬಾಹಿರ” ಎಂದು ಹೇಳಿದೆ.

ಆದ್ದರಿಂದ ಸತ್ಯನಾರಾಯಣ್ ರವರು ಈ ವರ್ಗಾವಣೆ ಆದೇಶವನ್ನು ಪ್ರಶ್ನಿಸಿ KAT ಅಥವಾ ಹೈಕೋರ್ಟ್ ಮೊರೆ ಹೋಗಿದ್ದಾರೆಂಬ ಚರ್ಚೆಗಳಿವೆ.