*ಶಿವಮೊಗ್ಗದ ಶ್ರೀ ಪ್ರತ್ಯಂಗಿರಾ ದೇವಿ ಮಹಾಸಂಸ್ಥಾನದಲ್ಲಿ ಹೈ ಡ್ರಾಮಾ…* *ಅಪ್ಪ- ಸಹೋದರನನ್ನೇ ಮನೆಯಿಂದ ಹೊರಕ್ಕೆ ತಳ್ಳಿದರಾ ಸುಪ್ರೀತ್ ಸ್ವಾಮೀಜಿ?* *ಮೆಣಸಿನ ಕಾಯಿ ಸ್ವಾಮಿಯ ಮಹಾ ಸ್ಟೋರಿ…*
*ಶಿವಮೊಗ್ಗದ ಶ್ರೀ ಪ್ರತ್ಯಂಗಿರಾ ದೇವಿ ಮಹಾಸಂಸ್ಥಾನದಲ್ಲಿ ಹೈ ಡ್ರಾಮಾ…*
*ಅಪ್ಪ- ಸಹೋದರನನ್ನೇ ಮನೆಯಿಂದ ಹೊರಕ್ಕೆ ತಳ್ಳಿದರಾ ಸುಪ್ರೀತ್ ಸ್ವಾಮೀಜಿ?*
*ಮೆಣಸಿನ ಕಾಯಿ ಸ್ವಾಮಿಯ ಮಹಾ ಸ್ಟೋರಿ…*
ಶಿವಮೊಗ್ಗದ ವಿಮಾನ ನಿಲ್ದಾಣದ ಬಳಿ ಇರುವ ಶ್ರೀ ಪ್ರತ್ಯಂಗಿರಾದೇವಿ ಆಶ್ರಮ ಇದೀಗ ಅಪ್ಪ ಮಕ್ಕಳ ಜಗಳದ ಕೇಂದ್ರಬಿಂದುವಾಗಿದ್ದು, ರಾತ್ರೋರಾತ್ರಿ ಜಗತ್ಪ್ರಸಿದ್ಧರಾಗಿದ್ದ ಸುಪ್ರೀತ್ ಗುರೂಜಿ ತಮ್ಮ ತಂದೆ ಮತ್ತು ಸಹೋದರನನ್ನೇ ಮನೆಯಿಂದ ಹೊರಗೆ ತಳ್ಳಿದ ಘಟನೆ ನಡೆದಿದೆ.
ಕೋರ್ಟ್ ಕೇಸುಗಳು, ಶತೃಗಳ ಕಾಟ ನಿವಾರಣೆ ಅಂತೆಲ್ಲ ಖಾರದ ಮೆಣಸಿನ ಕಾಯಿ ಮಸಾಲೆಯನ್ನು ಬಂದ ಭಕ್ತರಿಂದ ರುಬ್ಬಿಸುತ್ತಿದ್ದ ಸುಪ್ರೀತ್ ಗುರೂಜಿ, ಇದೀಗ ತಮ್ಮ ತಂದೆ ವೆಂಕಟೇಶ್ ಮತ್ತು ಸಹೋದರ ಉದಿತ್ ವಿರುದ್ಧವೇ ಖಾರಾ ಮಸಾಲೆ ಅರೆದು ಮನೆಯಿಂದಲೇ ಹೊರಕ್ಕೆ ತಳ್ಳಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ.
ಸುಪ್ರೀತ್ ಗುರೂಜಿಯ ಈ ವರ್ತನೆಯಿಂದಾಗಿ ಪ್ರತಿಭಟನೆಗಿಳಿದ ತಂದೆ ವೆಂಕಟೇಶ್, ಸಹೋದರ ಉದಿತ್ ಮತ್ತು ಅವರ ಬೆಂಬಲಿಗರು ತಮಟೆ ಕೂಡ ಬಾರಿಸುತ್ತಿದ್ದು, ಇವರನ್ನು ಸಮಾಧಾನ ಪಡಿಸಲು ಸ್ಥಳೀಯರು ಪ್ರಯತ್ನಿಸುತ್ತಿದ್ದಾರೆಂದು ತಿಳಿದು ಬಂದಿದೆ.
ಗಂಡು ಶತೃಗೆ ಗಂಡು ಗೊಂಬೆ, ಹೆಣ್ಣು ಶತೃಗೆ ಹೆಣ್ಣು ಗೊಂಬೆ ಉಲ್ಟಾ ನೇತಾಡಿಸುತ್ತಿದ್ದ ಸ್ವಾಮೀಜಿ ಇದೀಗ ತಂದೆಯನ್ನೂ ಸಹೋದರನನ್ನೂ ಉಲ್ಟಾ ತೂಗು ಹಾಕಲು ಹೊರಟಿದ್ದಾರೆಯೇ?





