ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ, ಸುನ್ನಿ ಜಾಮಿಯಾ ಮಸೀದಿ ಕಮಿಟಿ ಮತ್ತು ಸುನ್ನಿ ಜಮಾಯತುಲ್ ಉಲ್ಮಾ ಕಮಿಟಿ ಗಾಂಧಿ ಬಜಾರಿನ ಜಾಮಿಯಾ ಮಸೀದಿಯಲ್ಲಿ ಹಮ್ಮಿಕೊಂಡಿದ್ದ ಜನ ಸಂಪರ್ಕ ಸಭೆ ನಮ್ಮ ಹಬ್ಬಗಳು ದೇವರಿಗೆ ಮೆಚ್ಚುಗೆಯಾಗುವಂತಿರಲಿ; ಹಿಂದೂ ಮುಸ್ಲೀಂ ಎರಡೂ ಕಣ್ಣುಗಳು ಮುಖ್ಯ; ಎಸ್ ಪಿ ಮಿಥುನ್ ಕುಮಾರ್
ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ, ಸುನ್ನಿ ಜಾಮಿಯಾ ಮಸೀದಿ ಕಮಿಟಿ ಮತ್ತು ಸುನ್ನಿ ಜಮಾಯತುಲ್ ಉಲ್ಮಾ ಕಮಿಟಿ ಗಾಂಧಿ ಬಜಾರಿನ ಜಾಮಿಯಾ ಮಸೀದಿಯಲ್ಲಿ ಹಮ್ಮಿಕೊಂಡಿದ್ದ ಜನ ಸಂಪರ್ಕ ಸಭೆ
ನಮ್ಮ ಹಬ್ಬಗಳು ದೇವರಿಗೆ ಮೆಚ್ಚುಗೆಯಾಗುವಂತಿರಲಿ;
ಹಿಂದೂ ಮುಸ್ಲೀಂ ಎರಡೂ ಕಣ್ಣುಗಳು ಮುಖ್ಯ; ಎಸ್ ಪಿ ಮಿಥುನ್ ಕುಮಾರ್
ನಮ್ಮ ಹಬ್ಬ ನಮ್ಮ ದೇವರಿಗೆ ಮೆಚ್ಚುಗೆಯಾಗುವ ರೀತಿಯಲ್ಲಿ ಮಾಡಬೇಕು. ಆದರೆ, .0 ಪರ್ಸೆಂಟ್ ನಷ್ಟು ಕಿಡಿಗೇಡಿಗಳಿಂದ ಎಲ್ಲರಿಗೂ ತೊಂದರೆಯಾಗುತ್ತದೆ.
ಈ ವರ್ಷದಿಂದ ಮಸೀದಿ ಕಮಿಟಿಗಳಿಗೆ ಮೆರವಣಿಗೆ ಜವಾಬ್ದಾರಿ ನೀಡುತ್ತಿದ್ದೇವೆ. ಹಿಂದೂ ಮುಸ್ಲಿಂ ಎರಡೂ ಕಣ್ಣುಗಳು ನಮಗೆ ಮುಖ್ಯ. ಇಲಾಖೆಯ ನಂಬಿಕೆ ಉಳಿಸಿಕೊಂಡು ಭಾರತೀಯ ನಾಗರೀಕರಾಗಿ ಕೆಲಸ ಮಾಡಬೇಕು ಎಂದು ಎಸ್ ಪಿ ಮಿಥುನ್ ಕುಮಾರ್ ಹೇಳಿದರು.
ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ, ಸುನ್ನಿ ಜಾಮಿಯಾ ಮಸೀದಿ ಕಮಿಟಿ ಮತ್ತು ಸುನ್ನಿ ಜಮಾಯತುಲ್ ಉಲ್ಮಾ ಕಮಿಟಿ ಗಾಂಧಿ ಬಜಾರಿನ ಜಾಮಿಯಾ ಮಸೀದಿಯಲ್ಲಿ ಹಮ್ಮಿಕೊಂಡಿದ್ದ ಜನ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.
ಹಬ್ಬಗಳ ಆಚರಣೆ ವಿಭಿನ್ನವಾಗಿರುತ್ತೆ. ಮೊಹಮ್ಮದ್ ಪೈಗಂಬರರ ಹುಟ್ಟು ಹಬ್ಬ ಆಚರಣೆ ಈದ್ ಮಿಲಾದ್, ಗಣಪತಿ ಹಬ್ಬದ ಆಚರಣೆ ದೇವರನ್ನು ಮೆಚ್ಚಿಸುವ ಹಾಗಿರಲಿ. ಪೈಪೋಟಿಗೆ ಬಿದ್ದು ಹಬ್ಬಗಳ ಆಚರಣೆ ನಡೆಯಬಾರದು ಎಂದು ಎಸ್ ಪಿ ಮಿಥುನ್ ಕುಮಾರ್ ಹೇಳಿದರು.
ನಾಲ್ಕಾರು ಜನ ನೋಡಿ ಹೆಮ್ಮೆ ಪಡುವಂತೆ ಹಬ್ಬಗಳ ಆಚರಣೆ ನಡೆಯಲಿ.ಭಯಮುಕ್ತವಾಗಿ ಹೆಣ್ಣುಮಕ್ಕಳು, ಮಕ್ಕಳು ಹಬ್ಬಗಳಲ್ಲಿ ಪಾಲ್ಗೊಳ್ಳುವಂತಿರಬೇಕು. ಕೆಲ ಕಿಡಿಗೇಡಿಗಳು ಕಾನೂನು ಮೀರಿ ಸಮಸ್ಯೆ ಉಂಟು ಮಾಡುತ್ತಾರೆ ಎಂದರು.
ಏನೇ ಆಚರಣೆ, ಮೆರವಣಿಗೆ ಇದ್ದರೂ ಮುಂಚಿತವಾಗಿ ಮಸೀದಿಯ ಜೊತೆಗೆ, ಪೊಲೀಸ್ ಇಲಾಖೆಯ ಜೊತೆಗೆ ಚರ್ಚೆಗಳು ನಡೆಯಬೇಕು. ಈವರೆಗೆ 277 ಸಭೆಗಳು ಗಣಪತಿ, ಈದ್ ಮಿಲಾದ್ ಸಭೆಗಳನ್ನು ಇಲಾಖೆ ಮಾಡಿದೆ. ಅತ್ಯಂತ ಹೆಚ್ಚಿನ ಸಭೆಗಳು ಆಗಿವೆ. ಒಳ್ಳೆಯ ನಾಗರೀಕರಿಗೆ ರಕ್ಷಣೆ ಕೊಡುವ ಕೆಲಸ ಇಲಾಖೆ ಮಾಡುತ್ತದೆ. ನಂಬಿಕೆ ಇಡಿ. ಹೊರಗಿನ ಜನ ಹೊಗಳೋ ಹಾಗೆ ಹಬ್ಬಗಳನ್ನು ಮಾಡೋಣ ಎಂದು ಮಿಥುನ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಭ್ರಮಾಚರಣೆ ಶೋಕಾಚರಣೆ ಆಗ್ತಿದೆ. ಭಕ್ತಿ ಬಿಟ್ಟು ತೋರ್ಪಡಿಕೆಯಲ್ಲಿ ಪೈಪೋಟಿ ನಡೆಯುತ್ತಿದೆ. ಕ್ಷುಲ್ಲಕ ಕಾರಣಕ್ಕಾಗಿ ರಾಗಿಗುಡ್ಡ ಘಟನೆ ನಡೆಯಿತು. ಮನೆ ಮಠ ಬಿಟ್ಟು ಓಡೋದೋರು ಇನ್ನೂ ಮನೆಗೆ ಬರದ ಸ್ಥಿತಿ ಬೇಕಾ?
ಪ್ರಕರಣಗಳು ದಾಖಲಾಗುವಂತಾಯ್ತು. ಸಂಭ್ರಮ ಶೋಕವಾಯ್ತು ಎಂದು ಅಡಿಷನಲ್ ಎಸ್ ಪಿ ಅನಿಲ್ ಕುಮಾರ್ ಭೂಮರೆಡ್ಡಿ ಹೇಳಿದರು.
ಮನೆ ಬಾಗಿಲಿಗೆ, ಶ್ರದ್ಧಾಕೇಂದ್ರಗಳಿಗೆ ಭೇಟಿ ಕೊಟ್ಟು ಶಾಂತಿ ಕಾಪಾಡಲು ಮನವಿ ಮಾಡಿಕೊಳ್ತೇವೆ. ಆದರೂ ಕ್ಷುಲ್ಲಕ ಘಟನೆ ನಡೆಯುತ್ತವೆ. ಇಂಥ ಘಟನೆಗಳು ಪುನರಾವರ್ತನೆ ಆಗದಂತೆ ನಿಗಾವಹಿಸಬೇಕಿದೆ. ಮುಖಂಡರು ಮುಂದೆ ನಿಂತು ಜವಾಬ್ದಾರಿಯಿಂದ ಶಾಂತಿಯುತವಾಗಿ ಹಬ್ಬಗಳನ್ನು ಮುಗಿಸೋಣ ಎಂದರು.
ಎರಡೂ ಹಬ್ಬಗಳು ಒಟ್ಟೊಟ್ಟಿಗೆ ಬರುತ್ತಿರುವುದರ ಹಿಂದೆ ಭಗವಂತನ ಉದ್ದೇಶ ಬೇರೆದಿದೆ. ಹಿಂದೂ ಮುಸ್ಲಿಂ ಎರಡು ಕಣ್ಣುಗಳಿದ್ದಂತೆ. ಎರಡೂ ಕಣ್ಣುಗಳು ಮುಖ್ಯ ಎಂದು ವಿವರಿಸಿದರು.
ಪೊಲೀಸರು ಸ್ವಾತಂತ್ರ್ಯಕ್ಕೆ ಅಡ್ಡಿ ಮಾಡುವವರಲ್ಲ. ಸಣ್ಣ ಘಟನೆ ಆದ ಕೂಡಲೇ ಕೆದಕಲೇಬೇಕಾಗುತ್ತೆ. ಬಹಳ ಜನ ಸಿಕ್ಕಿಬಿಳ್ತಾರೆ. ಅಂಥದ್ದು ಬಾರದಿರಲಿ ಎಂದು ಈ ಸಭೆಗಳನ್ನು ಹಮ್ಮಿಕೊಳ್ಳುತ್ತಿರೋದು ಎಂದು ನುಡಿದರು.
ಉಪಸ್ಥಿತಿ-
ಸದರ್ ಅಬ್ದುಲ್ ಸತ್ತಾರ್ ಬೇಗ್, ಕಾರ್ಯದರ್ಶಿ ಏಜಾಜ್ ಪಾಷ, ಮಸೀದಿ ಅಧ್ಯಕ್ಷ ಮುನವರ್ ಪಾಷ, ವಕ್ಫ್ ಬೋರ್ಡ್ ಅಧಿಕಾರಿ ಸೈಯದ್ ಮಹತಾಬ್ ಸರ್ವರ್, ಡಿಎಸ್ ಪಿ ಆಂಜನಪ್ಪ, ಸಿಪಿಐ ರವಿ ಪಾಟೀಲ ಸೇರಿದಂತೆ ಹಲವರಿದ್ದರು.