*ಎ.ಸಿ. ಡಾ.ಮೈತ್ರಿಯವರ ದಾಳಿಗಳು ಪೂರ್ವ ನಿಯೋಜಿತವೇ?* *ಅಥವಾ ಅನಿರೀಕ್ಷಿತವೇ?* *ದಾಳಿಗಳ ಹಿಂದಿನ ಲೀಕ್ ಔಟ್…*
*ಎ.ಸಿ. ಡಾ.ಮೈತ್ರಿಯವರ ದಾಳಿಗಳು ಪೂರ್ವ ನಿಯೋಜಿತವೇ?*
*ಅಥವಾ ಅನಿರೀಕ್ಷಿತವೇ?*
*ದಾಳಿಗಳ ಹಿಂದಿನ ಲೀಕ್ ಔಟ್…*

ಡಾ.ಮೈತ್ರಿಯವರು ಶಿವಮೊಗ್ಗ ಉಪವಿಭಾಗಾಧಿಕಾರಿಗಳಾಗಿ ಬಂದ ಮೇಲೆ ನಡೆಯುತ್ತಿರುವ ಆಹಾರ ಸಂಬಂಧಿತ ಅನಿರೀಕ್ಷಿತ ದಾಳಿಗಳು ಗಮನ ಸೆಳೆಯುತ್ತಿವೆ.
ಡಾ.ಮೈತ್ರಿ ಮೂಲತಃ ವೈದ್ಯರೂ ಆಗಿರುವುದರಿಂದ ಆರೋಗ್ಯ ಎಂಬುದು ಎಷ್ಟು ಮುಖ್ಯ ಎಂಬ ಬಗ್ಗೆ ಅವರ ಕಾಳಜಿ ಮೆಚ್ಚಬೇಕಾದ್ದೇ…
ಇಲ್ಲಿ ಡಾ.ಮೈತ್ರಿಯವರು ಅನಿರೀಕ್ಷಿತ ದಾಳಿಗೆ ಕರೆದೊಯ್ಯುತ್ತಿರುವ ತಂಡ ನಂಬಿಕೆಗೆ ಅರ್ಹವೇ? ಎಂಬ ಅನುಮಾನದ ಜೊತೆ ಮತ್ತೊಂದು ಪ್ರಮುಖ ಅಂಶದ ಕಡೆ ಗಮನ ಕೊಡಬೇಕಿದೆ.
ದಾಳಿ ಮಾಡುವ ಹೋಟೆಲ್, ಅಂಗಡಿ, ಜ್ಯೂಸ್ ಸೆಂಟರ್ ಅಥವಾ ಸ್ಥಳಗಳು ದಾಳಿಗಿಂತ ಮುಂಚೆಯೇ ಮಾಧ್ಯಮದವರಿಗೆ ತಿಳಿಸುವ ಅಗತ್ಯವಿದೆಯೇ? ಇದು ಪ್ರಚಾರದ ತಂತ್ರವೇ? ಅಥವಾ ಮೊದಲೇ ದಾಳಿಯ ಮಾಹಿತಿ ಲೀಕ್ ಮಾಡುವ ರಹಸ್ಯ ರಹದಾರಿಯೇ?
ತಾಜ್ ಮತ್ತಿತರೆ ಹೋಟೆಲ್ ಗಳ ಮೇಲಿನ ಡಾ.ಮೈತ್ರಿಯವರ ಅನಿರೀಕ್ಷಿತ ದಾಳಿಯ ವಿಚಾರ ವಾರದ ಮೊದಲೇ ಅಲ್ಲಲ್ಲಿ ಕಟ್ಟೆ ಪಂಚಾಯ್ತಿ ಚರ್ಚೆಯ ವಿಚಾರವಾಗಿತ್ತು. ನನಗೂ ತಾಜ್ ಮೇಲೆ ದಾಳಿ ಆಗೋದಿದೆ.ಅಲ್ಲಿ ದನದ ಮಾಂಸ ಮಿಕ್ಸ್ ಮಾಡ್ತಾರೆ ಅಂತ ಮೇಡಂ ದಾಳಿ ಮಾಡ್ತಾರೆ…ದೂರು ಬಂದಿದೆ ಅಂತ ಹೇಳಿ ವಾರವೂ ಆಗಿಲ್ಲ…ಸಂಜೆ ದಾಳಿಯ ಮುಂಚೆಯೇ ವಾರ್ತಾ ಇಲಾಖೆಯಿಂದ ತಾಜ್ ಹೋಟೆಲ್ ಮೇಲೆ ಡಾ.ಮೈತ್ರಿಯವರು ದಾಳಿ ಮಾಡಲಿದ್ದಾರೆಂಬ ವಿಚಾರದ ಮೆಸೇಜ್ ಬಂತು!
ಹೀಗೆ, ದಾಳಿಗಿಂತ ಮೊದಲೇ ದಾಳಿಯ ಮಾಹಿತಿ ಬಹಿರಂಗವಾಗಿಬಿಟ್ಟರೆ ದಾಳಿಗೊಳಗಾಗಲಿರುವವರು ದಾಳಿ ಆಗುವವರೆಗೆ ಸುಮ್ಮನಿರುವರೇ?ಇದನ್ನು ಉಪವಿಭಾಗಾಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕಿದೆ.
ಇನ್ನು ಮಣ್ಣು, ಮರಳು ಮಾಫಿಯಾ ಕೂಡ ಶಿವಮೊಗ್ಗದಲ್ಲಿ ಜೀವಂತವಿದೆ. ಅದರ ಮೇಲೆ ಮೂರನೇ ಕಣ್ಣು ಬೀರಿ ದಾಳಿಗಳನ್ನು ಮಾಡಿದರೆ ಕೋಟಿ ಕೋಟಿ ಮೌಲ್ಯದ ಸರ್ಕಾರಿ ಆಸ್ತಿಯೂ ಉಳಿಯಲಿದೆ.
ಡಾ. ಮೈತ್ರಿಯವರು ದಾಳಿ ಮಾಡಿ ಹೋದ ನಂತರ ಏನಾಗುತ್ತಿದೆ? ಅದರ ಮಾಹಿತಿಯನ್ನು ಉಪವಿಭಾಗಾಧಿಕಾರಿ ಡಾ.ಮೈತ್ರಿಯವರಾಗಲೀ, ಅವರ ಜೊತೆ ದಾಳಿಯಲ್ಲಿ ಜೊತೆಯಾಗುತ್ತಿರುವ ಸಹ ಅಧಿಕಾರಿ, ಸಿಬ್ಬಂದಿಗಳಾಗಲೀ ಬಹಿರಂಗ ಪಡಿಸುತ್ತಿಲ್ಲ.ಮಾಧ್ಯಮದ ಜನ ಕೂಡ ಫಾಲೋ ಅಪ್ ಮಾಡ್ತಿಲ್ಲ…
ಮುಂದೇನು?


