*ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಸರ್ವ ಸದಸ್ಯರ ಸಭೆ ಪ್ರತಿಭಾ ಪುರಸ್ಕಾರ – ಸನ್ಮಾನ*

*ಶಿವಮೊಗ್ಗ ನಗರದ ಪ್ರತಿಷ್ಠಿತ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಯ 1೦1 ನೇ ವಾರ್ಷಿಕ ಸರ್ವ ಸದಸ್ಯರ ಸಭೆಯು ಬಾಲರಾಜ್ ಅರಸ್ ರಸ್ತೆಯ ಬಂಜಾರ ಕನ್ವೆನ್ಸನ್ ಹಾಲ್ ನಲ್ಲಿ ಯಶಸ್ವಿಯಾಗಿ ನೆರವೇರಿತು*
*ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸೊಸೈಟಿಯ ಅಧ್ಯಕ್ಷರದ ಶ್ರೀಯುತ ಎಸ್.ಕೆ.ಮರಿಯಪ್ಪನವರು ಸಭೆಯನ್ನು ಉದ್ಘಾಟಿಸಿ, ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಸಂಘದ ಪ್ರಗತಿಯ ನೋಟವನ್ನು ವಿವರಿಸುತ್ತಾ ಮಾರ್ಚ್ 2026ರ ಅಂತ್ಯಕ್ಕೆ ಸಂಘದ ಒಟ್ಟು ಸದಸ್ಯರ ಸಂಖ್ಯೆ 6898 ಇದ್ದು, ರೂ.17.09ಲಕ್ಷ ಷೇರು ಬಂಡವಾಳ, ರೂ.1.00 ಕೋಟಿ 22 ಲಕ್ಷಗಳ ಠೇವಣಿ, ಸಂಗ್ರಹಣೆಯಾಗಿದ್ದು, ವರದಿ ಸಾಲಿನಲ್ಲಿ ಮನೆ ರಿಪೇರಿ ಸಾಲ ರೂ.1.00 ಕೋಟಿ 49ಲಕ್ಷಗಳನ್ನು ನೀಡಲಾಗಿದೆ. ಹಾಗೂ ಮೆಟ್ರೋ ಆಸ್ಪತ್ರೆಯ ಬಾಡಿಗೆಯು ದಿ:1.8.2026 ರಿಂದ* *ರೂ.9,57,000.00ಗಳಂತೆ ಜಮಾ ಆಗಲಿದೆ ಎಂದು ಮಾಹಿತಿ ನೀಡಿದರು ಸಂಘದ ಸಾಲದ ಸುಸ್ತಿ ಪ್ರಮಾಣ ಕಳೆದ ಸಾಲಿನಲ್ಲಿ 8.70ರಷ್ಟಿದ್ದು, ಈ ಸಾಲಿನಲ್ಲಿ* *ಶೇ.6.90ರಷ್ಟು ಆಗಿದ್ದು, ಶೇ.1.80ರಷ್ಟು ಕಡಿಮೆಯಾಗಿರುತ್ತದೆ. ಈ ವರ್ಷವೂ ಸಹಾ ಸಂಘವು “ಬಿ” ವರ್ಗದಲ್ಲಿದೆ*
*ಈ ಸಾಲಿನಲ್ಲಿ ಲಾಭಾಂಶ ಶೇ.20% ನೀಡಲು ಮಹಾಸಭೆಯಲ್ಲಿ ಅನುಮೋದನೆ ನೀಡಿದೆ ಎಂದು ಸಂಘದ ಸಾಧನೆಯನು ಸಭೆಯಲ್ಲಿ ತಿಳಿಸಿದರು*
*ಪ್ರತಿಭಾ ಪುರಸ್ಕಾರ: ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಪದವಿ, ಸ್ನಾತಕೋತ್ತರ, ವೈದ್ಯಕೀಯ ಪದವಿಗಳಲ್ಲಿ ಉತ್ತಮ ಅಂಕ ಅತ್ಯುತ್ತಮ 90% ಶ್ರೇಣಿಯಲ್ಲಿ ತೇರ್ಗಡೆಯಾದ ಸದಸ್ಯರ ಒಟ್ಟು 49 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು*
*ಸನ್ಮಾನ: ಕರ್ನಾಟಕ ಸರ್ಕಾರದಿಂದ “ಸಹಕಾರ ರತ್ನ” ಬಿರುದು ಪಡೆದ ಶ್ರೀಯುತ ಎಸ್.ಕೆ. ಮರಿಯಪ್ಪನವರಿಗೆ ಸದಸ್ಯರು ಮತ್ತು ಆಡಳಿತ ಮಂಡಳಿ ಪರವಾಗಿ ಸನ್ಮಾನಿಸಲಾಯಿತು*.
*ಕಾರ್ಯಕ್ರಮದ ನಿರೂಪಣೆಯನ್ನು ಸೊಸೈಟಿಯ ಖಜಾಂಚಿಯಾದ ಕೆ ರಂಗನಾಥ್ ರವರು ಹಾಗೂ ಸ್ವಾಗತವನ್ನು ನಿರ್ದೇಶಕರಾದ ಎಂ ಆರ್ ಪ್ರಕಾಶ್ ,ರವರು ನೆರವೇರಿಸಿದರು*
*ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಸಿ.ಹೊನ್ನಪ್ಪ, ನಿರ್ದೇಶಕರುಗಳಾದ ನರಸಿಂಹ ಸಿ, ಎಸ್.ಎಂ,ಕುಮಾರ್, ಹೆಚ್ ಬಿ ನಟರಾಜ್ ಶಾಸ್ತ್ರಿ , ಎಂ ಪ್ರವೀಣ್ , ಉಮಾಶಂಕರ್ ಉಪಾಧ್ಯ, ಡಾ.ಶ್ರೀನಿವಾಸ್ ಕರಿಯಣ್ಣ , ಕೆ ಜಿ ರಾಘವೇಂದ್ರ, ನಿರ್ಮಲ ಕಾಶಿ, ವೇದಾವತಿ, ಸಿ ಉಮಾಪತಿ ಸೊಸೈಟಿಯ ಕಾರ್ಯದರ್ಶಿ ,ಸಿಬ್ಬಂದಿಗಳು , ಉಪಸ್ಥಿತರಿದ್ದರು ಹಾಗೂ ಅತಿ ಹೆಚ್ಚು ಸದಸ್ಯರುಗಳು ಸಭೆಯಲ್ಲಿ ಪಾಲ್ಗೊಂಡು ಸೊಸೈಟಿಯ ಮುಂದಿನ ಕಾರ್ಯವೈಕರಿಗೆ ಉತ್ತಮ ಸಲಹೆಗಳನ್ನು ನೀಡಿದರು* *ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಸರ್ವ ಸದಸ್ಯರ ಸಭೆ ಪ್ರತಿಭಾ ಪುರಸ್ಕಾರ – ಸನ್ಮಾನ*
*ಶಿವಮೊಗ್ಗ ನಗರದ ಪ್ರತಿಷ್ಠಿತ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಯ 1೦1 ನೇ ವಾರ್ಷಿಕ ಸರ್ವ ಸದಸ್ಯರ ಸಭೆಯು ಬಾಲರಾಜ್ ಅರಸ್ ರಸ್ತೆಯ ಬಂಜಾರ ಕನ್ವೆನ್ಸನ್ ಹಾಲ್ ನಲ್ಲಿ ಯಶಸ್ವಿಯಾಗಿ ನೆರವೇರಿತು*
*ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸೊಸೈಟಿಯ ಅಧ್ಯಕ್ಷರದ ಶ್ರೀಯುತ ಎಸ್.ಕೆ.ಮರಿಯಪ್ಪನವರು ಸಭೆಯನ್ನು ಉದ್ಘಾಟಿಸಿ, ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಸಂಘದ ಪ್ರಗತಿಯ ನೋಟವನ್ನು ವಿವರಿಸುತ್ತಾ ಮಾರ್ಚ್ 2026ರ ಅಂತ್ಯಕ್ಕೆ ಸಂಘದ ಒಟ್ಟು ಸದಸ್ಯರ ಸಂಖ್ಯೆ 6898 ಇದ್ದು, ರೂ.17.09ಲಕ್ಷ ಷೇರು ಬಂಡವಾಳ, ರೂ.1.00 ಕೋಟಿ 22 ಲಕ್ಷಗಳ ಠೇವಣಿ, ಸಂಗ್ರಹಣೆಯಾಗಿದ್ದು, ವರದಿ ಸಾಲಿನಲ್ಲಿ ಮನೆ ರಿಪೇರಿ ಸಾಲ ರೂ.1.00 ಕೋಟಿ 49ಲಕ್ಷಗಳನ್ನು ನೀಡಲಾಗಿದೆ. ಹಾಗೂ ಮೆಟ್ರೋ ಆಸ್ಪತ್ರೆಯ ಬಾಡಿಗೆಯು ದಿ:1.8.2026 ರಿಂದ* *ರೂ.9,57,000.00ಗಳಂತೆ ಜಮಾ ಆಗಲಿದೆ ಎಂದು ಮಾಹಿತಿ ನೀಡಿದರು ಸಂಘದ ಸಾಲದ ಸುಸ್ತಿ ಪ್ರಮಾಣ ಕಳೆದ ಸಾಲಿನಲ್ಲಿ 8.70ರಷ್ಟಿದ್ದು, ಈ ಸಾಲಿನಲ್ಲಿ* *ಶೇ.6.90ರಷ್ಟು ಆಗಿದ್ದು, ಶೇ.1.80ರಷ್ಟು ಕಡಿಮೆಯಾಗಿರುತ್ತದೆ. ಈ ವರ್ಷವೂ ಸಹಾ ಸಂಘವು “ಬಿ” ವರ್ಗದಲ್ಲಿದೆ*
*ಈ ಸಾಲಿನಲ್ಲಿ ಲಾಭಾಂಶ ಶೇ.20% ನೀಡಲು ಮಹಾಸಭೆಯಲ್ಲಿ ಅನುಮೋದನೆ ನೀಡಿದೆ ಎಂದು ಸಂಘದ ಸಾಧನೆಯನು ಸಭೆಯಲ್ಲಿ ತಿಳಿಸಿದರು*
*ಪ್ರತಿಭಾ ಪುರಸ್ಕಾರ: ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಪದವಿ, ಸ್ನಾತಕೋತ್ತರ, ವೈದ್ಯಕೀಯ ಪದವಿಗಳಲ್ಲಿ ಉತ್ತಮ ಅಂಕ ಅತ್ಯುತ್ತಮ 90% ಶ್ರೇಣಿಯಲ್ಲಿ ತೇರ್ಗಡೆಯಾದ ಸದಸ್ಯರ ಒಟ್ಟು 49 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು*
*ಸನ್ಮಾನ: ಕರ್ನಾಟಕ ಸರ್ಕಾರದಿಂದ “ಸಹಕಾರ ರತ್ನ” ಬಿರುದು ಪಡೆದ ಶ್ರೀಯುತ ಎಸ್.ಕೆ. ಮರಿಯಪ್ಪನವರಿಗೆ ಸದಸ್ಯರು ಮತ್ತು ಆಡಳಿತ ಮಂಡಳಿ ಪರವಾಗಿ ಸನ್ಮಾನಿಸಲಾಯಿತು*.
*ಕಾರ್ಯಕ್ರಮದ ನಿರೂಪಣೆಯನ್ನು ಸೊಸೈಟಿಯ ಖಜಾಂಚಿಯಾದ ಕೆ ರಂಗನಾಥ್ ರವರು ಹಾಗೂ ಸ್ವಾಗತವನ್ನು ನಿರ್ದೇಶಕರಾದ ಎಂ ಆರ್ ಪ್ರಕಾಶ್ ,ರವರು ನೆರವೇರಿಸಿದರು*
*ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಸಿ.ಹೊನ್ನಪ್ಪ, ನಿರ್ದೇಶಕರುಗಳಾದ ನರಸಿಂಹ ಸಿ, ಎಸ್.ಎಂ,ಕುಮಾರ್, ಹೆಚ್ ಬಿ ನಟರಾಜ್ ಶಾಸ್ತ್ರಿ , ಎಂ ಪ್ರವೀಣ್ , ಉಮಾಶಂಕರ್ ಉಪಾಧ್ಯ, ಡಾ.ಶ್ರೀನಿವಾಸ್ ಕರಿಯಣ್ಣ , ಕೆ ಜಿ ರಾಘವೇಂದ್ರ, ನಿರ್ಮಲ ಕಾಶಿ, ವೇದಾವತಿ, ಸಿ ಉಮಾಪತಿ ಸೊಸೈಟಿಯ ಕಾರ್ಯದರ್ಶಿ ,ಸಿಬ್ಬಂದಿಗಳು , ಉಪಸ್ಥಿತರಿದ್ದರು ಹಾಗೂ ಅತಿ ಹೆಚ್ಚು ಸದಸ್ಯರುಗಳು ಸಭೆಯಲ್ಲಿ ಪಾಲ್ಗೊಂಡು ಸೊಸೈಟಿಯ ಮುಂದಿನ ಕಾರ್ಯವೈಕರಿಗೆ ಉತ್ತಮ ಸಲಹೆಗಳನ್ನು ನೀಡಿದರು*