*ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ* *ಸೆ.21ರಿಂದ 23ರವರೆಗೆ ಕಸ್ತೂರಿ ರಂಗನ್- ಬರ ಕುರಿತು ವಿಶೇಷ ಅಧಿವೇಶನ…* *ಮಾನಾ ಮರ್ಯಾದೆ ಇದ್ರೆ, ಗೌರವ ಉಳಿಸ್ಕೋಬೇಕಂದ್ರೆ ವಿರೋಧ ಪಕ್ಷದವರು ವಿಧಾನಸಭೆಗೆ ಬಂದು ಬಾಯಿ ಬಿಡ್ರೀ…*

*ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ*

*ಸೆ.21ರಿಂದ 23ರವರೆಗೆ ಕಸ್ತೂರಿ ರಂಗನ್- ಬರ ಕುರಿತು ವಿಶೇಷ ಅಧಿವೇಶನ…*

*ಮಾನಾ ಮರ್ಯಾದೆ ಇದ್ರೆ, ಗೌರವ ಉಳಿಸ್ಕೋಬೇಕಂದ್ರೆ ವಿರೋಧ ಪಕ್ಷದವರು ವಿಧಾನಸಭೆಗೆ ಬಂದು ಬಾಯಿ ಬಿಡ್ರೀ…*

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅಡ್ರೆಸ್ಸಿಗೇ ಇರೋಲ್ಲ…ಒಬ್ಬೊಬ್ಬ ಮುಖ್ಯಮಂತ್ರಿಯನ್ನೂ ಲೆಕ್ಕಹಾಕಿ ನೋಡಿ. ಹೋರಾಟ ಮಾಡಿದಾರೆ ಅಂತಾರೆ ರೈತರ ಮೇಲೆ ಗುಂಡು ಹಾರಿಸಿದ್ದೇ ಸಾಧನೆ. ಮೋದಿ ಥರಾ ಮಾತಾಡೋದು ನೋಡಿದ್ದೀರಾ…

ಹೇಳಿಕೆಗಳು ರೋಷಾವೇಷದಲ್ಲಿ ಬಂದು ಬಿಡುತ್ತವೆ. ಶರಾವತಿ ಸಂತ್ರಸ್ತರ ಸಮಸ್ಯೆ ವಿರುದ್ಧ ಹಂತ ಹಂತದ ಹೋರಾಟ ಮುಖ್ಯ. ಸಂತ್ರಸ್ತರಿಗೆ ಶಿಕ್ಷೆ ಕೊಟ್ಟಿದ್ದೇ ಬೊಮ್ಮಾಯಿ ಸರ್ಕಾರ. ಆಗ ರಾಘವೇಂದ್ರ ಯಾರೂ ಇರ್ಲಿಲ್ವಾ?

ಕಸ್ತೂರಿ ರಂಗನ್ ಕುರಿತು ಸಿಎಂ ಕಾಳಜಿ ತೋರಿಸಿದ್ದಾರೆ. ವಿಶೇಷ ವರದಿ ನೀಡಲು ನಿರ್ದೇಶಿಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ವ್ಯವಸ್ಥಿತವಾಗಿ ರಿಪೋರ್ಟ್ ಕೊಡಲಿಲ್ಲ ಅಂದ್ರೆ ಕಷ್ಟವಾಗುತ್ತೆ. ಯಡಿಯೂರಪ್ಪ ಜೈಲಿಗೆ ಹೋದಾಗ, ಕೆಜೆಪಿ ಕಟ್ಟಿದಾಗ ಇದೇ ಈಶ್ವರಪ್ಪ ಏನ್ ಹೇಳಿದ್ರು ಅನ್ನೋದು ಮರೆಯೋಕೆ ಸಾಧ್ಯವೇ?

ಕಸ್ತೂರಿ ರಂಗನ್ ವರದಿ ವಿರುದ್ಧ 7 ಬಾರಿ ವಿರೋಧ ವ್ಯಕ್ತವಾಗಿದೆ. ಕಾಂಗ್ರೆಸ್ ಮೊದಲಿಂದಲೂ ವಿರೋಧಿಸುತ್ತಾ ಬಂದಿದೆ. ಎಂಪಿ ರಾಘವೇಂದ್ರ, ಶೋಭಾ ಕರಂದ್ಲಾಜೆ ಆಗ 2016ರಲ್ಲಿ ಕೂಡ ಎಂಪಿ ಆಗಿದ್ದರು. ಅಧಿಕೃತ ಸಭೆಗೆ ಕರೆದಿದ್ದಾಗ ಇವರೆಲ್ಲ ಮಾಲ್ಡೀವ್ಸ್ ಗೆ ಹೋಗಿದ್ರಾ? ಯಾಕ್ ಹೋಗಿದ್ರೋ ನಮಗೆ ಬೇಕಿಲ್ಲ. ತಮ್ಮ ಜವಾಬ್ದಾರಿ ನಿಭಾಯಿಸದೇ ಏನ್ ಮಾಡ್ತಿದ್ರು?

ರಾಜ್ಯಾಧ್ಯಕ್ಷ ವಿಜಯೇಂದ್ರ ಈಗಲಾದರೂ ನಾಟಿ ಮಾಡೋದು ಕಲೀತಿದ್ದಾರಲ್ಲ…ಪಾದಯಾತ್ರೆ ನಾಟಕ ಮಾಡ್ತಿದ್ದಾರೆ.

ಕಾರವಾರ, ಶಿವಮೊಗ್ಗ, ಚಿಕ್ಕಮಗಳೂರು ಭಾಗಗಳ ಜನರ ಸಭೆ ಮುಖ್ಯಮಂತ್ರಿಗಳು ಕರೆದಿದ್ರು. ಕಸ್ತೂರಿ ರಂಗನ್ ವರದಿ ಚರ್ಚೆಗೆ ಒಂದು ದಿನದ ವಿಶೇಷ ಅಧಿವೇಶನ ಕರೆಯಲು ಮನಸು ಮಾಡಿದ್ದರು. ಮೂರು ದಿನಕ್ಕೆ ಈ ಕುರಿತ ವಿಶೇಷ ಅಧಿವೇಶನ ನಡೆಸಲು ನಿರ್ಧರಿಸಿದ್ದಾರೆ. ಇದು ಐತಿಹಾಸಿಕ ತೀರ್ಮಾನ. ಇಲ್ಲಿ ಬರ, ಕಸ್ತೂರಿ ರಂಗನ್ ವರದಿ ಕುರಿತು ಮಾತ್ರ ಚರ್ಚೆಗಳು ನಡೆಯಲಿವೆ.

ಸೆ.21-23ರವರೆಗೆ ಈ ವಿಶೇಷ ಅಧಿವೇಶನ ನಡೆಯಲಿದೆ. ವಿಶೇಷ ಚರ್ಚೆಗಳು ನಡೆಯಲಿವೆ. ಇಲ್ಲಿ ವಿಜಯೇಂದ್ರ ಏನ್ ಮಾತಾಡ್ತಾರೆ? ನಮ್ ಕೆಲಸ ನಾವು ಮಾಡ್ತೀವಿ. ಇವರಿಗೆ ಮಾನಾ ಮರ್ಯಾದೆ ಇದ್ರೆ, ಗೌರವ ಉಳಿಸ್ಕೋಬೇಕಂದ್ರೆ ವಿರೋಧ ಪಕ್ಷದವರು ವಿಧಾನಸಭೆಗೆ ಬಂದು ಬಾಯಿ ಬಿಡ್ರೀ…

ಟಿ.ಆರ್.ಅಂದ್ರೆ ಗೌರವ. ಅಂಥ ಗೌರವ ಶಿಕ್ಷಕರಿಗೆ ಕೊಡಲು ಸರ್ಕಾರ ನಿರ್ಧರಿಸಿದೆ. ಪ್ರಜಾಸೇವೆ ಕೂಡ ರಾಜ್ಯ ಸರ್ಕಾರದ ಒಂದು ಉತ್ತಮ ಕಾರ್ಯಕ್ರಮ.