*೨೦೨೬ ನೇ ಸಾಲಿನ ಮಾಣಿಕ್ಯ ಪ್ರಕಾಶನದ ವಾರ್ಷಿಕ ದತ್ತಿ ಪ್ರಶಸ್ತಿಗಳ ಪ್ರಕಟಣೆ* *ರಾಜ್ಯ ಹಾಗೂ ಹೊರ ರಾಜ್ಯದ ೨೮ ಕೃತಿಗಳಿಗೆ ೨೦೨೬ ನೇ ಸಾಲಿನ ಮಾಣಿಕ್ಯ ಪ್ರಕಾಶನದ ವಿವಿಧ ದತ್ತಿ ಪ್ರಶಸ್ತಿಗಳು ಪ್ರಕಟ*
*೨೦೨೬ ನೇ ಸಾಲಿನ ಮಾಣಿಕ್ಯ ಪ್ರಕಾಶನದ ವಾರ್ಷಿಕ ದತ್ತಿ ಪ್ರಶಸ್ತಿಗಳ ಪ್ರಕಟಣೆ*
*ರಾಜ್ಯ ಹಾಗೂ ಹೊರ ರಾಜ್ಯದ ೨೮ ಕೃತಿಗಳಿಗೆ ೨೦೨೬ ನೇ ಸಾಲಿನ ಮಾಣಿಕ್ಯ ಪ್ರಕಾಶನದ ವಿವಿಧ ದತ್ತಿ ಪ್ರಶಸ್ತಿಗಳು ಪ್ರಕಟ*
ಹಾಸನ : ಮಾಣಿಕ್ಯ ಪ್ರಕಾಶನ(ರಿ.), ಹಾಸನ ಕಳೆದ ಒಂದು ದಶಕಗಳಿಂದ ಕೊಡಮಾಡುತ್ತಾ ಬಂದಿರುವ ಕನ್ನಡ ಸಾಹಿತ್ಯದ ವಿವಿಧ ಹದಿಮೂರು ಪ್ರಕಾರಗಳಿಗೆ ೨೮ ಕೃತಿಗಳು ಪ್ರಶಸ್ತಿಗೆ ಭಾಜನವಾಗಿವೆ ಎಂದು ಪ್ರಕಾಶಕಿ ದೀಪಾ ಉಪ್ಪಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್, ಗೌರವಾಧ್ಯಕ್ಷರಾದ ರಂಜಾನ್ ದರ್ಗಾ, ಮಹಾರಾಷ್ಟç ರಾಜ್ಯಾಧ್ಯಕ್ಷರಾದ ಡಾ. ವಿಶ್ವೇಶ್ವರ ಎನ್. ಮೇಟಿ, ಮಹಾರಾಷ್ಟ್ರ ರಾಜ್ಯ ಗೌರವಾಧ್ಯಕ್ಷ ಡಾ. ಅಮರೇಶ ಪಾಟೀಲ, ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ಎಚ್.ಕೆ.ಹಸೀನಾ, ನಾಡಿನ ಪ್ರಸಿದ್ಧ ಸಾಹಿತಿ ಎನ್. ಶೈಲಜಾ ಹಾಸನ, ಹಿರಿಯ ಸಾಹಿತಿಗಳಾದ ಶಿವಲೀಲಾ ಹುಣಸಗಿ, ಎ.ಎ.ದರ್ಗಾ ಅವರನ್ನೊಳಗೊಂಡ ಆಯ್ಕೆ ಸಮಿತಿ ರಾಜ್ಯ ಹಾಗೂ ನೆರೆ ರಾಜ್ಯಗಳಿಂದ ಆಹ್ವಾನಿತ ಸುಮಾರು ಮುನ್ನೂರಕ್ಕೂ ಹೆಚ್ಚು ಕೃತಿಗಳನ್ನು ಅವಲೋಕಿಸಿ ಪ್ರತಿ ದತ್ತಿ ಪ್ರಶಸ್ತಿಗೆ ತಲಾ ಎರಡು ಕೃತಿಗಳಿಗೆ ಹಂಚಿಕೆಮಾಡಿ ೧೩ ಪ್ರಕಾರಗಳಿಗೆ ೨೮ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ಕೃತಿಕತೃಗಳಿಗೆ ಪ್ರಕಾಶನ ೨೦೨೬ ಅಕ್ಟೋಬರ್ ೧೧ ಭಾನುವಾರ ಹಾಸನದ ಅರಳೀಕಟ್ಟೆ ವೃತ್ತದಲ್ಲಿರುವ ಸಂಸ್ಕೃತ ಭವನದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಹಮ್ಮಿಕೊಂಡಿರುವ ೧೧ ನೇ ವರ್ಷದ ವಾರ್ಷಿಕೋತ್ಸವ ಹಾಗೂ ರಾಜ್ಯಮಟ್ಟದ ಕವಿಕಾವ್ಯ ಸಂಭ್ರಮದಲ್ಲಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಲಲಿತ ಪ್ರಬಂಧ ಪ್ರಕಾರಕ್ಕೆ ಕೊಡಮಾಡುವ ಪ್ರಸಿದ್ಧ ಸಾಹಿತಿ ಎನ್. ಶೈಲಜಾ ಹಾಸನ ದತ್ತಿ ಪ್ರಬಂಧ ಮಾಣಿಕ್ಯ ಪ್ರಶಸ್ತಿಗೆ ಉತ್ತರ ಕನ್ನಡ ಜಿಲ್ಲೆಯ ಸುಚಿತ್ರಾ ಹೆಗಡೆಯವರ “ಮಿಂಚುಹುಳದ ದಾರಿ” ಹಾಗೂ ಬೆಳಗಾವಿಯ ಜ್ಯೋತಿ ಬದಾಮಿಯವರ “ಕುಂಬಳಕಾಯಿ ಕಳ್ಳ ಅಂದ್ರೆ” ಕೃತಿಗಳು ಆಯ್ಕೆಯಾಗಿವೆ.
ಕಾವ್ಯ ಪ್ರಕಾರಕ್ಕೆ ಕೊಡಮಾಡುವ ದಿ. ಸಿ.ಪಿ. ನಾರಾಯಣಚಾರ್ಯ ಸ್ಮಾರಕ ದತ್ತಿ ಕಾವ್ಯ ಮಾಣಿಕ್ಯ ಪ್ರಶಸ್ತಿಗೆ ಬೆಂಗಳೂರಿನ ಡಾ. ಶೈಲೇಶ್ ಕುಮಾರ್ ಅವರ “ರಿಯಾಯಿತಿ ದರದ ಬುದ್ಧ”, ಬೆಳಗಾವಿಯ ಶೋಭಾ ನಾಯಕರವರ “ಅರ್ಧ ಮುಖಗಳ ಶಹರು”, ಕೊಪ್ಪಳದ ಶರಣಪ್ಪ ತಳ್ಳಿ ಕುಪ್ಪಿಗುಡ್ಡರವರ “ನಾಕು ತಾವಿನ ತಿರುವು”, ಉತ್ತರ ಕನ್ನಡದ ವನರಾಗಶರ್ಮರವರ “ಕೊಳಲನೇಕೆ ನುಡಿಸದಿರುವೆ” ಕೃತಿಗಳು ಆಯ್ಕೆಯಾಗಿವೆ.
ಸಂಶೋಧನಾ ವಿಭಾಗಕ್ಕೆ ಕೊಡಮಾಡುವ ದಿ. ನಿಂಗಪ್ಪ ಮಲ್ಲಪ್ಪ ಮೇಟಿ ಸ್ಮಾರಕ ದತ್ತಿ ಸಂಶೋಧನಾ ಮಾಣಿಕ್ಯ ಪ್ರಶಸ್ತಿಗೆ ಮುಂಬಯಿಯ ಡಾ. ದುರ್ಗಪ್ಪ ಕೋಟಿಯವರ್ ಅವರ “ಮುಂಬಯಿ ಕನ್ನಡ ಗದ್ಯ ವಾಹಿನಿ”, ರಾಯಚೂರಿನ ಈರಣ್ಣ ಬೆಂಗಾಲಿಯವರ “ನಮ್ಮ ರಾಯಚೂರು” ಕೃತಿಗಳು ಆಯ್ಕೆಯಾಗಿವೆ.
ವಚನ ಸಾಹಿತ್ಯ ವಿಭಾಗಕ್ಕೆ ಕೊಡಮಾಡುವ ದಿ. ದೊಡ್ಡಚಂದಪ್ಪ ತಳ್ಳಿ ಪಾಟೀಲ ಸ್ಮಾರಕ ದತ್ತಿ ವಚನ ಮಾಣಿಕ್ಯ ಪ್ರಶಸ್ತಿಗೆ ಹಾವೇರಿ ಜಿಲ್ಲೆಯ ಡಾ. ಪುಷ್ಪಾವತಿ ಶಲವಡಿಮಠರವರ “ಅನುಭಾವ ದೀಪ್ತಿ”, ಕೊಪ್ಪಳ ಜಿಲ್ಲೆಯ ಗೀತಾ ಮಲ್ಲನಗೌಡರವರ “ವಚನ ಸಿರಿ” ಕೃತಿಗಳು ಆಯ್ಕೆಯಾಗಿವೆ.
ನಾಟಕ ವಿಭಾಗಕ್ಕೆ ಕೊಡಮಾಡುವ ಪ್ರಭಾವತಿ ಶೆಡ್ತಿ ದತ್ತಿ ನಾಟಕ ಮಾಣಿಕ್ಯ ಪ್ರಶಸ್ತಿಗೆ ಬಾಗಲಕೋಟೆ ಜಿಲ್ಲೆಯ ಗಣೇಶ ಅಮೀನಗಡ ಅವರ “ಬಂಗಾರದ ಮನುಷ್ಯ”, ಧಾರವಾಡ ಜಿಲ್ಲೆಯ ವಿನುತಾ ಹಂಚಿನಮನಿ ಅವರ “ಪರಾಜಿತೆಯರು” ಕೃತಿಗಳು ಆಯ್ಕೆಯಾಗಿವೆ.
ಕಾದಂಬರಿ ವಿಭಾಗಕ್ಕೆ ಕೊಡಮಾಡುವ ದಿ. ಫೆಲಿಕ್ಸ್ ಅಲ್ಬುಕರ್ಕ್ ಮಂಡಂತ್ಯಾರ್ ಸ್ಮಾರಕ ದತ್ತಿ ಕಾದಂಬರಿ ಮಾಣಿಕ್ಯ ಪ್ರಶಸ್ತಿಗೆ ಬೆಳಗಾವಿ ಜಿಲ್ಲೆಯ ರಂಜಿತಾ ವಿಕ್ರಮ ಮಹಾಜನರವರ “ಅವಳೇ ನನ್ನ..”, ಹಾವೇರಿ ಜಿಲ್ಲೆಯ ರವೀಂದ್ರ ಮುದ್ದಿಯವರ “ಗಾಡ್ ಈಸ್ ನಾಟ್ ರೀಚಬಲ್” ಕೃತಿಗಳು ಆಯ್ಕೆಯಾಗಿವೆ.
ಗಜಲ್ ವಿಭಾಗಕ್ಕೆ ಕೊಡಮಾಡುವ ದಿ. ಫಾತಿಮಾ ಜನಾಬ್ ಸೈಯದ್ ಅಬ್ದುಲ್ ಘನೀ ಸಾಬ್ ಸ್ಮಾರಕ ದತ್ತಿ ಗಜಲ್ ಮಾಣಿಕ್ಯ ಪ್ರಶಸ್ತಿಗೆ ಹಾವೇರಿ ಜಿಲ್ಲೆಯ ಲಕ್ಷ್ಮೀಕಾಂತ್ ಮಿರಜಕರ ಅವರ “ಖಾಲಿ ಜೋಳಿಗೆಯ ಫಕೀರ”, ಧಾರವಾಡ ಜಿಲ್ಲೆಯ ಡಾ. ರೇಣುಕಾತಾಯಿ ಸಂತ ಬಾ ಅವರ “ದಿಲ್‌ಕಶ್ ಗಜಲ್” ಕೃತಿಗಳು ಆಯ್ಕೆಯಾಗಿವೆ.
ಕಥಾ ವಿಭಾಗಕ್ಕೆ ಕೊಡಮಾಡುವ ಕೊಣನೂರು ಅಣ್ಣಯ್ಯ ದತ್ತಿ ಕಥಾ ಮಾಣಿಕ್ಯ ಪ್ರಶಸ್ತಿಗೆ ಬಾಗಲಕೋಟೆ ಜಿಲ್ಲೆಯ ಎಂ.ಡಿ. ಚಿತ್ತರಗಿ ಅವರ “ಚಟ್ಟದ ಬಿಕ್ಕು”, ಗದಗ ಜಿಲ್ಲೆಯ ಡಾ. ಉಮೇಶ ತಿಮ್ಮಾಪುರ ಅವರ “ಕಗ್ಗಲ್ಲ ಕ್ರಾಸ್” ಕೃತಿಗಳು ಆಯ್ಕೆಯಾಗಿವೆ.
ಚುಟುಕು ಸಾಹಿತ್ಯ ವಿಭಾಗಕ್ಕೆ ಕೊಡಮಾಡುವ ಕೆ. ವೈ. ಕಂದಕೂರ ದತ್ತಿ ಚುಟುಕು ಮಾಣಿಕ್ಯ ಪ್ರಶಸ್ತಿಗೆ ಮಂಡ್ಯ ಜಿಲ್ಲೆಯ ನಂದಾದೀಪ ಅವರ “ರಾತ್ರಿ ಸುರಿದ ಮಲ್ಲಿಗೆ”, ಕೊಪ್ಪಳ ಜಿಲ್ಲೆಯ ಜಯಶ್ರೀ ಹಕ್ಕಂಡಿಯವರ “ಮಿಣುಕು ದೀಪಗಳು” ಕೃತಿಗಳು ಆಯ್ಕೆಯಾಗಿವೆ.
ವಿಮರ್ಶಾ ವಿಭಾಗಕ್ಕೆ ಕೊಡಮಾಡುವ ಕುಂದೂರು ಜಯಪದ್ಮ ಧರಣೇಂದ್ರರಾಜ್ ದತ್ತಿ ವಿಮರ್ಶಾ ಮಾಣಿಕ್ಯ ಪ್ರಶಸ್ತಿಗೆ ಶಿವಮೊಗ್ಗ ಜಿಲ್ಲೆಯ ಡಾ. ಜಿ.ಎಸ್. ಅಶೋಕ ಅವರ “ಡಾ. ಜಿ.ಎಸ್.ಶಿವರುದ್ರಪ್ಪ ಮತ್ತು ಚನ್ನವೀರ ಕಣವಿಯವರ ಕಾವ್ಯದಲ್ಲಿನ ಕಾವ್ಯ ಮೀಮಾಂಸೆ ಮತ್ತು ತೌಲನಿಕ ವಿವೇಚನೆ”, ವಿಜಯಪುರ ಜಿಲ್ಲೆಯ ಹರೀಶ ಟಿ.ಜಿ. ಅವರ “ಹೊಳೆದದ್ದೇ ತಾರೆ” ಕೃತಿಗಳು ಆಯ್ಕೆಯಾಗಿವೆ.
ಮಕ್ಕಳ ಸಾಹಿತ್ಯ ವಿಭಾಗಕ್ಕೆ ಕೊಡಮಾಡುವ ದಿ. ರಾಮಣ್ಣ ಸುಬ್ಬಣ್ಣ ಹುಣಸಗಿ ದತ್ತಿ ಶಿಶು ಮಾಣಿಕ್ಯ ಪ್ರಶಸ್ತಿಗೆ ಶಿವಮೊಗ್ಗ ಜಿಲ್ಲೆಯ ಕೃಪಾ ಬಿ.ಎಂ. ಅವರ “ಮಕ್ಕಳ ಮ್ಯಾಜಿಕ್”, ಹಾಸನ ಜಿಲ್ಲೆಯ ಮಮತಾ ಅರಸೀಕೆರೆ ಅವರ “ಗೂಡು ಸೇರಿದ ಹಕ್ಕಿಗಳು” ಕೃತಿಗಳು ಆಯ್ಕೆಯಾಗಿವೆ.
ಬಿಡಿ ಲೇಖನಗಳ ವಿಭಾಗಕ್ಕೆ ಕೊಡಮಾಡುವ ದಿ. ರಾಮಸ್ವಾಮಿ ಎಚ್. ಶ್ರೀಮತಿ ರಂಗಲಕ್ಷ್ಮಿ ದತ್ತಿ ಲೇಖನ ಮಾಣಿಕ್ಯ ಪ್ರಶಸ್ತಿಗೆ ಉತ್ತರ ಕನ್ನಡ ಜಿಲ್ಲೆಯ ಗಜಾನನ ಭಟ್ಟ ಅವರ “ಕಣದಂಗ”, ದಾವಣಗೆರೆ ಜಿಲ್ಲೆಯ ಎನ್.ಟಿ. ರ‍್ರಿಸ್ವಾಮಿ ಅವರ “ಸಾಧನೆಗೆ ಹಾದಿ ನೂರು” ಕೃತಿಗಳು ಆಯ್ಕೆಯಾಗಿವೆ.
ಹಾಸ್ಯ ಸಾಹಿತ್ಯ ವಿಭಾಗಕ್ಕೆ ಕೊಡಮಾಡುವ ದಿ. ಕರಿಯಯ್ಯ, ದಿ. ದೇವಮ್ಮ ಸ್ಮಾರಕ ದತ್ತಿ ಹಾಸ್ಯ ಮಾಣಿಕ್ಯ ಪ್ರಶಸ್ತಿಗೆ ರಾಯಚೂರು ಜಿಲ್ಲೆಯ ಪಿ. ವೆಂಕಟೇಶ ಬಾಗಲವಾಡ ಅವರ “ನಿಮಗ ತಿಳಿಯೋದಿಲ್ಲ ಬಿಡ್ರಿ”, ಹಾಸನ ಜಿಲ್ಲೆಯ ಸುಮಾರಮೇಶ್ ಅವರ “ಚೆಲ್ಲಿದರು ಮಲ್ಲಿಗೆಯ” ಕೃತಿಗಳು ಆಯ್ಕೆಯಾಗಿವೆ.


